ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾಡ್ಜ್‌ಬಾಲ್ ಚಾಂಪಿಯನ್‌ಷಿಪ್‌: ಮಂಡ್ಯ, ದಕ್ಷಿಣ ಕನ್ನಡ ತಂಡಗಳಿಗೆ ಪ್ರಶಸ್ತಿ

Published : 4 ಸೆಪ್ಟೆಂಬರ್ 2023, 16:16 IST
Last Updated : 4 ಸೆಪ್ಟೆಂಬರ್ 2023, 16:16 IST
ಫಾಲೋ ಮಾಡಿ
Comments

ಬೆಂಗಳೂರು: ಮಂಡ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ತಂಡಗಳು ಕರ್ನಾಟಕ ರಾಜ್ಯ ಡಾಡ್ಜ್‌ಬಾಲ್ ಸಂಸ್ಥೆಯ ಆಶ್ರಯದಲ್ಲಿ ನಡೆದ 2ನೇ ರಾಜ್ಯ ಮಟ್ಟದ ಸೀನಿಯರ್ ಡಾಡ್ಜ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದವು.

ಬೆಂಗಳೂರಿನ ಯಲಚೇನಹಳ್ಳಿ ಟ್ರಾನ್ಸ್‌ಸೆಂಡ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಆವರಣದಲ್ಲಿ ಭಾನುವಾರ ನಡೆದ ಪುರುಷರ ಫೈನಲ್‌ ಪಂದ್ಯದಲ್ಲಿ ಮಂಡ್ಯ ತಂಡ 3–2ರಿಂದ ಹಾಸನ ತಂಡವನ್ನು ಮಣಿಸಿತು. ಸೆಮಿಫೈನಲ್‌ನಲ್ಲಿ ಹಾಸನ ತಂಡ 3–2ರಿಂದ ದಕ್ಷಿಣ ಕನ್ನಡ ತಂಡವನ್ನು, ಮಂಡ್ಯ ತಂಡ 3–2ರಿಂದ ಟ್ರಾನ್‌ಸೆಂಡ್ ಡಾಡ್ಜ್‌ಬಾಲ್ ಅಕಾಡೆಮಿ ತಂಡವನ್ನು ಮಣಿಸಿತ್ತು.

ಮಹಿಳೆಯರ ಫೈನಲ್‌ನಲ್ಲಿ ದಕ್ಷಿಣ ಕನ್ನಡ ತಂಡವು ಮಂಡ್ಯ ತಂಡವನ್ನು 3–2ರಿಂದ ಮಣಿಸಿತು. ಸೆಮಿಫೈನಲ್‌ನಲ್ಲಿ ದಕ್ಷಿಣ ಕನ್ನಡ ತಂಡವು 2–1ರಿಂದ ಭಾರತೀನಗರ ಡಾಡ್ಜ್‌ಬಾಲ್ ಅಕಾಡೆಮಿ ತಂಡವನ್ನು, ಮಂಡ್ಯ ತಂಡವು 3–0ಯಿಂದ ಟ್ರಾನ್‌ಸೆಂಡ್ ಡಾಡ್ಜ್‌ಬಾಲ್ ಅಕಾಡೆಮಿ ತಂಡವನ್ನು ಸೋಲಿಸಿತ್ತು.

ಫೈನಲ್‌ ಪಂದ್ಯದ ಶ್ರೇಷ್ಠ ಆಟಗಾರನಾಗಿ ಮಂಡ್ಯ ತಂಡದ ಅಜಿತ್‌, ಶ್ರೇಷ್ಠ ಆಟಗಾರ್ತಿಯಾಗಿ ಮಂಡ್ಯ ತಂಡದ ಪೂರ್ವಿ, ಟೂರ್ನಿಯ ಶ್ರೇಷ್ಠ ಆಟಗಾರನಾಗಿ ಹಾಸನದ ಮಧು, ಆಟಗಾರ್ತಿಯಾಗಿ ದಕ್ಷಿಣ ಕನ್ನಡದ ಕೆ.ಪವಿತ್ರಾ ಹೊರಹೊಮ್ಮಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT