ಪ್ಯಾರಿಸ್: ಬೊಟ್ಸ್‌ವಾನಾದ ಲೆಟ್ಸಿಲೆ ಟೆಬೊಗೊ ಅವರು ಒಲಿಂಪಿಕ್ 200 ಮೀ.ಓಟದ ಸ್ಪರ್ಧೆಯಲ್ಲಿ ಚಿನ್ನ ಪದಕ ಗೆದ್ದ ಆಫ್ರಿಕನ್ ಅಥ್ಲೀಟ್ ಎಂಬ ಹೆಗ್ಗಳಿಕಗೆ ಪಾತ್ರವಾದರು.
ಒಲಿಂಪಿಕ್ ಸ್ಟ್ರಿಂಟ್‌ನಲ್ಲಿ ಎರಡನೇ ಚಿನ್ನದ ಪದಕ ಪಡೆಯುವ ನೊವಾ ಲೈಲ್ಸ್ ಅವರ ಕನಸನ್ನು ಟೆಬೊಗೊ ಭಗ್ನಗೊಳಿಸಿದರು.
21 ವರ್ಷ ವಯಸ್ಸಿನ ಟೆಬೊಗೊ ಅವರು 19.45 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಅಮೆರಿಕದ ಕೆನ್ನಿ ಬೆಡ್ನಾರೆಕ್ ಅವರು 19.62 ಸೆಕೆಂಡ್‌ಗಳಲ್ಲಿ ತಲುಪಿ ಬೆಳ್ಳಿ ಮತ್ತು ಲೈಲ್ಸ್ (19.70 ಸೆಕೆಂಡು) ಕಂಚಿನ ಪದಕ ಪಡೆದರು.
1908ರ ಲಂಡನ್ ಕೂಟದಲ್ಲಿ ರೆಗ್ಗಿ ವಾಕರ್ 100 ಮೀ. ವೇಗದ ಓಟದ ಪ್ರಶಸ್ತಿ ಗೆದ್ದ ಆಫ್ರಿಕಾದ ಏಕೈಕ ವ್ಯಕ್ತಿಯಾಗಿದ್ದಾರೆ.
ಇತ್ತೀಚೆಗಷ್ಟೆ 100 ಮೀ. ಓಟದಲ್ಲಿ ಚಿನ್ನ ಗೆದ್ದಿದ್ದ ಲೈಲ್ಸ್‌ಗೆ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು.