ಗುರುವಾರ , ಜುಲೈ 29, 2021
23 °C

ಆನ್‌ಲೈನ್ ಚೆಸ್‌: ಅರ್ಹನ್, ಶ್ರಿಯಾಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅರ್ಹನ್ ಚೇತನ್ ಆನಂದ್ ಮತ್ತು ಶ್ರಿಯಾ ರೇವಣಕರ್ ಅವರು ಯುನೈಟೆಡ್ ಕರ್ನಾಟಕ ಚೆಸ್‌ ಸಂಸ್ಥೆ ಆಯೋಜಿಸಿದ್ದ ಆನ್‌ಲೈನ್ ಚೆಸ್ ಟೂರ್ನಿಯ ಹದಿನೆಂಟು ವರ್ಷದೊಳಗಿನವರ ವಿಭಾಗದಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ಪ್ರಶಸ್ತಿ ಗೆದ್ದುಕೊಂಡರು. ಬಾಲಕರ ವಿಭಾಗದಲ್ಲಿ ಅರ್ನವ್ ಮುರಳೀಧರ ಮತ್ತು ಬಾಲಕಿಯರ ವಿಭಾಗದಲ್ಲಿ ಸಂಜನಾ ರಘುನಾಥ್ ದ್ವಿತೀಯ ಸ್ಥಾನ ಗಳಿಸಿದರು.

ಹದಿನಾರು ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಪಂಕಜ್ ಭಟ್ ಹಾಗೂ ಸುಜನ್ ಭಾರದ್ವಾಜ್ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದರು. ಬಾಲಕಿಯರ ವಿಭಾಗದಲ್ಲಿ ಸಂಜನಾ ರಘುನಾಥ್ ಮತ್ತು ಅನನ್ಯ ಅರಂಬೂಕಮ್ ಕ್ರಮವಾಗಿ ಮೊದಲೆರಡು ಸ್ಥಾನ ಗಳಿಸಿದರು.

ಹದಿನಾಲ್ಕು ವರ್ಷದೊಳಗಿನ ಬಾಲಕರ ವಿಭಾಗದ ಮೊದಲ ಸ್ಥಾನ ಅರ್ಹನ್ ಚೇತನ್ ಆನಂದ್‌ ಪಾಲಾದರೆ ಬಾಲಕಿಯರ ವಿಭಾಗದಲ್ಲಿ ಮನಸ್ವಿ ಮೊದಲಿಗರಾದರು. ಬಾಲಕರ ವಿಭಾಗದಲ್ಲಿ ಪ್ರಗಿ ನಾರಾಯಣ್ ದ್ವಿತೀಯ ಸ್ಥಾನ ಗಳಿಸಿದರು. ಬಾಲಕಿಯರ ವಿಭಾಗದ ದ್ವಿತೀಯ ಸ್ಥಾನ ಕೆ.ಜಿ.ಆರ್.ಅನಘ ಪಾಲಾಯಿತು.

ಹನ್ನೆರಡು ವರ್ಷದೊಳಗಿನ ಬಾಲಕರ ವಿಭಾಗದಲ್ಲಿ  ಸಾತ್ವಿಕ್ ಅಡಿಗ ಪ್ರಥಮ, ಚಿನ್ಮಯ್ ಕೌಶಿಕ್ ದ್ವಿತೀಯ ಸ್ಥಾನ ಗಳಿಸಿದರು. ಬಾಲಕಿಯರ ವಿಭಾಗದಲ್ಲಿ ಅಕ್ಷಯ ಸಾಥಿ ಪ್ರಥಮ, ರುದ್ರ ರಾಜೀವ್ ದ್ವಿತೀಯ ಸ್ಥಾನ ಪಡೆದರು.

ಹತ್ತು ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಚಿನ್ಮಯ್ ಕೌಶಿಕ್ ಪ್ರಥಮ ಹಾಗೂ ಅದ್ವೈತ್ ಪ್ರಭುರಾಜ್ ದ್ವಿತೀಯ ಸ್ಥಾನ ಗಳಿಸಿದರು. ಬಾಲಕಿಯರ ವಿಭಾಗದಲ್ಲಿ ಸಿದ್ಧಿ ರಾವ್ ಪ್ರಥಮ ಹಾಗೂ ಆನಂದಿ ಪಿ. ದ್ವಿತೀಯ ಸ್ಥಾನ ಪಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು