ನವದೆಹಲಿ: ಟ್ರಿಪಲ್ ಜಂಪರ್ ಪ್ರವೀಣ್ ಚಿತ್ರವೇಲ್ ಮತ್ತು ಜಾವೆಲಿನ್ ಥ್ರೋ ಸ್ಪರ್ಧಿ ರೋಹಿತ್ ಯಾದವ್ ಅವರು ಏಷ್ಯನ್ ಆಥ್ಲೆಟಿಕ್ಸ್ನಿಂದ ಹಿಂದೆ ಸರಿದಿದ್ದು, ಭಾರತಕ್ಕೆ ಹಿನ್ನಡೆ ಉಂಟುಮಾಡಿದೆ.

ಏಷ್ಯನ್ ಚಾಂಪಿಯನ್ಷಿಪ್ ಬ್ಯಾಂಕಾಂಕ್ನಲ್ಲಿ ಬುಧವಾರ ಆರಂಭವಾಗಲಿದ್ದು, ಭಾರತ ತಂಡದ ಸದಸ್ಯರು ಶನಿವಾರ ರಾತ್ರಿ ಬ್ಯಾಂಕಾಂಕ್ಗೆ ಪ್ರಯಾಣಿಸಿದರು. ಯಾದವ್ ಮತ್ತು ಚಿತ್ರವೇಲ್ ತಂಡದ ಜತೆ ತೆರಳಲಿಲ್ಲ. ಇಬ್ಬರೂ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ್ದು ಇದಕ್ಕೆ ಕಾರಣ.

ಲಾಂಗ್ಜಂಪರ್ ಜೆಸ್ವಿನ್ ಆಲ್ಡ್ರಿನ್ ಕೂಡಾ ಹಿಂದೆ ಸರಿದಿದ್ದಾರೆ. ಜೂನ್ 30 ರಂದು ಲೂಸಾನ್ನಲ್ಲಿ ನಡೆದಿದ್ದ ಡೈಮಂಡ್ ಲೀಗ್ ಕೂಟದಲ್ಲಿ ಅವರು ಫಿಟ್ನೆಸ್ ಸಮಸ್ಯೆಯಿಂದ ಪಾಲ್ಗೊಂಡಿರಲಿಲ್ಲ.

ಯಾದವ್ ಅವರು ಫೆಡರೇಷನ್ ಕಪ್ ಮತ್ತು ಅಂತರ ರಾಜ್ಯ ಅಥ್ಲೆಟಿಕ್ ಕೂಟದಲ್ಲಿ ಕ್ರಮವಾಗಿ 83.40 ಮೀ. ಹಾಗೂ 83.28 ಮೀ. ಸಾಧನೆಯೊಂದಿಗೆ ಚಿನ್ನ ಗೆದ್ದಿದ್ದರು. ನೀರಜ್ ಚೋಪ್ರಾ ಅನುಪಸ್ಥಿತಿಯಲ್ಲಿ ಯಾದವ್ ಅವರು ಭಾರತದ ಪದಕದ ಭರವಸೆ ಎನಿಸಿದ್ದರು. ಇದೀಗ ಜಾವೆಲಿನ್ ಥ್ರೋನಲ್ಲಿ ಡಿ.ಪಿ.ಮನು ಮಾತ್ರ ಭಾಗವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.