ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಮಟ್ಟದ PU ಬಾಲ್‌ ಬ್ಯಾಡ್ಮಿಂಟನ್‌ ಟೂರ್ನಿ: ದ.ಕ ಎರಡೂ ತಂಡಗಳು ಸೆಮಿಫೈನಲ್‌ಗೆ

Published 9 ಡಿಸೆಂಬರ್ 2023, 18:31 IST
Last Updated 9 ಡಿಸೆಂಬರ್ 2023, 18:31 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಇಲ್ಲಿನ ವಿಜ್ಞಾನ್‌ ಪದವಿಪೂರ್ವ ಕಾಲೇಜು ಸಹಯೋಗದಲ್ಲಿ ಶನಿವಾರ ಪುನೀತ್‌ ರಾಜ್‌ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಆರಂಭವಾದ ರಾಜ್ಯಮಟ್ಟದ ಪದವಿಪೂರ್ವ ಕಾಲೇಜು ಬಾಲ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಬಾಲಕರ ಮತ್ತು ಬಾಲಕಿಯರ ಎರಡೂ ವಿಭಾಗಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ತಂಡಗಳು ಸೆಮಿಫೈನಲ್ ಪ್ರವೇಶಿಸಿವೆ.

ಬಾಲಕರ ವಿಭಾಗದಲ್ಲಿ ದಕ್ಷಿಣ ಕನ್ನಡದ ಜೊತೆಗೆ ಕೊಪ್ಪಳ, ಬಾಗಲಕೋಟೆ ಮತ್ತು ಚಿಕ್ಕಮಗಳೂರು ತಂಡಗಳು ಸೆಮಿಫೈನಲ್ ‍ಪ್ರವೇಶಿಸಿವೆ. ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡದ ಜೊತೆಗೆ ಮೈಸೂರು, ಹಾಸನ ಮತ್ತು ಉತ್ತರ ಕನ್ನಡ ತಂಡಗಳು ಸೆಮಿಫೈನಲ್‌ ಪ್ರವೇಶಿಸಿವೆ.

ಬಾಲಕರ ಕ್ವಾರ್ಟರ್‌ ಫೈನಲ್‌ನಲ್ಲಿ ದಕ್ಷಿಣ ಕನ್ನಡ ತಂಡ 2:0 ಸೆಟ್‌ಗಳಿಂದ ಕೊಡಗು ತಂಡವನ್ನು, ಕೊಪ್ಪಳ ತಂಡವು 2:1ರಿಂದ ಮೈಸೂರು ತಂಡವನ್ನು ಮಣಿಸಿತು. ಬಾಗಲಕೋಟೆ ತಂಡವು 2:1ರಿಂದ ವಿಜಯನಗರ ತಂಡವನ್ನು ಮತ್ತು ಚಿಕ್ಕಮಗಳೂರು ತಂಡವು 2:0ರಿಂದ ಬೀದರ್ ತಂಡವನ್ನು ಸೋಲಿಸಿತು.

ಬಾಲಕಿಯರ ಕ್ವಾರ್ಟರ್ ಫೈನಲ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆ ತಂಡವು 2:0 ಸೆಟ್‌ಗಳಿಂದ ಬೆಂಗಳೂರು ದಕ್ಷಿಣ ತಂಡವನ್ನು, ಮೈಸೂರು ತಂಡವು 2:0ರಿಂದ ಚಿಕ್ಕಮಗಳೂರು ತಂಡವನ್ನು ಮಣಿಸಿತು. ಹಾಸನ ತಂಡವು 2:0ರಿಂದ ಹಾವೇರಿ ತಂಡವನ್ನು ಮತ್ತು ಉತ್ತರ ಕನ್ನಡ ತಂಡವು 2:0ರಿಂದ ಶಿವಮೊಗ್ಗ ತಂಡವನ್ನು ಸೋಲಿಸಿತು.

ರಾಜ್ಯಮಟ್ಟದ ಪಿಯು ಬಾಲ್‌ ಬ್ಯಾಡ್ಮಿಂಟನ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ ಉತ್ತರ ಕನ್ನಡದ ಬಾಲಕಿಯರ ತಂಡ

ರಾಜ್ಯಮಟ್ಟದ ಪಿಯು ಬಾಲ್‌ ಬ್ಯಾಡ್ಮಿಂಟನ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ ಉತ್ತರ ಕನ್ನಡದ ಬಾಲಕಿಯರ ತಂಡ

  –ಪ್ರಜಾವಾಣಿ ಚಿತ್ರ

ಭಾನುವಾರ ಸೆಮಿಫೈನಲ್‌ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ. 33 ಶೈಕ್ಷಣಿಕ ಜಿಲ್ಲೆಗಳ 660ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT