ಭಾನುವಾರ, ಏಪ್ರಿಲ್ 18, 2021
31 °C

ಸಿಂಧು ಜೊತೆ ವಿವಾಹವಾಗ್ತೀನಿ ಎಂದ ಅಜ್ಜ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಈಚೆಗೆ ಚಿನ್ನದ ಪದಕ ಗೆದ್ದ ಪಿ.ವಿ. ಸಿಂಧು ಅವರಿಗೆ ಎಲ್ಲ ಕಡೆಯೂ ಸನ್ಮಾನಗಳ ಮಹಾಪೂರ ಹರಿದಿದೆ. ಆದರೆ ತಮಿಳುನಾಡಿನ 70 ವರ್ಷದ ಹಿರಿಯ ನಾಗರಿಕ ಮಲಯಸ್ವಾಮಿ ಅವರು ಸಿಂಧು ಅವರನ್ನು ಮದುವೆಯಾಗುವುದಾಗಿ ಹೇಳುತ್ತಿದ್ದಾರೆ.

ರಾಮನಾಥಪುರಂ ಜಿಲ್ಲೆಯ ಮ್ಯಾಜಿಸ್ಟ್ರೇಟ್‌ ನಡೆಸಿದ ಸಾಪ್ತಾಹಿಕ ಜನಸ್ಪಂದನದಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಸಿರುವ ಮಲಯಸ್ವಾಮಿ, ‘ನನಗೆ ಈಗ 16 ವರ್ಷ ವಯಸ್ಸು (ಜನನ; 4ನೇ ಏಪ್ರಿಲ್ 2004) ಆಗಿದೆ. ಸಿಂಧು ಸಾಧನೆಯಿಂದ ಮರುಳಾಗಿದ್ದೇನೆ. ಅವರನ್ನು ಜೀವನಸಂಗಾತಿಯಾಗಿ ಪಡೆಯಲು ಇಚ್ಛಿಸುತ್ತೇನೆ’ ಎಂದು ಬರೆದಿದ್ದಾರೆ.

‘ಒಂದೊಮ್ಮೆ ಅವರು ಮದುವೆಗೆ ಒಪ್ಪದಿದ್ದರೆ ಅಪಹರಿಸಿಕೊಂಡು ಹೋಗುತ್ತೇನೆ’ ಎಂದು ಹೇಳಿದ್ದಾರೆ!

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು