ಬ್ಯಾಂಕಾಕ್: ಲಯದ ಅಲೆಯಲ್ಲಿ ತೇಲುತ್ತಿರುವ ಭಾರತದ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ ಅವರು ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಆ ಮೂಲಕ ಬಿಡಬ್ಲ್ಯುಎಫ್ ಸೂಪರ್ 500 ಟೂರ್ನಿಯೊಂದರ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಜೋಡಿ ಎಂಬ ಸಾಧನೆಗೆ ಪಾತ್ರವಾಯಿತು.

ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ರಣಕಿರೆಡ್ಡಿ– ಚಿರಾಗ್‌ಶೆಟ್ಟಿ 22–20, 22–24, 21–9 ಗೇಮ್‌ಗಳಿಂದ ಕೊರಿಯಾದ ಕೊ ಸಂಗ್ ಹ್ಯುನ್– ಶಿನ್ ಬೇಕ್ ಚಿಯೊಲ್ ಜೋಡಿಯ ಎದುರು ಜಯಭೇರಿ ಮೊಳಗಿಸಿತು. 63 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಪ್ರಬಲ ಹೋರಾಟ ಕಂಡುಬಂತು.

2019ರ ಋತುವಿನಲ್ಲಿ ಮೊದಲ ಬಾರಿ ಈ ಜೋಡಿ ಟೂರ್ನಿಯೊಂದರ ಫೈನಲ್ ತಲುಪಿದೆ. ಶ್ರೇಯಾಂಕರಹಿತ ಭಾರತದ ಜೋಡಿ ಭಾನುವಾರ ನಡೆಯುವ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಚೀನಾದ ಲಿ ಜುನ್ ಹುಯ್ – ಲಿವು ಯು ಚೆನ್ ವಿರುದ್ಧ ಸೆಣಸಲಿದೆ.

ರಚನೊಕ್ ಪಾರಮ್ಯ:ಥಾಯ್ಲೆಂಡ್ ಆಟಗಾರ್ತಿ ರಚನೊಕ್ ಇಂಟನಾನ್ ತಮ್ಮದೇ ದೇಶದ ಪಾರ್ನ್‌ಪವಿ ಚೊಚುವಾಂಗ್ ಅವರಿಗೆ ಸೋಲುಣಿಸಿ ಮಹಿಳಾ ಸಿಂಗಲ್ಸ್ ಫೈನಲ್ ತಲುಪಿದರು. 23–21, 17–21, 21–19ರಿಂದ ರಚನೊಕ್ ಗೆಲುವಿನ ನಗೆ ಬೀರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.