ಟೋಕಿಯೊ: ದೂರ, ಎತ್ತರ ಮತ್ತು ಅಂತರದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸುವ ಕನಸು ಹೊತ್ತುಕೊಂಂಡು ವಿಶ್ವದ ಶ್ರೇಷ್ಠ ಅಥ್ಲೀಟ್‌ಗಳು ಶುಕ್ರವಾರ ಟ್ರ್ಯಾಕ್ ಮತ್ತು ಫೀಲ್ಡ್‌ಗೆ ಇಳಿಯಲಿದ್ದಾರೆ.

ಓಟ, ಜಿಗಿತ, ಎಸೆತಗಳ ಮೇಳ ಆರಂಭಗೊಳ್ಳುವುದರೊಂದಿಗೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಹೊಸ ಹುರುಪು ಕಾಣಿಸಿಕೊಳ್ಳಲಿದ್ದು ಕೊನೆಯ 10 ದಿನ ಇತರ ಕ್ರೀಡೆಗಳೊಂದಿಗೆ ಅಥ್ಲೆಟಿಕ್ಸ್ ಕೂಡ ಪದಕ ಗಳಿಕೆಯ ಪ್ರಮುಖ ದಾರಿಯಾಗಲಿದೆ.

ಉಸೇನ್ ಬೋಲ್ಟ್ ನಂತರ ಜಗತ್ತಿನ ಅತಿ ವೇಗದ ವ್ಯಕ್ತಿ ಯಾರು ಎಂಬ ಕುತೂಹಲ ಕ್ರೀಡಾ ಪ್ರೇಮಿಗಳಲ್ಲಿ ಮೂಡಿದೆ. 100 ಮೀಟರ್ಸ್ ಓಟದ ಹೀಟ್ಸ್‌ನೊಂದಿಗೆ ಈ ಬಾರಿಯ ಅಥ್ಲೆಟಿಕ್ಸ್‌ಗೆ ಚಾಲನೆ ಸಿಗಲಿದೆ. ಮೊದಲ ದಿನವೇ ಫೈನಲ್ ಸ್ಪರ್ಧೆಯೊಂದಕ್ಕೆ ಸಾಕ್ಷಿಯಾಗುವ ಅವಕಾಶವೂ ಕ್ರೀಡಾಜಗತ್ತಿಗೆ ಲಭಿಸಿದೆ. ಒಲಿಂಪಿಕ್ ಕ್ರೀಡಾಂಗಣದಲ್ಲಿ 10,000 ಮೀಟರ್ಸ್ ಓಟದ ಫೈನಲ್‌ನೊಂದಿಗೆ ಮೊದಲ ದಿನದ ಸ್ಪರ್ಧೆಗಳು ಮುಕ್ತಾಯಗೊಳ್ಳಲಿವೆ.

ಪುರುಷರ ಮೂರು ಸಾವಿರ ಮೀಟರ್ಸ್ ಸ್ಟೀಪಲ್ ಚೇಸ್, ಮಹಿಳೆಯರ 800 ಮೀಟರ್ಸ್ ಓಟ, ಪುರುಷರ 400 ಮೀಟರ್ಸ್ ಹರ್ಡಲ್ಸ್, ಮಹಿಳೆಯರ 100 ಮತ್ತು 5000 ಮೀಟರ್ಸ್ ಓಟ, ಟ್ರಿಪಲ್ ಜಂಪ್ ಮತ್ತು ಮಿಶ್ರ ರಿಲೇಗಳ ಪ್ರಾಥಮಿಕ ಹಂತದ ಸ್ಪರ್ಧೆಗಳು ಕೂಡ ಮೊದಲ ದಿನದ ಪ್ರಮುಖ ಆಕರ್ಷಣೆಯಾಗಿದೆ.

ಎರಡನೇ ದಿನ ಮಹಿಳೆಯರ 100 ಮೀಟರ್ಸ್ ಸೇರಿದಂತೆ ಒಟ್ಟು ಮೂರು ಫೈನಲ್ ಸ್ಪರ್ಧೆಗಳು ನಡೆಯಲಿವೆ. ನಾಲ್ಕನೇ ದಿನದ ಫೈನಲ್‌ಗಳ ಸಂಖ್ಯೆ ಹೆಚ್ಚಾಗಲಿರುವುದರಿಂದ ಪದಕಗಳ ಬೇಟೆಗಾಗಿ ಅಥ್ಲೀಟ್‌ಗಳ ಆವೇಶವೂ ಹೆಚ್ಚಲಿದೆ.

ಮಿಶ್ರ ರಿಲೆ ಪದಾರ್ಪಣೆ

ಅಥ್ಲೆಟಿಕ್ಸ್ ಕ್ಷೇತ್ರಕ್ಕೆ ಹೊಸದಾಗಿ ಸೇರಿಸಲಾಗಿರುವ 400 ಮೀಟರ್ಸ್ ಮಿಶ್ರ ರಿಲೆ ಸ್ಪರ್ಧೆ ಒಲಿಂಪಿಕ್ಸ್‌ಗೆ ‘ಪದಾರ್ಪಣೆ’ ಮಾಡಲು ಸಜ್ಜಾಗಿದೆ. ಟೋಕಿಯೊದಲ್ಲಿ ಅಥ್ಲೆಟಿಕ್ಸ್ ಸ್ಪರ್ಧೆಗಳ ಮೊದಲ ದಿನವೇ ಮಿಶ್ರ ರಿಲೆಯ ರೋಚಕತೆ ಮುದ ನೀಡಲಿದೆ. ತಂಡವನ್ನು ತಲಾ ಇಬ್ಬರು ಪುರುಷ ಮತ್ತು ಮಹಿಳಾ ಅಥ್ಲೀಟ್‌ಗಳು ಪ್ರತಿನಿಧಿಸುವ ಸ್ಪರ್ಧೆಯ ಫೈನಲ್ ಶನಿವಾರ ನಡೆಯಲಿದೆ.

2019ರಲ್ಲಿ ದೋಹಾದಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಅಮೆರಿಕ ಒಲಿಂಪಿಕ್ಸ್‌ನಲ್ಲೂ ಚಾಂಪಿಯನ್ ಆಗುವ ನೆಚ್ಚಿನ ತಂಡ ಎನಿಸಿದ್ದು ಜಮೈಕಾದ ಅಥ್ಲೀಟ್‌ಗಳು ಕೂಡ ಮಿಂಚು ಹರಿಸುವ ಸಾಧ್ಯತೆ ಇದೆ.

ನಾಲ್ವರು ಅಥ್ಲೀಟ್‌ಗಳ ಪೈಕಿ ಪುರುಷ ಮತ್ತು ಮಹಿಳೆಯರನ್ನು ಯಾವ ಲೆಗ್‌ನಲ್ಲಿ ಬೇಕಾದರೂ ಬಳಸಿಕೊಳ್ಳಲು ತಂಡಗಳಿಗೆ ಮುಕ್ತ ಅವಕಾಶವಿದೆ. ಹೀಗಾಗಿ ತಂಡಗಳು ಹೆಣೆಯುವ ತಂತ್ರಗಳು ಕೂಡ ಮಖ್ಯ. ದೋಹಾದಲ್ಲಿ ಪೋಲೆಂಡ್ ಮೊದಲ ಎರಡು ಲೆಗ್‌ಗಳಲ್ಲೂ ಪುರುಷ ಅಥ್ಲೀಟ್‌ಗಳನ್ನೇ ಬಳಸಿಕೊಂಡಿತ್ತು. ಉಳಿದ ಎಲ್ಲ ತಂಡಗಳು ಮೊದಲ ಮತ್ತು ಕೊನೆಯ ಲೆಗ್‌ನಲ್ಲಿ ಪುರುಷರನ್ನು ಬಳಸಿಕೊಂಡಿತ್ತು. ಪೋಲೆಂಡ್ ಮೊದಲ ಎರಡು ಲೆಗ್‌ಗಳಲ್ಲಿ ಮುನ್ನಡೆ ಸಾಧಿಸಿತ್ತು. ಆದರೆ ಕೊನೆಯಲ್ಲಿ ಹಿಂದೆ ಉಳಿದಿತ್ತು.

ಭಾರತವೂ ಮಿಶ್ರ ರಿಲೆಯಲ್ಲಿ ಪಾಲ್ಗೊಳ್ಳುತ್ತಿದ್ದು ಸಾರ್ಥಕ್ ಭಾಂಬ್ರಿ, ಅಲೆಕ್ಸ್ ಆ್ಯಂಟನಿ, ರೇವತಿ ವೀರಮಣಿ, ಶುಭಾ ವೆಂಕಟೇಶನ್ ಮತ್ತು ಧನಲಕ್ಷ್ಮಿ ಶೇಖರ್ ತಂಡದಲ್ಲಿದ್ದಾರೆ. ಈ ಪೈಕಿ ಟ್ರ್ಯಾಕ್‌ಗೆ ಇಳಿಯುವ ನಾಲ್ವರು ಯಾರು ಎಂಬುದೇ ಕುತೂಹಲ.

