ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ ಲೀಗ್‌: ತಲೈವಾಸ್‌ಗೆ ಕೊನೆಗೂ ಜಯ

ಟೈ ಪಂದ್ಯದಲ್ಲಿ ಮುಂಬೈ– ಹರಿಯಾಣ
Published 11 ಜನವರಿ 2024, 4:24 IST
Last Updated 11 ಜನವರಿ 2024, 4:24 IST
ಅಕ್ಷರ ಗಾತ್ರ

ಮುಂಬೈ: ಏಳು ಪಂದ್ಯಗಳ ಸೋಲಿನ ನಂತರ ತಮಿಳು ತಲೈವಾಸ್ ಪ್ರೊ ಕಬಡ್ಡಿ ಲೀಗ್‌ನಲ್ಲಿ ಗೆಲುವನ್ನು ದಾಖಲಿಸಿತು. ನರೇಂದರ್ ಅವರು ಅಮೋಘ ರೈಡಿಂಗ್‌ ನೆರವಿನಿಂದ ಬುಧವಾರ ನಡೆದ ಪಂದ್ಯದಲ್ಲಿ ತಲೈವಾಸ್ ತಂಡ 46–27 ಪಾಯಿಂಟ್‌ಗಳಿಂದ ಯು.ಪಿ. ಯೋಧಾಸ್ ತಂಡವನ್ನು ಸುಲಭವಾಗಿ ಸೋಲಿಸಿತು.

ನರೇಂದರ್ 11 ಟಚ್‌ ಪಾಯಿಂಟ್‌ ಸೇರಿದಂತೆ 14 ಪಾಯಿಂಟ್ಸ್‌ ಕಲೆಹಾಕಿದರು. ಏಳನೇ ನಿಮಿಷವೇ ಮೊದಲ ಬಾರಿ ಆಲೌಟ್‌ ಸೇರಿದಂತೆ ಯೋಧಾಸ್‌ ತಂಡ ಪಂದ್ಯದಲ್ಲಿ ಒಟ್ಟು ಮೂರು ಸಲ ಆಲೌಟ್‌ ಆಯಿತು. ಕ್ಯಾಚಿಂಗ್‌ನಲ್ಲಿ ಸಾಗರ್ ಮತ್ತು ಸಾಹಿಲ್‌ ಕ್ರಮವಾಗಿ ಆರು ಮತ್ತು ಐದು ಪಾಯಿಂಟ್‌ ತಂದಿತ್ತರು. ಪಾಯಿಂಟ್‌ ಪಟ್ಟಿಯಲ್ಲಿ ಯೋಧಾಸ್ (21 ಅಂಕ) 10ನೇ ಸ್ಥಾನದಲ್ಲಿದ್ದರೆ, ತಲೈವಾಸ್ (19 ಅಂಕ) 11ನೇ ಸ್ಥಾನದಲ್ಲಿದೆ.

ರೋಚಕ ಟೈ: ಯು ಮುಂಬಾ ಮತ್ತು ಹರಿಯಾಣ ಸ್ಟೀಲರ್ಸ್‌ ನಡುವಣ ದಿನದ ಎರಡನೇ ಪಂದ್ಯ 44–44ರಲ್ಲಿ ಸಮಬಲದಲ್ಲಿ ಮುಕ್ತಾಯಗೊಂಡಿತು. ಮುಂಬಾ ಪರ ಆಲ್‌ರೌಂಡರ್, ಇರಾನ್‌ನ ಅಮೀರ್‌ ಮೊಹಮ್ಮದ್‌ ಝಫರ್‌ ದಾನೇಶ್ 14 ಪಾಯಿಂಟ್‌ ಗಳಿಸಿದರು. ಹರಿಯಾಣದ ಪರ ನಾಯಕ ಜೈದೀ‍ಪ್ ದಹಿಯಾ ಕ್ಯಾಚಿಂಗ್‌ನಲ್ಲಿ ಮಿಂಚಿದ್ದು ಎಂಟು ಪಾಯಿಂಟ್ ಕಲೆಹಾಕಿದರು. ರೈಡರ್‌ಗಳಾದ ಚಂದ್ರನ್ ರಂಜಿತ್‌ ಮತ್ತು ಸಿದ್ಧಾರ್ಥ ದೇಸಾಯಿ ತಲಾ ಏಳು ಪಾಯಿಂಟ್‌ ಗಳಿಸಿದರು.

ಮುಂಬೈ (35 ಅಂಕ) ಐದನೇ ಮತ್ತು ಸ್ಟೀಲರ್ಸ್‌ (34 ಅಂಕ) ಆರನೇ ಸ್ಥಾನದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT