ಸಿಂಗಪುರ (ಎಎಫ್ಪಿ): ಸೂಪರ್ಸ್ಟಾರ್ಗಳಾದ ಲಿಯಾನ್ ಮರ್ಷಾನ್ ಮತ್ತು ಸಮ್ಮರ್ ಮೆಕಿಂಟೋಷ್ ಅವರು ವಿಶ್ವ ಈಜು ಚಾಂಪಿಯನ್ಷಿಪ್ನ ಕೊನೆಯ ದಿನವಾದ ಭಾನುವಾರ ತಮ್ಮ ಸ್ಪರ್ಧೆಗಳನ್ನು ಅಧಿಕಾರಯುತವಾಗಿ ಗೆದ್ದುಕೊಂಡರು. ಅಮೆರಿಕ ತಂಡವು ರಿಲೆಯಲ್ಲಿ ವಿಶ್ವದಾಖಲೆ ಸ್ಥಾಪಿಸಿತು.

ಮಹಿಳೆಯರ 400 ಮೀ. ವೈಯಕ್ತಿಕ ಮೆಡ್ಲೆ ಸ್ಪರ್ಧೆಯನ್ನು 18 ವರ್ಷ ವಯಸ್ಸಿನ ಸಮ್ಮರ್ 4 ನಿ.25.7 ಸೆಕೆಂಡುಗಳಲ್ಲಿ ಪೂರೈಸಿದರು. ಇದು ಚಾಂಪಿಯನ್ಷಿಪ್ನ ದಾಖಲೆಯಾಯಿತು. ಕೆನಡಾದ ತಾರೆ ಎಂಟು ದಿನಗಳ ಈ ಕೂಟದಲ್ಲಿ ಗೆದ್ದ ನಾಲ್ಕನೇ ಸ್ವರ್ಣ ಇದು.

ಆಸ್ಟ್ರೇಲಿಯಾದ ಜೆನ್ನಾ ಫಾರಿಸ್ಟರ್ ಮತ್ತು ಜಪಾನ್ನ ಮಿಯೊ ನರಿಟಾ (4ನಿ 33.26 ಸೆ.) ಅವರು ಏಕಕಾಲದಲ್ಲಿ ಗುರಿತಲುಪಿ ಬೆಳ್ಳಿ ಪದಕವನ್ನು ಹಂಚಿಕೊಂಡರು. ಚೀನಾದ 12 ವರ್ಷ ವಯಸ್ಸಿನ ಪ್ರತಿಭಾನ್ವಿತೆ ಯು ಝಿದಿ (4ನಿ.33.76 ಸೆ.) ಕೂದಲೆಳೆಯಿಂದ ಪದಕ ಕಳೆದುಕೊಂಡರು.

ಇದಕ್ಕೆ ಮೊದಲು 200 ಮೀ. ಮೆಡ್ಲೆ, 200 ಮೀ. ಬಟರ್ಫ್ಲೈ ಮತ್ತು 400 ಮೀ. ಫ್ರೀಸ್ಟೈಲ್ ಸ್ಪರ್ಧೆಗಳಲ್ಲಿ ಮೊದಲಿಗರಾಗಿದ್ದ ಮೆಕಿಂಟೋಷ್, ಈ ಕೂಟದ ತಮ್ಮ ಕೊನೆಯ ಸ್ಪರ್ಧೆಯಲ್ಲೂ ಯಾವ ಹಂತದಲ್ಲೂ ಹಿನ್ನಡೆ ಕಾಣಲಿಲ್ಲ.

ಈ ಕೂಟದಲ್ಲಿ ಅವರು ಏಕೈಕ ಹಿನ್ನಡೆ ಅನುಭವಿಸಿದ್ದು 800 ಮೀ. ಫ್ರೀಸ್ಟೈಲ್ನಲ್ಲಿ. ಅಮೆರಿಕದ 28 ವರ್ಷ ವಯಸ್ಸಿನ ಕೇಟಿ ಲೆಡೆಕಿ ಆ ಸ್ಪರ್ಧೆಯಲ್ಲಿ ಪ್ರಾಬಲ್ಯ ಸಾಧಿಸಿದ್ದರು.

ಮಿಂಚಿದ ಮರ್ಷಾನ್:

200 ಮೀ. ಮೆಡ್ಲೆಯಲ್ಲಿ ಕಳೆದ ವಾರ ಚಿನ್ನ ಗೆದ್ದಿದ್ದ ಫ್ರಾನ್ಸ್ನ ಮರ್ಷಾನ್, 400 ಮೀ. ವೈಯಕ್ತಿಕ ಮೆಡ್ಲೆಯಲ್ಲೂ ಮೊದಲಿಗರಾದರು. 23 ವರ್ಷ ವಯಸ್ಸಿನ ಮರ್ಷಾನ್ 4ನಿ.04.73 ಸೆ.ಗಳಲ್ಲಿ ಈಜಿ, ಜಪಾನ್ನ ಟೊಮೊಯುಕಿ ಮಾತ್ಸುಶಿಟಾ (4ನಿ.08.32 ಸೆ.) ಅವರಿಗಿಂತ ಮೂರು ಸೆಕೆಂಡು ಮೊದಲೇ ಗುರಿ ತಲುಪಿದರು. ರಷ್ಯಾದ ಇಲ್ಯಾ ಬೊರೊಡಿನ್ (4ನಿ.09.16 ಸೆ.) ಕಂಚಿನ ಪದಕ ಪಡೆದರು.

ಈ ಕೂಟದ ಆರಂಭದಲ್ಲಿ ಅಮೆರಿಕ ತಂಡದ ಸ್ಪರ್ಧಿಗಳು ಹೊಟ್ಟೆಕೆಟ್ಟು ಸಮಸ್ಯೆ ಎದುರಿಸಿದ್ದರು. ದಿಗ್ಗಜರಾದ ಮೈಕೆಲ್ ಫೆಲ್ಪ್ಸ್ ಮತ್ತು ಲಾಕ್ಟಿ ಅವರಿಂದ ಟೀಕೆಗೂ ಒಳಗಾಗಿದ್ದರು. ಆದರೆ 4x100 ಮೀ. ಮೆಡ್ಲೆ ರಿಲೆಯಲ್ಲಿ ಮಹಿಳೆಯರ ತಂಡ ತಮ್ಮದೇ ವಿಶ್ವ ದಾಖಲೆ ಸುಧಾರಿಸುವ ಮೂಲಕ ಟೀಕಾಕಾರರ ಬಾಯಿಮುಚ್ಚಿಸಿತು.

ಅಮೆರಿಕ ತಂಡ 3ನಿ.49.34 ಸೆ.ಗಳಲ್ಲಿ ಗುರಿತಲುಪಿ, ವರ್ಷದ ಹಿಂದೆ ಪ್ಯಾರಿಸ್ನಲ್ಲಿ ಸ್ಥಾಪಿಸಿದ್ದ ತಮ್ಮದೇ ವಿಶ್ವದಾಖಲೆ (3ನಿ.49.63ಸೆ.) ಮುರಿಯಿತು. ಅಮೆರಿಕ ತಂಡ ಶನಿವಾರವಷ್ಟೇ ಮಿಶ್ರ 4x100 ಮೀ. ಫ್ರೀಸ್ಟೈಲ್ ರಿಲೇಯಲ್ಲಿ ದಾಖಲೆ ಸ್ಥಾಪಿಸಿತ್ತು.

ಅಮೆರಿಕಕ್ಕೆ 9 ಚಿನ್ನ:

ಕಾಡಿದ ಆರೋಗ್ಯ ಸಮಸ್ಯೆಗಳ ನಡುವೆಯೂ ಅಮೆರಿಕ ತಂಡ ಒಟ್ಟು 9 ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿತು. ಆಸ್ಟ್ರೇಲಿಯಾ ಎಂಟು ಚಿನ್ನ, ಫ್ರಾನ್ಸ್ ಮತ್ತು ಕೆನಡಾ ತಲಾ ನಾಲ್ಕು ಚಿನ್ನ ಗಳಿಸಿದವು. ಕೆನಡಾಕ್ಕೆ ಎಲ್ಲ ಚಿನ್ನಗಳನ್ನು ಮೆಕಿಂಟೋಷ್ ಗೆದ್ದುಕೊಟ್ಟಿದ್ದು ವಿಶೇಷ.