ಕೆಂಡ್ರಿಕ್ಸ್‌ಗೆ ಕೋವಿಡ್; ಪೋಲ್‌ವಾಲ್ಟ್‌ಗೆ ಅಲಭ್ಯ

ಎರಡು ಬಾರಿಯ ವಿಶ್ವ ಚಾಂಪಿಯನ್, ಅಮೆರಿಕದ ಸ್ಯಾಮ್ ಕೆಂಡ್ರಿಕ್ಸ್ ಕೋವಿಡ್ ಸೋಂಕಿಗೆ ಒಳಗಾಗಿದ್ದು ಪೋಲ್‌ವಾಲ್ಟ್ ಸ್ಪರ್ಧೆಗೆ ಅಲಭ್ಯರಾಗಲಿದ್ದಾರೆ ಎಂದು ಅಮೆರಿಕ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಸಮಿತಿ ಗುರುವಾರ ತಿಳಿಸಿದೆ.

2017 ಮತ್ತು 2019ರ ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಚಿನ್ನ ಗಳಿಸಿದ್ದ ಕೆಂಡ್ರಿಕ್ಸ್ ಟೋಕಿಯೊದಲ್ಲಿ ಪದಕ ಗೆಲ್ಲುವ ನೆಚ್ಚಿನ ಅಥ್ಲೀಟ್ ಎನಿಸಿಕೊಂಡಿದ್ದರು. ವಿಶ್ವ ದಾಖಲೆಯನ್ನು ಹೊಂದಿರುವ ಸ್ವೀಡನ್‌ನ ಅರ್ಮಾಂಡ್ ಡುಪ್ಲಾಂಟಿಸ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕೆಂಡ್ರಿಕ್ಸ್ ಈಗ ಪ್ರತ್ಯೇಕವಾಸದಲ್ಲಿದ್ದಾರೆ.

ಅರ್ಜೆಂಟೀನಾದ ಪೋಲ್‌ವಾಲ್ಟರ್ ಜರ್ಮನ್ ಚಿಯಾರವಿಲಿಯೊ ಕೂಡ ಸೋಂಕಿಗೆ ಒಳಗಾಗಿರುವುದರಿಂದ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.

ಆಸ್ಟ್ರೇಲಿಯಾ ಅಥ್ಲೀಟ್ಸ್‌ಗೆ ಐಸೊಲೇಷನ್!

ಅಮೆರಿಕ ತಂಡದಲ್ಲಿ ಕೋವಿಡ್ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ತನ್ನ ದೇಶದ ಟ್ರ್ಯಾಕ್ ಮತ್ತು ಫೀಲ್ಡ್ ಕ್ರೀಡಾಪಟುಗಳನ್ನು ಐಸೊಲೇಷನ್‌ನಲ್ಲಿ ಇರಿಸಲು ಆಸ್ಟ್ರೇಲಿಯಾ ನಿರ್ಧರಿಸಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಂಡದ ಆಡಳಿತ ತಿಳಿಸಿದೆ. ಎಷ್ಟು ಮಂದಿಯನ್ನು ಪ್ರತ್ಯೇಕವಾಸದಲ್ಲಿ ಇರಿಸಲಾಗಿದೆ ಎಂದು ಅದು ವಿವರಿಸಲಿಲ್ಲ. ಆಸ್ಟ್ರೇಲಿಯಾದ 63 ಮಂದಿ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಪದಕಗಳಿಗಾಗಿ ಸೆಣಸುವರು.

ಅಮೆರಿಕ, ಕೆರಿಬಿಯನ್ ತಾರೆಗಳ ಮೇಲೆ ಕಣ್ಣು

ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಅಮೆರಿಕ, ಕೆರಿಬಿಯನ್ ಮತ್ತು ಆಫ್ರಿಕಾದ ತಾರೆಗಳದೇ ಮೇಲುಗೈ. ಸ್ಪ್ರಿಂಟ್ ವಿಭಾಗದಲ್ಲಿ ಉತ್ತರ ಅಮೆರಿಕ ಮತ್ತು ಕೆರಿಬಿಯನ್ ಅಥ್ಲೀಟ್‌ಗಳು ಮಿಂಚಿದರೆ ದೂರ ಅಂತರದ ಓಟದಲ್ಲಿ ಆಫ್ರಿಕಾ ಕ್ರೀಡಾಪಟುಗಳು ಪಾರುಪತ್ಯ ಮೆರೆದಿದ್ದಾರೆ. ಈ ಬಾರಿಯೂ ಇವರ ಮೇಲೆಯೇ ಕಣ್ಣು.

ಪುರುಷರ ಸ್ಪ್ರಿಂಟ್‌ನಲ್ಲಿ ವಿಶ್ವ ಚಾಂಪಿಯನ್ ಮತ್ತು ಒಲಿಂಪಿಕ್ಸ್ ಚಾಂಪಿಯನ್ ಜಮೈಕಾದ ಉಸೇನ್ ಬೋಲ್ಟ್ ಅವರ ಅನುಪಸ್ಥಿತಿ ಕ್ರೀಡಾಪ್ರಿಯರನ್ನು ಕಾಡಲಿದೆ.

