ಪೇನ್ ಮಕ್ಕಳ ‘ಪಾಲಕ’ನಾದ ಪಂತ್‌

7

ಪೇನ್ ಮಕ್ಕಳ ‘ಪಾಲಕ’ನಾದ ಪಂತ್‌

Published:
Updated:

ಸಿಡ್ನಿ: ‘ಈತ ಇನ್ನೂ ಸಣ್ಣ ಹುಡುಗ. ನಾನು, ಪತ್ನಿ ಸಿನಿಮಾ ನೋಡುವಾಗ ನಮ್ಮ ಮಕ್ಕಳ ಪಾಲನೆ ಮಾಡಲು ಈತನನ್ನು ಇರಿಸಿಕೊಳ್ಳಬಹುದು...‘

ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಭಾರತ ತಂಡದ ರಿಷಭ್ ಪಂತ್ ಬ್ಯಾಟಿಂಗ್ ಮಾಡುತ್ತಿದ್ದಾಗ ಆಸ್ಟ್ರೇಲಿಯಾದ ನಾಯಕ ಮತ್ತು ವಿಕೆಟ್‌ ಕೀಪರ್ ಟಿಮ್ ಪೇನ್ ಆಡಿದ ಮಾತುಗಳು ಇವು.

ನಂತರ ಪೇನ್ ಬ್ಯಾಟಿಂಗ್ ಮಾಡುತ್ತಿದ್ದಾಗ ವಿಕೆಟ್ ಕೀಪರ್‌ ರಿಷಭ್ ಪಂತ್ ತಿರುಗೇಟನ್ನೂ ನೀಡಿದ್ದರು. ‘ಈತನ ಬಗ್ಗೆ ಹೆಚ್ಚು ಕಳವಳ ಬೇಡ. ಈತ ಕೇವಲ ತಾತ್ಕಾಲಿಕ ನಾಯಕ ಬಿಡು’ ಎಂದು ಪಂತ್ ಬೌಲರ್‌ಗೆ ಹೇಳಿದ್ದರು. ಇವೆಲ್ಲವೂ ಸ್ಟಂಪ್‌ಗೆ ಅಳವಡಿಸಿರುವ ಮೈಕ್‌ನಲ್ಲಿ ದಾಖಲಾಗಿದೆ.

ಇದೀಗ ಪಂತ್‌, ನಿಜವಾಗಿಯೂ ಪೇನ್ ಮಕ್ಕಳ ಪಾಲಕನಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಆಸ್ಟ್ರೇಲಿಯಾ ಪ್ರಧಾನಿಯ ಭೋಜನ ಕೂಟದಲ್ಲಿ ತೆಗೆಸಿಕೊಂಡ ಚಿತ್ರದಲ್ಲಿ ಪೇನ್ ಪತ್ನಿ ಬೋನಿ, ತನ್ನಿಬ್ಬರು ಮಕ್ಕಳೊಂದಿಗೆ ಪಂತ್‌ ಜೊತೆ ಕಾಣಿಸಿಕೊಂಡಿದ್ದಾರೆ. ಒಂದು ಮಗುವನ್ನು ಪಂತ್ ಎತ್ತಿಕೊಂಡಿದ್ದು ಇನ್ನೊಂದು ಮಗು ಬೋನಿ ಅವರ ಕೈಯಲ್ಲಿದೆ. ಈ ಚಿತ್ರವನ್ನು ಬೋನಿ, ಇನ್‌ಸ್ಟಾಗ್ರಾಂನದಲ್ಲಿ ಹಾಕಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !