ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖೇಲೊ ಇಂಡಿಯಾ ಯುನಿವರ್ಸಿಟಿ ಗೇಮ್ಸ್‌ನಲ್ಲಿ ಪೂನಮ್‌ ‘ಚಿನ್ನ’ದ ಸಾಧನೆ

Published 1 ಜೂನ್ 2023, 22:54 IST
Last Updated 1 ಜೂನ್ 2023, 22:54 IST
ಅಕ್ಷರ ಗಾತ್ರ

ಲಖನೌ: ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ ಪೂನಮ್‌ ಸೋನುನೆ, ಇಲ್ಲಿ ನಡೆಯುತ್ತಿರುವ ಖೇಲೊ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡೆಗಳ ಅಥ್ಲೆಟಿಕ್ಸ್‌ನ 5 ಸಾವಿರ ಮೀ. ಓಟದಲ್ಲಿ ಗುರುವಾರ ಚಿನ್ನದ ಸಾಧನೆ ಮಾಡಿದ್ದಾರೆ.

ಗುರುಗೋವಿಂದ್‌ ಸಿಂಗ್ ಸ್ಪೋರ್ಟ್ಸ್ ಕಾಲೇಜು ಮೈದಾನದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ 23 ವರ್ಷದ ಪೂನಂ ಅವರು ನಿಗದಿತ ಗುರಿಯನ್ನು 16 ನಿ. 59.31 ಸೆಂ.ನಲ್ಲಿ ತಲುಪಿದರು. ಅವರು 2018ರಲ್ಲಿ ಕೊಲಂಬೊದಲ್ಲಿ ನಡೆದ ದಕ್ಷಿಣ ಏಷ್ಯಾ ಯು20 ಚಾಂಪಿಯನ್‌ಷಿಪ್‌ನಲ್ಲಿ 3 ಸಾವಿರ ಮೀ. ಓಟದಲ್ಲಿ ಚಾಂಪಿಯನ್‌ ಆಗಿದ್ದರು.

ಫೈನಲ್‌ಗೆ ಜೈನ್‌ ವಿ.ವಿ: ಬೆಂಗಳೂರಿನ ಜೈನ್‌ ವಿ.ವಿ. ತಂಡ ಮಹಿಳೆಯರ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ತಂಡ ವಿಭಾಗದ ಫೈನಲ್‌ ತಲುಪಿದೆ. ಸೆಮಿಫೈನಲ್‌ನಲ್ಲಿ ಜೈನ್‌ ವಿ.ವಿ. ತಂಡ 2–0ಯಿಂದ ಸಾವಿತ್ರಿಬಾಯಿ ಫುಲೆ ಪುಣೆ ವಿ.ವಿ. ತಂಡದ ಮೇಲೆ ಜಯಗಳಿಸಿತು.

ಇನ್ನೊಂದು ಸೆಮಿಫೈನಲ್‌ನಲ್ಲಿ ದೆಹಲಿ ವಿಶ್ವವಿದ್ಯಾಲಯ 2–0ಯಿಂದ ಕೋಲ್ಕತ್ತದ ಏಡಮಾಸ್‌ ವಿ.ವಿ. ತಂಡವನ್ನು ಸೋಲಿಸತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT