ನವದೆಹಲಿ: ಕಾಮನ್‌ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ಬಾಕ್ಸರ್ ನೀತು ಗಂಗಾಸ್ ಅವರು ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ 48 ಕೆಜಿ ವಿಭಾಗದಲ್ಲಿ ಚಾಂಪಿಯನ್ ಆಗಿದ್ದಾರೆ. ಶನಿವಾರ ನಡೆದ ಫೈನಲ್‌ನಲ್ಲಿ ಅವರು ಮಂಗೋಲಿಯಾದ ಲುತ್ಸಾಯಿಖಾನ್ ಅಲ್ಟಂಟ್‌ಸೆಟ್‌ಸೆಗ್ ವಿರುದ್ಧ 5–0 ಅಂತರದ ಗೆಲುವು ಸಾಧಿಸಿದರು.
ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಒತ್ತುಕೊಟ್ಟ ನೀತು, ಎದುರಾಳಿಯ ಮೇಲೆ ಉತ್ತಮ ಪಂಚ್‌ಗಳನ್ನು ಪ್ರಯೋಗಿಸಿದರು.
ಈ ಗೆಲುವಿನೊಂದಿಗೆ ಅವರು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಾಂಪಿಯನ್ ಆದ ಭಾರತದ ಆರನೇ ಬಾಕ್ಸರ್ ಎನಿಸಿದರು.
ಈ ಹಿಂದೆ ಮೇರಿ ಕೋಮ್ (2002, 2005, 2006, 2008, 2010 ಹಾಗೂ 2018), ಸರಿತಾ ದೇವಿ (2006), ಜೆನ್ನಿ ಆರ್.ಎಲ್. (2006), ಲೇಖಾ ಕೆ.ಸಿ. (2006) ಹಾಗೂ ನಿಖತ್ ಝರೀನ್ (2022) ಅವರು ಚಾಂಪಿಯನ್ ಆಗಿದ್ದರು.