ಆಸ್ಟ್ರೇಲಿಯಾದ ಮೆಗ್ ಹ್ಯಾರಿಸ್, ಚೀನಾದ ಅವಳಿ ಸ್ಪರ್ಧಿಗಳ ಪೈಪೋಟಿ ಮೆಟ್ಟಿನಿಂತು 50 ಮೀ. ಫ್ರೀಸ್ಟೈಲ್ನಲ್ಲಿ ವಿಜಯಿಯಾದರು. 23 ವರ್ಷ ವಯಸ್ಸಿನ ಮೆಗ್ 24.02 ಸೆ.ಗಳಲ್ಲಿ ಗುರಿತಲುಪಿದರೆ, ಚೀನಾದ ವು ಕ್ವಿಂಗ್ಫೆಂಗ್ (24.26) ಎರಡನೇ ಮತ್ತು ಚೆಂಗ್ ಯುಜೀ (24.28) ಮೂರನೇ ಸ್ಥಾನ ಪಡೆದರು. ಒಂದು ದಿನ ಹಿಂದಷ್ಟೇ ಆಸ್ಟ್ರೇಲಿಯಾದ ಕ್ಯಾಮ್ ಮೆಕ್ಇವೊಯ್ ಈ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಚಾಂಪಿಯನ್ ಆಗಿದ್ದರು.

ಪುರುಷರ ವಿಭಾಗದ 800 ಮೀ. ಫ್ರೀಸ್ಟೈಲ್ ಚಿನ್ನ ಗೆದ್ದಿದ್ದ ಟ್ಯುನೀಷಿಯಾದ ಅಹಮದ್ ಜಾವೊವುದಿ 1,500 ಮೀ. ಫ್ರೀಸ್ಟೈಲ್ನಲ್ಲೂ ಅಗ್ರಸ್ಥಾನ ಪಡೆದು ಡಬಲ್ ಪೂರೈಸಿದರು. ಎರಡು ಬಾರಿಯ ಒಲಿಂಪಿಕ್ ಚಾಂಪಿಯನ್ ಬಾಬಿ ಫಿಂಕೆ ಮೂರನೇ ಸ್ಥಾನಕ್ಕೆ ಸರಿಯಬೇಕಾಯಿತು.

ತೀವ್ರ ಹಣಾಹಣಿಯಲ್ಲಿ ಜಾವೊವುದಿ 14ನಿ.34.41 ಸೆ.ಗಳಲ್ಲಿ ಗುರಿತಲುಪಿದರೆ, ಜರ್ಮನಿಯ ಸ್ವೆನ್ ಶ್ವಾರ್ಜ್ (14ನಿ.35.69 ಸೆ.) ಮತ್ತು ಅಮೆರಿಕದ ಫಿಂಕೆ (14ನಿ.36.60 ಸೆ.) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

ತಟಸ್ಥವಾಗಿ ಸ್ಪರ್ಧಿಸುತ್ತಿರುವ ರಷ್ಯಾ ಪುರುಷರ 50 ಮೀ. ಬ್ಯಾಕ್ಸ್ಟ್ರೋಕ್ನಲ್ಲಿ ಚಿನ್ನ ತನ್ನದಾಗಿಸಿಕೊಂಡಿತು. ವಿಶ್ವದಾಖಲೆ ವೀರ ಕ್ಲಿಮೆಂಟ್ 23.69 ಸೆ.ಗಳ ಕೂಟ ದಾಖಲೆಯೊಂದಿಗೆ ಅಗ್ರಸ್ಥಾನ ಪಡೆದರು. ಅದೇ ದೇಶದ ಪಾವೆಲ್ ಸಮುಸೆಂಕೊ ಮತ್ತು ದಕ್ಷಿಣ ಆಫ್ರಿಕದ ಪೀಟರ್ ಕೊಯೆಟ್ಜಿ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.