ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆನ್ನು ನೋವು ನಿವಾರಕ ಆಸನಗಳು

Last Updated 23 ಸೆಪ್ಟೆಂಬರ್ 2019, 5:12 IST
ಅಕ್ಷರ ಗಾತ್ರ

ಬೆನ್ನಿನ ಮಧ್ಯಭಾಗದ ಮೂಳೆ, ಬೆನ್ನಿನ ನರಗಳ ಮತ್ತು ಸ್ನಾಯುಗಳ ಸೆಳೆತದಿಂದ ನೋವು ಕಾಣಿಸಿಕೊಂಡರೆ ಸಣ್ಣಪುಟ್ಟ ಕೆಲಸಗಳನ್ನೂ ನಿರ್ವಹಿಸಲೂ ಕಷ್ಟವಾಗುತ್ತದೆ.

ಪುರುಷ ಮತ್ತು ಮಹಿಳೆ ಇಬ್ಬರಲ್ಲೂ ಸಾಮಾನ್ಯವಾಗಿ ಒಂದಿಲ್ಲೊಂದು ಕಾರಣಕ್ಕೆ ಕಾಣಿಸಿಕೊಳ್ಳುವ ಸಮಸ್ಯೆ ಇದು. ಬಿಡುವಿಲ್ಲದೆ ಕೆಲಸದಲ್ಲಿ ತೊಡಗುವ ಮಹಿಳೆಯರಲ್ಲಿ, ಬಾಗಿ ಕುಳಿತು ಹೆಚ್ಚು ಬೈಕ್‌ ಓಡಿಸುವ ಪುರುಷರಲ್ಲಿ ಹಾಗೂ ಕಚೇರಿ ಮನೆಗಳಲ್ಲಿ ಹೆಚ್ಚು ಸಮಯ ಕೂರುವ ಮತ್ತು ನಡೆದಾಡುವ ವೇಳೆ ಬೆನ್ನನ್ನು ನೇರವಾಗಿರಿಸದೇ (ಸಮರ್ಪಕ ಭಂಗಿಯಲ್ಲಿ ಕುಳಿತುಕೊಳ್ಳದೇ) ನಿರ್ಲಕ್ಷ್ಯ ತೋರುವುದರಿಂದ ಸಮಸ್ಯೆ ಎದುರಾಗುತ್ತದೆ.

ಆದ್ದರಿಂದ, ಬೆನ್ನಿನ ಕೆಳಭಾಗ ಮತ್ತು ಮೇಲ್ಭಾಗದಲ್ಲಿನ ನೋವು ಹಾಗೂ ಅದರ ನಿವಾರಣೆಗೆ ಪೂರಕವಾಗಬಲ್ಲ ಆಸನಗಳ ಜತೆಗೆ ಬೆನ್ನಿನ ಮಧ್ಯದ ಮೂಳೆ ಹಾಗೂ ಇಡೀ ಬೆನ್ನಿನ ನರಗಳಿಗೆ ಶಕ್ತಿ ತುಂಬಿ ಆರೋಗ್ಯವಾಗಿ ಇರಿಸಲು ನೆರವಾಗಬಲ್ಲ ಆಸನಗಳು ಇಲ್ಲಿವೆ.

ನಡು ಬೆನ್ನನ್ನು ಕೇಂದ್ರವಾಗಿರಿಸಿ ಇಡೀ ಬೆನ್ನಿನ ನೋವು ನಿವಾರಣೆಗೆ ಇವುಗಳು ಪೂರಕವಾಗಿ ಕಾರ್ಯನಿರ್ವಹಿಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ.

* ಮಹಾಮುದ್ರಾ

* ಜಾನು ಶೀರ್ಷಾಸನ, ಪರಿವೃತ್ತ ಜಾನು ಶೀರ್ಷಾಸನ

* ಸುಪ್ತ ಪಾದಾಂಗುಷ್ಠಾಸನ

* ಜಠರ ಪರಿವರ್ತನಾಸನ

* ಶೀರ್ಷಾಸನ ಮತ್ತು ಅದರ ಹಂತಗಳು

* ಸರ್ವಾಂಗಾಸನ ಹಾಗೂ ಅದರ ಹಂತಗಳು

* ಪಶ್ಚಿಮೋತ್ತಾನಾಸನ, ಊರ್ಧ್ವಮುಖ

* ಪಶ್ಚಿಮೋತ್ತಾನಾಸನ, ಪರಿವೃತ್ತ ಪಶ್ಚಿಮೋತ್ತಾನಾಸನ

* ಮರೀಚಾಸನ, ಅರ್ಧಮತ್ಸ್ಯೇಂದ್ರಾಸನ

* ಮಾಲಾಸನ, ಅಧೋಮುಖ ಶ್ವಾನಾಸನ

* ಉಷ್ಟ್ರಾಸನ, ಶಲಭಾಸನ

* ಧನುರಾಸನ, ಪಾರ್ಶ್ವ ಧನುರಾಸನ, ಊರ್ಧ್ವ ಧನುರಾಸನ

* ಮಂಡಲಾಸನ, ವಿಪರೀತ ಚಕ್ರಾಸನ

* ದ್ವಿಪಾದ ವಿಪರೀತ ದಂಡಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT