ಟೋಕಿಯೊ: ಒಲಿಂಪಿಕ್ಸ್ನಲ್ಲಿ ಭಾಗವಹಿಸುವುದು ಪ್ರತಿಯೊಬ್ಬ ಕ್ರೀಡಾಪಟುವಿನ ಜೀವನ ಅಭಿಲಾಷೆಯಾಗಿರುತ್ತದೆ. ಹಾಗಿರಬೇಕೆಂದರೆ ಸೆಮಿಫೈನಲ್ ಪ್ರವೇಶಿಸಿದ ಬಾಕ್ಸರ್ ಅತಿಯಾದ ಸಂಭ್ರಮಾಚರಣೆಯ ವೇಳೆ ಕಾಲಿಗೆ ಗಾಯಗೊಂಡ ಪರಿಣಾಮ ಒಲಿಂಪಿಕ್ಸ್ ಕನಸು ಭಗ್ನಗೊಂಡಿರುವ ಘಟನೆ ಟೋಕಿಯೊದಿಂದ ವರದಿಯಾಗಿದೆ.

ಟೋಕಿಯೊ ಒಲಿಂಪಿಕ್ಸ್ನಲ್ಲಿ ಪುರುಷರ ಬಾಕ್ಸಿಂಗ್ ವಿಭಾಗದಲ್ಲಿ ರಿಂಗ್ಗಿಳಿದಿದ್ದ ಐರ್ಲೆಂಡ್ನ ಏಡನ್ ವಾಲ್ಷ್, ಕ್ವಾರ್ಟರ್ಫೈನಲ್ನಲ್ಲಿ ಅಮೋಘ ಪ್ರದರ್ಶನ ನೀಡಿ ಮಾರಿಷನ್ನ ಮೆರ್ವೆನ್ ಕ್ಲೇರ್ ವಿರುದ್ಧ 4-1ರ ಅಂತರದಲ್ಲಿ ಗೆಲುವು ದಾಖಲಿಸಿದರು.

ಇದನ್ನೂ ಓದಿ:Tokyo Olympics | ಐದು ಚಿನ್ನದ ಪದಕ ಬಾಚಿದ ಅಮೆರಿಕದ ಈಜುಪಟು ಕಾಲೆಬ್ ಡ್ರೆಸೆಲ್

ಆದರೆ ವಿಜಯದ ಅಮಿತೋತ್ಸಾಹದಲ್ಲಿ ಮೈಮರೆತ ಬಾಕ್ಸರ್ ಕುಣಿದು ಕುಪ್ಪಳಿಸಿದರು. ಈ ವೇಳೆ ಹಿಮ್ಮಡಿಗೆ ಗಾಯವಾಗಿದೆ. ಇದರಿಂದಾಗಿ ಸೆಮಿಫೈನಲ್ನಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ.

ಅತ್ತ ಇದರ ಸ್ಪಷ್ಟ ಲಾಭ ಪಡೆದ ಬ್ರಿಟನ್ನ ಪ್ಯಾಟ್ ಮ್ಯಾಕೋರ್ಮೆಕ್ ಫೈನಲ್ಗೆ ಲಗ್ಗೆಯಿಟ್ಟಿದ್ದಾರೆ.

ಬಳಿಕ ಏಡನ್ ಅವರನ್ನು ವೀಲ್ ಚೇರ್ ಸಹಾಯದಿಂದ ಹೊರಕ್ಕೆ ಕರೆದುಕೊಂಡು ಹೋಗಲಾಯಿತು ಎಂದು ಐರ್ಲೆಂಡ್ ಮಾಧ್ಯಮಗಳು ವರದಿ ಮಾಡಿವೆ. ಹಾಗಿದ್ದರೂ ಸೆಮಿಫೈನಲ್ ಸಾಧನೆ ಮಾಡಿರುವ ಏಡನ್ ಕನಿಷ್ಠ ಕಂಚಿನ ಪದಕ ಖಾತ್ರಿಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.