ಹೆಪ್ಟಥ್ಲಾನ್ನಲ್ಲಿ ಭಾರತಕ್ಕೆ ಮೊದಲ ಚಿನ್ನ ಗಳಿಸಿಕೊಟ್ವ ಸ್ವಪ್ನಾ ಬರ್ಮನ್ ಅವರ ಎರಡೂ ಕಾಲುಗಳಲ್ಲಿ ಆರು ಬೆರಳುಗಳು. ಹೀಗಾಗಿ ಶೂ ಹಾಕುವುದು ಅವರಿಗೆ ಅತ್ಯಂತ ಪ್ರಯಾಸ. ಶಾಶ್ವತವಾದ ಈ ಸಮಸ್ಯೆಯ ಜೊತೆಯಲ್ಲಿ ಮೂರು ದಿನಗಳಿಂದ ಕಾಡಿದ ತೀವ್ರ ಹಲ್ಲು ನೋವು 21 ವರ್ಷದ ಸ್ವಪ್ನಾ ಅವರನ್ನು ಹೈರಾಣಾಗಿಸಿತ್ತು.

‘ಅತಿಯಾಗಿ ಚಾಕೊಲೇಟ್ ತಿನ್ನುತ್ತಿದ್ದೆ. ಹೀಗಾಗಿ ಹಲ್ಲು ನೋವು ಕಾಡತೊಡಗಿತು. ಕೂಟದಲ್ಲಿ ಎಲ್ಲ ಸ್ಪರ್ಧೆಗಳನ್ನು ಮುಗಿಸಲು ಸಾಧ್ಯವಾಗದು ಎಂಬ ಆತಂಕ ಕಾಡುತ್ತಿತ್ತು. ಆದರೆ ಛಲ ಬಿಡದೆ ಮುನ್ನುಗ್ಗಲು ಶ್ರಮಿಸಿದೆ’ ಎಂದು ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಸ್ವಪ್ನಾ ಹೇಳಿದರು.

‘ಕಾಲುಗಳಲ್ಲಿ ಆರು ಬೆರಳು ಇದ್ದ ಕಾರಣ ಸಾಮಾನ್ಯ ಶೂಗಳನ್ನು ಹಾಕುವುದು ತೀರಾ ಕಷ್ಟ ಆಗುತ್ತಿತ್ತು. ತರಬೇತಿ ಮತ್ತು ಸ್ಪರ್ಧೆಗಳ ಸಂದರ್ಭದಲ್ಲಿ ಇದು ತುಂಬ ಕಷ್ಟ ಕೊಡುತ್ತಿತ್ತು. ಆರು ಬೆರಳಿಗೆ ಹೊಂದಿಕೆಯಾಗುವ ಶೂ ಲಭಿಸಿದರೆ ಉತ್ತಮ ಸಾಮರ್ಥ್ಯ ತೋರಲು ಸಾಧ್ಯವಾಗಲಿದೆ’ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.