ಚೆನ್ನೈ: ಭಾರತದ ಖ್ಯಾತ ಆಟಗಾರ ವಿಶ್ವನಾಥನ್ ಆನಂದ್ ಅವರು ಲೆಜೆಂಡ್ಸ್ ಆಫ್ ಚೆಸ್ ಟೂರ್ನಿಯಲ್ಲಿ ಮತ್ತೆ ಸೋಲಿನ ಸುಳಿಗೆ ಸಿಲುಕಿದ್ದಾರೆ. ಮಂಗಳವಾರ ತಡರಾತ್ರಿ ನಡೆದ ಎಂಟನೇ ಸುತ್ತಿನ ಹಣಾಹಣಿಯಲ್ಲಿ ಅವರು 0.5–2.5ರಿಂದ ಚೀನಾದ ದಿಂಗ್ ಲೀರೆನ್ ಎದುರು ಪರಾಭವಗೊಂಡರು. ಆನ್ಲೈನ್ ಮೂಲಕ ನಡೆಯುತ್ತಿರುವ ಟೂರ್ನಿಯಲ್ಲಿ ಇದು ಆನಂದ್ ಅವರಿಗೆ ಏಳನೇ ಸೋಲು.

ಸೋಮವಾರ ನಡೆದ ಪಂದ್ಯದಲ್ಲಿ ಆನಂದ್, ಇಸ್ರೇಲ್ನ ಬೊರಿಸ್ ಗೆಲ್ಫಾಂಡ್ ಅವರನ್ನು ಮಣಿಸಿ, ಸತತ ಆರು ಪಂದ್ಯಗಳ ಸೋಲಿನ ಸರಪಳಿ ತುಂಡರಿಸಿದ್ದರು.

ದಿಂಗ್ ಲಿರೇನ್ ವಿರುದ್ಧದ ಪಂದ್ಯದ ಮೊದಲ ಗೇಮ್ನಲ್ಲಿ (22 ನಡೆಗಳು) ಆನಂದ್ ಸೋತರು. 47 ನಡೆಗಳ ಎರಡನೇ ಗೇಮ್ ಡ್ರಾನಲ್ಲಿ ಅಂತ್ಯವಾಯಿತು. ಕಪ್ಪುಕಾಯಿಗಳೊಂದಿಗೆ ಆಡಿದ ಲಿರೇನ್ 41 ನಡೆಗಳ ಮೂರನೇ ಗೇಮ್ಅನ್ನು ಗೆಲ್ಲುವ ಮೂಲಕ ಪಂದ್ಯವನ್ನೂ ಜಯಿಸಿದರು.

ಈ ಸೋಲಿನೊಂದಿಗೆ ಭಾರತದ ಪಟು (ಆರು) ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಜಾರಿದ್ದಾರೆ. ಲಿರೇನ್ ಹಾಗೂ ಪೀಟರ್ ಲೇಕೊ ಅವರೊಡನೇ ಈ ಸ್ಥಾನ ಹಂಚಿಕೊಂಡಿದ್ದಾರೆ.

50 ವರ್ಷದ ಆನಂದ್, ಒಂಬತ್ತನೇ ಹಾಗೂ ಅಂತಿಮ ಸುತ್ತಿನ ಹಣಾಹಣಿಯಲ್ಲಿ ಉಕ್ರೇನ್ನ ವಾಸಿಲ್ ಇವಾಂಚುಕ್ ಅವರನ್ನು ಎದುರಿಸಲಿದ್ದಾರೆ.

ಮತ್ತೊಂದು ಪಂದ್ಯದಲ್ಲಿ ವಿಶ್ವದ ಅಗ್ರ ಕ್ರಮಾಂಕದ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್ ಅವರು ರಷ್ಯಾದ ಇಯಾನ್ ನೆಪೊಮ್ನಿಯಾಟ್ಜಿ ಅವರನ್ನು ಮಣಿಸಿದರು. ಕಾರ್ಲ್ಸನ್ (22) ಪಾಯಿಂಟ್ಸ್ ಪಟ್ಟಿಯಲ್ಲಿ ಸದ್ಯ ಅಗ್ರಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.