ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics: ಪದಕದ ಭರವಸೆ ಮೂಡಿಸಿದ ಅದಿತಿ

Last Updated 5 ಆಗಸ್ಟ್ 2021, 19:33 IST
ಅಕ್ಷರ ಗಾತ್ರ

ಟೋಕಿಯೊ: ಎರಡನೇ ದಿನವೂ ಅಮೋಘ ಸಾಮರ್ಥ್ಯ ಪ್ರದರ್ಶಿಸಿದ ಭಾರತದ ಅದಿತಿ ಅಶೋಕ್ ಅವರು ಒಲಿಂಪಿಕ್ಸ್‌ ಗಾಲ್ಫ್‌ನಲ್ಲಿ ದೇಶಕ್ಕೆ ಮೊದಲ ಪದಕ ಗೆದ್ದುಕೊಡುವತ್ತ ಹೆಜ್ಜೆ ಇರಿಸಿದ್ದಾರೆ.

ಕಸುಮಿಗಸೆಕಿ ಕಂಟ್ರಿ ಕ್ಲಬ್‌ನಲ್ಲಿ ಗುರುವಾರ ನಡೆದ ಮಹಿಳೆಯರ ವಿಭಾಗದ ಎರಡನೇ ಸುತ್ತಿನ ಕೊನೆಯಲ್ಲಿ ಎರಡನೇ ಸ್ಥಾನ ಉಳಿಸಿಕೊಂಡಿದ್ದಾರೆ. ಅವರೊಂದಿಗೆ ಡೆನ್ಮಾರ್ಕ್‌ ಆಟಗಾರ್ತಿಯರಾದ ನಾನಾ ಮೆಡ್ಸನ್ ಮತ್ತು ಕ್ರಿಸ್ಟಿನ್ ಎಮಿಲಿ ಸ್ಥಾನ ಹಂಚಿಕೊಂಡಿದ್ದಾರೆ. ಅಮೆರಿಕದ ನೆಲಿ ಕೊರ್ಡಾ ಮೊದಲ ಸ್ಥಾನದಲ್ಲೇ ಮುಂದುವರಿದಿದ್ದಾರೆ.

ಎರಡನೇ ಒಲಿಂಪಿಕ್ಸ್‌ನಲ್ಲಿ ಆಡುತ್ತಿರುವ 23 ವರ್ಷದ ಅದಿತಿ ಕೊನೆಯ ನಾಲ್ಕು ಹೋಲ್‌ಗಳಲ್ಲಿ ಗಳಿಸಿದ ಮೂರು ಬಿರ್ಡಿಗಳೊಂದಿಗೆ ಐದು ಬಿರ್ಡಿ ಸಾಧನೆ ಮಾಡಿದರು. ನೆಲ್ಲಿ ಕೊರ್ಡಾ ಅವರಿಗಿಂತ ನಾಲ್ಕು ಶಾಟ್‌ಗಳಿಂದ ಹಿಂದೆ ಉಳಿದಿದ್ದಾರೆ.

ಭಾರತದ ಮತ್ತೊಬ್ಬರು ಗಾಲ್ಫರ್‌ ದೀಕ್ಷಾ ದಾಗರ್ 53ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ಶನಿವಾರದ ವರೆಗೆ ಸ್ಪರ್ಧೆ ನಡೆಯಲಿದೆ. ಆದರೆ ವಾರಾಂತ್ಯದಲ್ಲಿ ಭಾರಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ 54 ಹೋಲ್‌ಗಳಿಗೆ ಸ್ಪರ್ಧೆಯನ್ನು ಮರುನಿಗದಿ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಫ್ಲ್ಯಾಗ್‌ನತ್ತ ಭರ್ಜರಿ ಹೊಡೆತಗಳೊಂದಿಗೆ ಪಾಯಿಂಟ್‌ಗಳನ್ನು ಕಲೆಹಾಕಲು ಅದಿತಿ ಮುಂದಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT