ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics: ಭಾರತ; ಮಿಶ್ರ ಶೂಟಿಂಗ್‌, ಬ್ಯಾಡ್ಮಿಂಟನ್‌, ಟಿ.ಟಿಯಲ್ಲಿ ನಿರಾಸೆ

ಅಕ್ಷರ ಗಾತ್ರ

ಟೋಕಿಯೊ: ಮಿಶ್ರಏರ್‌ ರೈಫಲ್‌ ಶೂಟಿಂಗ್‌ ಹಾಗೂ ಬ್ಯಾಡ್ಮಿಂಟನ್‌ನ ಪುರುಷರ ಡಬಲ್ಸ್‌ನಲ್ಲಿ ಭಾರತಕ್ಕೆ ನಿರಾಸೆ ಉಂಟಾಗಿದೆ. ಪದಕದ ಭರವಸೆ ಮೂಡಿಸಿದ್ದ ಈ ಎರಡು ವಿಭಾಗಗಳಲ್ಲಿ ಭಾರತೀಯ ಕ್ರೀಡಾಪಟುಗಳು ಸೋಲು ಕಂಡಿದ್ದಾರೆ.

ಮಿಶ್ರ ಶೂಟಿಂಗ್‌ 10 ಮೀಟರ್‌ ಏರ್‌ ರೈಫಲ್‌ ವಿಭಾಗದ ಅರ್ಹತಾ ಸುತ್ತಿನಲ್ಲಿಇಳವೆನ್ನಿಲ ವಾಳರಿವನ್, ದಿವ್ಯಾಂಶು ಸಿಂಗ್‌ ಹಾಗೂ ದೀಪಕ್‌ ಕುಮಾರ್‌, ಅಂಜುಮ್‌ ಮೌದ್ಗಿಲ್‌ ಅವರು ಎರಡನೇ ಹಂತ ಪ್ರವೇಶಿಸಲು ವಿಫಲರಾದರು. ಪದಕದ ಭರವಸೆ ಮೂಡಿಸಿದ್ದ ಈ ಜೋಡಿಗಳು ಅರ್ಹತಾ ಸುತ್ತಿನಲ್ಲಿ ಎಡವಿದರು.

ಒಲಿಂಪಿಕ್ಸ್‌ ಬ್ಯಾಡ್ಮಿಂಟನ್‌ನ ಪುರುಷರ ಡಬಲ್ಸ್ ವಿಭಾಗದ ಮೂರನೇಪಂದ್ಯದಲ್ಲಿ ಚಿರಾಗ್–ಸಾತ್ವಿಕ್ಇಂಗ್ಲೆಂಡ್‌ನ ಬೆನ್ ಲೇನ್ ಮತ್ತು ಸೀನ್ ವೆಂಡಿ ವಿರುದ್ಧ ಗೆಲುವು ದಾಖಲಿಸಿದರೂ ಮುಂದಿನ ಹಂತಕ್ಕೆ ಪ್ರವೇಶ ಪಡೆಯುವಲ್ಲಿ ವಿಫಲರಾದರು. ನಿನ್ನೆ ಈ ಜೋಡಿ ಇಂಡೋನೆಷ್ಯಾ ವಿರುದ್ಧ ಸೋಲು ಕಂಡಿತ್ತು.

ಭಾರತದ ಭರವಸೆಯಾಗಿರುವ ಅನುಭವಿ ಟೇಬಲ್ ಟೆನಿಸ್ (ಟಿ.ಟಿ)ಪಟು ಶರತ್ ಕಮಲ್, ಮೂರನೇ ಸುತ್ತಿನಲ್ಲಿ ನಿರಾಸೆ ಅನುಭವಿಸಿದರು.

ಶರತ್ ಅವರು ರಿಯೋ ಒಲಿಂಪಿಕ್ಸ್ ಚಾಂಪಿಯನ್ ಮಾ ಲಾಂಗ್ ಎದುರು7-11 11-8 11-13 4-11 4-11 ನೇರ ಸೆಟ್‌ಗಳಿಂದ ಸೋತರು. ಆ ಮೂಲಕ ಅವರ ಸಿಂಗಲ್ಸ್‌ ಹೋರಾಟ ಕೊನೆಗೊಂಡಿತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT