ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ದಿನ ಕರ್ನಾಟಕ ಪಾರಮ್ಯ

ಮಲ್ಪೆ: ಸ್ಟ್ಯಾಂಡಿಂಗ್ ಪ್ಯಾರಾ ವಾಲಿಬಾಲ್ ಸೀನಿಯರ್ ರಾಷ್ಟ್ರೀಯ ಚಾಂಪಿಯನ್‌ಷಿಪ್‌
Last Updated 27 ಸೆಪ್ಟೆಂಬರ್ 2018, 19:44 IST
ಅಕ್ಷರ ಗಾತ್ರ

ಉಡುಪಿ: ಮಲ್ಪೆ ಬೀಚ್‌ನಲ್ಲಿ ಗುರುವಾರ ಆರಂಭವಾಗಿರುವ ಸ್ಟ್ಯಾಂಡಿಂಗ್ ಪ್ಯಾರಾ ವಾಲಿಬಾಲ್ ಸೀನಿಯರ್ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡ ಪಾರಮ್ಯ ಮೆರೆಯಿತು. ರಾಜ್ಯ ತಂಡ ಮೊದಲ ದಿನ ಆಡಿದ ಮೂರೂ ಪಂದ್ಯಗಳಲ್ಲಿ ಗೆದ್ದಿತು.

ರಾಘವೇಂದ್ರ ನಾಯಕ್ ನಾಯಕತ್ವದ ಕರ್ನಾಟಕ ‘ಎ’ ತಂಡವು ಪಶ್ಚಿಮ ಬಂಗಾಳ ವಿರುದ್ಧದ ಪಂದ್ಯದಲ್ಲಿ 9–15, 15–14, 15–9 ಪಾಯಿಂಟ್‌ಗಳಿಂದ ಗೆದ್ದಿತು. ವಿಜಯ್‌ರಾವ್ ಶಿಂಧೆ ನಾಯಕತ್ವದ ಕರ್ನಾಟಕ ‘ಬಿ’ ತಂಡ ಕೇರಳ ಎದುರಿನ ಪಂದ್ಯದಲ್ಲಿ 15–4, 15–3 ಸೆಟ್‌ಗಳಿಂದ ಜಯ ಗಳಿಸಿತು. ಶಿಂಧೆ ಜಾಣ್ಮೆಯ ಆಟದ ಮೂಲಕ ಗಮನ ಸೆಳೆದರು.

ಕೇರಳ ವಿರುದ್ಧದ ಮತ್ತೊಂದು ಪಂದ್ಯದಲ್ಲೂ ‘ಬಿ’ ತಂಡ ಉತ್ತಮ ಸಾಮರ್ಥ್ಯ ತೋರಿ 15–6, 15–14 ಸೆಟ್‌ಗಳಿಂದ ಜಯ ಗಳಿಸಿತು.

ಇತರ ಪಂದ್ಯದಗಳಲ್ಲಿ ಗೋವಾ ವಿರುದ್ಧ ಆಂಧ್ರಪ್ರದೇಶ 15–6, 15–7ರಿಂದ, ಗೋವಾ ವಿರುದ್ಧ ತೆಲಂಗಾಣ 15–6, 15–9ರಿಂದ, ಹರಿಯಾಣ ವಿರುದ್ಧ ರಾಜಸ್ತಾನ ತಂಡ 15–9,10–15, 15–10ರಿಂದ ಗೆದ್ದಿತು. ಮಹಾರಾಷ್ಟ್ರ ವಿರುದ್ಧ ಉತ್ತರಾಖಂಡ್ 15–5, 15–10ರಿಂದ, ಕೇರಳ ವಿರುದ್ಧ ಉತ್ತರಾಖಂಡ್ 15–12, 15–10ರಿಂದ ಗೆಲುವು ಪಡೆಯಿತು.

ತಮಿಳುನಾಡು ತಂಡ ತೆಲಂಗಾಣ ‘ಎ’ ವಿರುದ್ಧ 15–11, 15–9ರಿಂದ, ಆಂಧ್ರಪ್ರದೇಶವು ಉತ್ತರ ಪ್ರದೇಶದ ವಿರುದ್ಧ 15–12, 15–2ರಿಂದ, ತಮಿಳುನಾಡು ತಂಡ ಉತ್ತರ ಪ್ರದೇಶ ವಿರುದ್ಧ 15–2, 15–3ರಿಂದ, ತೆಲಂಗಾಣ ‘ಎ’ ತಂಡ ಆಂಧ್ರಪ್ರದೇಶ ವಿರುದ್ಧ 15–7, 15–9ರಿಂದ ಹಾಗೂ ತಮಿಳುನಾಡು ತಂಡ ಆಂಧ್ರಪ್ರದೇಶ ‘ಬಿ’ ತಂಡದ ವಿರುದ್ಧ 15–7, 15–9ರಿಂದ ಜಯಿಸಿತು.

*
ಮೊದಲ ಬಾರಿ ನಡೆದ ಪ್ಯಾರಾ ಬೀಚ್ ವಾಲಿಬಾಲ್ ಖುಷಿ ಕೊಟ್ಟಿದೆ. ಇಂತಹ ಟೂರ್ನಿಗಳನ್ನು ನಿರಂತರವಾಗಿ ಆಯೋಜಿಸಿದರೆ ಪ್ರತಿಭೆಗಳಿಗೆ ವೇದಿಕೆ ಸಿಕ್ಕಂತಾಗುತ್ತದೆ.
-ವಿಜಯ್‌ ಕುಮಾರ್ ಶಿಂಧೆ, ಕರ್ನಾಟಕ ತಂಡದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT