ಶುಕ್ರವಾರ, ಫೆಬ್ರವರಿ 28, 2020
19 °C

ಟಾಟಾ ಸ್ಟೀಲ್‌ ಮಾಸ್ಟರ್ಸ್‌ ಚೆಸ್‌ ಟೂರ್ನಿ: ಪಾಯಿಂಟ್‌ ಹಂಚಿಕೊಂಡ ಆನಂದ್

ಪಿಟಿಐ Updated:

ಅಕ್ಷರ ಗಾತ್ರ : | |

ವಿಜ್ಕ್‌ ಆನ್‌ಜಿ, ನೆದರ್ಲೆಂಡ್ಸ್‌: ಆತಿಥೇಯ ನೆದರ್ಲೆಂಡ್ಸ್‌ನ ಜೋರ್ಡೆನ್‌ ವಾನ್‌ ಫಾರೀಸ್ಟ್‌, ಟಾಟಾ ಸ್ಟೀಲ್‌ ಮಾಸ್ಟರ್ಸ್‌ ಚೆಸ್‌ ಟೂರ್ನಿಯ ಆರನೇ ಸುತ್ತಿನಲ್ಲಿ ಶನಿವಾರ ಭಾರತದ ವಿಶ್ವನಾಥನ್‌ ಆನಂದ್‌ ಅವರ ಜೊತೆ ಸುಲಭವಾಗಿ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.

ಈ ಟೂರ್ನಿಯ ಹಿಂದಿನ ಕೆಲವು ಪಂದ್ಯಗಳಂತೆ ಈ ಬಾರಿಯೂ  ಭಾರತದ ಮಾಜಿ ವಿಶ್ವ ಚಾಂಪಿಯನ್‌,  ಆಟವನ್ನು ಸಂಕೀರ್ಣ ಸ್ಥಿತಿಗೆ ತಲುಪಿಸಲು ಯತ್ನಿಸಿದರು. ಆದರೆ ‘ಕ್ವೀನ್‌’ಗಳನ್ನು ಕಳೆದುಕೊಂಡ ಬಳಿಕ ಇಬ್ಬರೂ ರಕ್ಷಣಾತ್ಮಕ ತಂತ್ರಕ್ಕೆ ಮೊರೆ ಹೋಗಿ ನಂತರ ‘ಡ್ರಾ’ಕ್ಕೆ ಒಪ್ಪಿಕೊಂಡರು.

ಆನಂದ್‌ ಆರು ಪಂದ್ಯಗಳಿಂದ ಮೂರು ಅಂಕ ಪಡೆದಿದ್ದು, ಆರನೇ ಸ್ಥಾನ ಹಂಚಿಕೊಂಡಿದ್ದಾರೆ. ಇನ್ನೂ ಏಳು ಸುತ್ತುಗಳು ಬಾಕಿಯಿವೆ. ಟೂರ್ನಿಯಲ್ಲಿ ಮೊದಲ ಜಯ ದಾಖಲಿಸುವ ವಿಶ್ವ ಚಾಂಪಿಯನ್‌ ಮ್ಯಾಗ್ನಸ್‌ ಕಾರ್ಲ್‌ಸನ್‌ ಆಸೆ ಇನ್ನೂ ಕೈಗೂಡಿಲ್ಲ. 6ನೇ ಸುತ್ತಿನಲ್ಲಿ ಅವರು ಅಮೆರಿಕದ ಫ್ಯಾಬಿಯಾನೊ ಕರುವಾನ ಜೊತೆ ಒಪ್ಪಂದಕ್ಕೆ ಸಹಿ ಹಾಕಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು