ಪಾಲಕರಿಗೆ ಈಗ ಎಸ್ಸೆಸ್ಸೆಲ್ಸಿ, ಪಿಯುಸಿ ಮುಗಿಸಿದ ಮಕ್ಕಳ ಭವಿಷ್ಯದ ಚಿಂತೆ. ಮುಂದೆ ಯಾವ ವಿಭಾಗಕ್ಕೆ ಸೇರಿಸಬೇಕೆಂಬ ಸಮಸ್ಯೆ ಕಾಡುವುದು ಸಹಜ. ಕೆಲವು ಮಕ್ಕಳಿಗೆ ಕಲೆ ವಿಷಯಗಳಲ್ಲಿ ಆಸಕ್ತಿ, ಇನ್ನೂ ಕೆಲವರಿಗೆ ವಿಜ್ಞಾನದಲ್ಲಿ ಆಸಕ್ತಿ. ಇವೆರಡೂ ವಿಭಾಗದವರಿಗೂ ಸೂಕ್ತ ಎನ್ನಿಸುವ ಶಿಕ್ಷಣವೊಂದಿದೆ. ಅದೇ ಅನಿಮೇಶನ್.

ಕಂಪ್ಯೂಟರ್, ಟಿವಿ, ಸಿನೆಮಾ, ಕಾಮಿಕ್ಸ್, ಸುದ್ದಿ ಪತ್ರಿಕೆ, ವೆಬ್ಸೈಟ್, ವೈದ್ಯಕೀಯ ರಂಗ, ವಾಸ್ತುಶಿಲ್ಪ, ಮಕ್ಕಳ ಆಟಿಕೆ, ಮನೋರಂಜನೆ, ಕೈಗಾರಿಕೋದ್ಯಮದ ನೀಲನಕ್ಷೆ, ವಿಡಿಯೋ ಗೇಮ್ಸ ಮುಂತಾದ ಕಲೆ-ವಿಜ್ಞಾನಕ್ಕೆ ಸಂಬಂಧಿಸಿದ ಯಾವುದೇ ಕ್ಷೇತ್ರಗಳನ್ನಾದರೂ ನೋಡಿ. ಅಲ್ಲಿ ಅನಿಮೇಶನ್ ಕಲೆಯ ಬಳಕೆ ಅನಿವಾರ್ಯ.

ಅನಿಮೇಶನ್ ರಚನೆಗೆ ಕಲೆಯ ಕೌಶಲ್ಯ, ವಿಜ್ಞಾನದ ನಿಖರತೆ, ಸೂತ್ರಗಳು ಅತ್ಯಗತ್ಯ.
ಅನಿಮೇಶನ್ ಕಲಿಕೆ ಕಳೆದ ಒಂದು ದಶಕದಲ್ಲಿ ಸ್ಪಷ್ಟತೆಯನ್ನು ಪಡೆದುಕೊಂಡಿದೆ. ಅದೀಗ ಹೇರಳ ಉದ್ಯೋಗ ಸೃಷ್ಟಿಸುವ ಕ್ಷೇತ್ರವಾಗಿಯೂ ಮಾರ್ಪಟ್ಟಿರುವುದು ವಿಶೇಷ.

ಹಿಂದೆ ಅನಿಮೇಶನ್ ಕಲಿಕೆ ಕೇವಲ ಸರ್ಟಿಫಿಕೇಟ್ ಪಡೆದುಕೊಳ್ಳುವುದಕ್ಕೆ ಸೀಮಿತವಾಗಿತ್ತು. ಆದರೆ ಈಗ ಹಾಗಲ್ಲ. ಕೆಲವು ಪ್ರತಿಷ್ಠಿತ ಸಂಸ್ಥೆಗಳು ನಡೆಸುತ್ತಿರುವ ಅನಿಮೇಶನ್ ತರಗತಿಗಳಿಗೆ ಡಿಪ್ಲೊಮಾ ಮತ್ತು ಡಿಗ್ರಿ ಮಾನ್ಯತೆಯೂ ಸಿಗುತ್ತಿದೆ.

ಹೀಗಾಗಿ ದೇಶ, ವಿದೇಶಗಳಲ್ಲಿ ಕೈತುಂಬಾ ಆದಾಯ ನೀಡುವ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಅನಿಮೇಟರ್ಗಳಾಗಿ, ಅನಿಮೇಶನ್ ತಂತ್ರಜ್ಞರಾಗಿ ಕೆಲಸ ಗಿಟ್ಟಿಸಿಕೊಳ್ಳುವುದು ಸುಲಭ.
ಅನಿಮೇಶನ್ ಕಲಿಕೆಯ ಬಗ್ಗೆ ಉತ್ಕಟವಾದ ಆಸಕ್ತಿಯನ್ನು ಬಾಲ್ಯದಲ್ಲೇ ಹೊಂದಿದ್ದವರು ಎಸ್ಸೆಸ್ಸೆಲ್ಸಿ ಮುಗಿಸುತ್ತಿದ್ದಂತೆಯೇ ಅನಿಮೇಶನ್ ಡಿಪ್ಲೊಮಾಕ್ಕೆ ಸೇರಿಕೊಳ್ಳುವುದಕ್ಕೆ ಅವಕಾಶವಿದೆ.

ಪಿಯುಸಿ ಮುಗಿಸಿದ ವಿದ್ಯಾರ್ಥಿಗಳಾದರೆ ಪದವಿ (ಡಿಗ್ರಿ) ಕೋರ್ಸ್ ಆಗಿಯೂ ಅನಿಮೇಶನ್ ಕಲಿಯಬಹುದು. ಇವರಿಗೆ ಬ್ಯಾಚಲರ್ ಇನ್ ಅನಿಮೇಶನ್ ಆ್ಯಂಡ್ ವಿಷುವಲ್ ಇಫೆಕ್ಟ್ಸ್ ಎಂಬ ನೂತನ ಡಿಗ್ರಿ ಲಭ್ಯವಾಗುತ್ತದೆ.

ಅನಿಮೇಶನ್ ಡಿಪ್ಲೊಮಾ ಅಥವಾ ಡಿಗ್ರಿ ಶಿಕ್ಷಣಕ್ಕೆ ಯಾವುದೇ ಪ್ರವೇಶ ಪರೀಕ್ಷೆಯಾಗಲೀ ಅಥವಾ ಶೇಕಡಾವಾರು ಅಂಕಗಳ ನಿಬಂಧನೆಗಳಾಗಲೀ ಇಲ್ಲ. ಆಸಕ್ತಿ-ಪರಿಶ್ರಮಗಳುಳ್ಳ ಯಾರೇ ಬೇಕಿದ್ದರೂ ಸೇರಿಕೊಳ್ಳಬಹುದು.

ಅನಿಮೇಶನ್ ಕಲಿಕೆಗೆ ಇತ್ತೀಚೆಗೆ ಪೇಟೆ ಪಟ್ಟಣಗಳಲ್ಲಿ ಇರುವವರಷ್ಟೇ ಅಲ್ಲ, ಗ್ರಾಮೀಣ ಭಾಗಗಳಿಂದಲೂ ಸಾಕಷ್ಟು ವಿದ್ಯಾರ್ಥಿಗಳು ಬರುತ್ತಿದ್ದಾರೆ. ಆದರೆ ಅವರಿಗೆ ಸಂವಹನ ಕ್ರಿಯೆ ಹಾಗೂ ಇಂಗ್ಲಿಷ್ ಭಾಷೆ ಸ್ವಲ್ಪ ಕಷ್ಟಕರವಾಗುತ್ತಿದೆ.

ಇದನ್ನು ಗಮನಿಸಿ ಅನೇಕ ಸಂಸ್ಥೆಗಳು ಅನಿಮೇಶನ್ ಕಲಿಕೆಯ ಜತೆಜತೆಗೇ ಇಂಗ್ಲಿಷ್ ಹಾಗೂ ಸಂವಹನ ಕಲೆಯ ತರಬೇತಿ, ವ್ಯಕ್ತಿತ್ವ ವಿಕಸನದಂಥ ವಿಷಯಗಳನ್ನೂ ಕಲಿಸಿಕೊಡುತ್ತಿವೆ. ಇಂಥ ಸಾಕಷ್ಟು ವಿದ್ಯಾರ್ಥಿಗಳು ಇಂಗ್ಲೆಂಡ್, ಸಿಂಗಪುರ, ಅಮೆರಿಕ, ಮಲೇಷ್ಯಾ, ಜಪಾನ್, ದುಬೈ ಮುಂತಾದ ದೇಶಗಳಲ್ಲೂ ಯಶಸ್ವಿ ಅನಿಮೇಟರ್ಗಳಾಗಿ, ಗ್ರಾಫಿಕ್ ವಿನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ.

ಡಿಜಿಟಲ್, ವೆಬ್ಡಿಸೈನಿಂಗ್, ಗ್ರಾಫಿಕ್, ಫಿಲಂ ಮೇಕಿಂಗ್, ಡಿಸೈನಿಂಗ್ ಸ್ಟುಡಿಯೋ ನಿರ್ವಹಣೆ, ವರ್ಣ ಸಂಯೋಜನೆ, ರೇಖಾ ಚಿತ್ರಗಳ ರಚನೆ, ಕಂಪ್ಯೂಟರ್ ಬಳಕೆ ಈ ಮುಂತಾದ ವಿಷಯಗಳೂ ಅನಿಮೇಶನ್ ಶಿಕ್ಷಣದಲ್ಲೇ ಅಡಕವಾಗಿವೆ.

ಹೀಗಾಗಿ ಉದ್ಯೋಗದ ದೃಷ್ಟಿಯಲ್ಲಿ ಅವಕಾಶಗಳ ಕ್ಷಿತಿಜ ಸಹಜವಾಗಿಯೇ ಹೆಚ್ಚಾಗುತ್ತದೆ.
ಭಾರತದಲ್ಲಿ ಸೃಷ್ಟಿಯಾಗುವ ಅನಿಮೇಶನ್ಗಳಿಗೆ ವಿಶ್ವ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ.

ಅನೇಕ ವಿದೇಶಿ ಕಂಪೆನಿಗಳೂ ಅನಿಮೇಶನ್ ಕಲಾಕೃತಿಗಳನ್ನು ಭಾರತದಿಂದ ಔಟ್ಸೋರ್ಸಿಂಗ್ ಮಾಡಿಕೊಳ್ಳುತ್ತಿವೆ. ಇದರಿಂದಾಗಿ ನಮ್ಮಲ್ಲಿಯ ಎಷ್ಟೋ ಅನಿಮೇಟರ್ಗಳು ಇಲ್ಲಿದ್ದುಕೊಂಡೇ ವಿದೇಶಗಳಿಗೆ ತಮ್ಮ ಕಲಾಕೃತಿಗಳನ್ನು ರವಾನಿಸಿ ಸಾಕಷ್ಟು ವರಮಾನ ಗಳಿಸಿಕೊಳ್ಳುತ್ತಿದ್ದಾರೆ.

ಭಾರತದಲ್ಲಿ ಅನಿಮೇಶನ್ ಶಿಕ್ಷಣ ವ್ಯಾಪಕವಾಗುತ್ತಿರುವುದು ಕಳೆದ ಒಂದು ದಶಕದಿಂದ. ಹೀಗಾಗಿ ಸಹಜವಾಗಿಯೇ ಅನಿಮೇಟರ್ಗಳಿಗೆ ಬೇಡಿಕೆಯು ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದೆ.

ಇದನ್ನು ಮನಗಂಡು ಕೆಲವು ಬ್ಯಾಂಕುಗಳೂ ಅನಿಮೇಶನ್ ಪದವಿ ಅಧ್ಯಯನಕ್ಕೆ ಸಾಲ ಸೌಲಭ್ಯ ನೀಡುತ್ತಿವೆ. ಇದರಿಂದ ಬಡ- ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಈ ಅಪರೂಪದ ಶಿಕ್ಷಣ ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿದೆ.
(ಮಾಹಿತಿಗೆ 93412 28440)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.