ನವದೆಹಲಿ: ಇಲ್ಲಿ ನಡೆಯುತ್ತಿರುವ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ನೀತು ಗಂಗಾಸ್ ಅವರು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಪಾನ್‌ನ ಮಡೊಕಾ ವಡಾ ಅವರನ್ನು ಮಣಿಸುವ ಮೂಲಕ ಸೆಮಿ ಫೈನಲ್ ಪ್ರವೇಶಿಸಿದರು.
ಈ ಮೂಲಕ ಭಾರತಕ್ಕೆ ಒಂದು ಪದಕ ಬರುವುದು ಗ್ಯಾರಂಟಿಯಾಗಿದೆ. ಪ್ರಬಲ ಪಂಚ್‌ಗಳ ಮೂಲಕ ನೀತು ಗಂಗಾಸ್ ಮಿಂಚಿದರು.
Boxer Nitu guarantees India's first medal at IBA Women's World Boxing Championships after defeating Japan's Madoka Wada in the minimum weight division category.
ನೀತು ಅವರು ಮಡೊಕಾ ವಿರುದ್ಧ ಆರಂಭದಿಂದಲೇ ಮೇಲುಗೈ ಸಾಧಿಸಿದರು. ಮೇಲಿಂದ ಮೇಲೆ ಪಂಚ್‌ಗಳನ್ನು ನೀಡಿ ಎದುರಾಳಿ ನೆಲಕ್ಕುರುಳುವಂತೆ ಮಾಡಿದರು. ನೀತು ಅವರ ಪ್ರಬಲ ಪಂಚ್‌ಗಳ ಮುಂದೆ ಮಡೊಕಾ ತಬ್ಬಿಬ್ಬಾದರು.
ಕಾಮನ್‌ವೆಲ್ತ್ ಕೂಟದ ಚಾಂಪಿಯನ್ ನೀತು ಅವರು ಮಂಗಳವಾರ ನಡೆದ 48 ಕೆ.ಜಿ. ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ ಬೌಟ್‌ನಲ್ಲಿ ತಜಿಕಿಸ್ತಾನದ ಸುಮೈಯಾ ಒಸಿಮೊವಾ ವಿರುದ್ಧ ಆರ್‌ಎಸ್‌ಸಿ ಆಧಾರದಲ್ಲಿ ಗೆದಿದ್ದರು.