ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ವಿಶ್ವದ ನಂ.2 ಬಿಲ್ಲುಗಾರನನ್ನು ಮಣಿಸಿದ ಭಾರತದ ಪ್ರವೀಣ್ ಜಾಧವ್, ಮುಂದಿನ ಹಂತದಲ್ಲಿ ವಿಶ್ವದ ಅಗ್ರ ಬಿಲ್ಲುಗಾರನ ಎದುರು ಸೋಲು ಅನುಭವಿಸುವ ಮೂಲಕ ತಮ್ಮ ಅಭಿಯಾನವನ್ನು ಕೊನೆಗೊಳಿಸಿದ್ದಾರೆ.

ಆರ್ಚರಿ ಪುರುಷರ ವೈಯಕ್ತಿಕ ವಿಭಾಗದ 1/32 ಎಲಿಮಿನೇಷನ್ಸ್ ಸುತ್ತಿನಲ್ಲಿ ಕೊರಿಯಾದ ವಿಶ್ವ ನಂ.2 ರ‍್ಯಾಂಕ್‌ನ ಗಾಲ್ಸನ್ ಬಜಾರ್ಜಪೋವ್ ವಿರುದ್ಧ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ 6-0ರಿಂದ ನೇರ ಸೆಟ್‌ಗಳಲ್ಲಿ ಗೆಲುವು ದಾಖಲಿಸಿ ಜಾಧವ್ 16ರ ಸುತ್ತಿಗೆ ಲಗ್ಗೆಯಿಟ್ಟರು.

ಇದನ್ನೂ ಓದಿ:Tokyo Olympics ಆರ್ಚರಿ | ಅನುಭವಿ ತಾರೆ ತರುಣ್ದೀಪ್ ರಾಯ್ ಪಯಣ ಅಂತ್ಯ

ಆದರೆ 1/16 ಎಲಿಮಿನೇಷನ್ಸ್ ಸುತ್ತಿನಲ್ಲೂ ಜಾಧವ್‌ಗೆ ಮತ್ತೊಂದು ಕಠಿಣ ಸವಾಲು ಎದುರಾಗಿತ್ತು. ವಿಶ್ವ ನಂ.1 ರ‍್ಯಾಂಕ್‌ನ ಅಮೆರಿಕದ ಬ್ರಾಡಿ ಎಲ್ಲಿಸನ್ ವಿರುದ್ಧ ಮತ್ತದೇ ಗರಿಷ್ಠ ಮಟ್ಟದ ನಿರ್ವಹಣೆ ನೀಡಲು ಸಾಧ್ಯವಾಗಲಿಲ್ಲ. ಪರಿಣಾಮ 0-6ರ ಅಂತರದಲ್ಲಿ ಪರಾಭವಗೊಂಡರು.

ತಂಡ ವಿಭಾಗದಲ್ಲಿ ಪ್ರಭಾವಿ ಎನಿಸಿರುವ 25 ವರ್ಷದ ಪ್ರವೀಣ್, ವೈಯಕ್ತಿಕ ವಿಭಾಗದಲ್ಲೂ ದೇಶದ ಭರವಸೆಯಾಗಿದ್ದರು. ಆದರೆ ಎಲಿಮಿನೇಷನ್ಸ್ ಹಂತದಲ್ಲೇ ಅಗ್ರ ಬಿಲ್ಲುಗಾರರಿಂದ ಕಠಿಣ ಪೈಪೋಟಿ ಎದುರಾಗಿರುವುದು ಹಿನ್ನೆಡೆಗೆ ಕಾರಣವಾಯಿತು. ಇದರಿಂದಾಗಿ ಪದಕದ ಆಸೆ ಕಮರಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.