ಈ ಬಾರಿ ಜಮೈಕಾದ ಶೆಲ್ಲಿ ಆ್ಯನ್ ಫ್ರೇಸ್ ಪ್ರೈಸ್, ಅಮೆರಿಕದ ಅಲಿಸನ್ ಫೆಲಿಕ್ಸ್ ಮತ್ತಿತರರು ಗಮನ ಸೆಳೆಯಲಿದ್ದಾರೆ. ಶೆಲ್ಲಿ, ಲಂಡನ್ ಒಲಿಂಪಿಕ್ಸ್‌ನ 100 ಮೀಟರ್ಸ್ ಓಟದಲ್ಲಿ ಚಿನ್ನ ಗೆದ್ದಿದ್ದರು. ಅಲಿಸನ್ ಫೆಲಿಕ್ಸ್ ಆರು ಬಾರಿ ಚಿನ್ನದ ಸಾಧನೆ ಮಾಡಿದ್ದಾರೆ.

ರಿಯೊ ಒಲಿಂಪಿಕ್ಸ್‌ನ 100 ಮತ್ತು 200 ಮೀಟರ್ಸ್ ಓಟದ ಚಾಂಪಿಯನ್ ಎಲೈನ್ ಥಾಮ್ಸನ್, 400 ಮೀಟರ್ಸ್‌ನಲ್ಲಿ ವಿಶ್ವ ದಾಖಲೆ ಬರೆದಿರುವ ದಕ್ಷಿಣ ಆಫ್ರಿಕಾದ ವೈಡೆ ವ್ಯಾನ್ ನೀಕರ್ಕ್ ಮುಂತಾದವರೂ ಮಿಂಚಿನ ಸಂಚಾರ ಮೂಡಿಸಲು ಸಜ್ಜಾಗಿದ್ದಾರೆ.

ದ್ಯುತಿ, ನೀರಜ್,ಅಥ್ಲೆಟಿಕ್ಸ್‌ನಲ್ಲಿ ಭಾರತ ಮಹತ್ವದ ಸಾಧನೆಯನ್ನೇನೂ ಮಾಡಿಲ್ಲ. ಈ ಬಾರಿ ನೀರಜ್ ಚೋಪ್ರಾ, ದ್ಯುತಿ ಚಾಂದ್ ಮತ್ತು ಸಬ್ಲೆ ಮೇಲೆ ನಿರೀಕ್ಷೆ ಇರಿಸಿಕೊಂಡಿದೆ. 23 ವರ್ಷದ ಚೋಪ್ರಾ ಜಾವೆಲಿನ್ ಎಸೆತದಲ್ಲಿ ವಿಶ್ವದಲ್ಲಿ ನಾಲ್ಕನೇ ಕ್ರಮಾಂಕದ ಅಥ್ಲೀಟ್ ಆಗಿದ್ದಾರೆ. ಕೋವಿಡ್‌ನಿಂದಾಗಿ ಇತರ ಅಥ್ಲೀಟ್‌ಗಳಿಗೆ ಅಭ್ಯಾಸ ಮಾಡಲು ಹೆಚ್ಚು ಅವಕಾಶಗಳು ಲಭಿಸಲಿಲ್ಲ. ಈ ನಡುವೆ ನೀರಜ್ ಮಾತ್ರ ಯುರೋಪ್‌ನಲ್ಲಿ ತರಬೇತಿ ಪಡೆದುಕೊಂಡಿದ್ದಾರೆ.

ಫಿನ್ಲೆಂಡ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಅವರು 86.79 ಮೀಟರ್ಸ್ ದೂರದ ಸಾಧನೆ ಮಾಡಿದ್ದರು. ಒಲಿಂಪಿಕ್ಸ್‌ನಲ್ಲಿ ಅವರಿಗೆ ಜರ್ಮನಿಯ ಜೊಹಾನ್ಸ್ ವೆಟರ್ ಸವಾಲೆಸೆಯಲಿದ್ದಾರೆ. ಜೊಹಾನ್ಸ್ ಅವರ ಇತ್ತೀಚಿನ ಸಾಧನೆ 93.59 ಮೀಟರ್ಸ್ ಆಗಿದೆ. ರಾಷ್ಟ್ರೀಯ ದಾಖಲೆ ಮುರಿದ ಕ್ರೀಡಾಕೂಟದಲ್ಲಿ ಚೋಪ್ರಾ88.07 ಮೀಟರ್ಸ್ ದೂರದ ಸಾಧನೆ ಮಾಡಿದ್ದಾರೆ.

ಡಿಸ್ಕಸ್ ಥ್ರೋವರ್ ಕಮಲ್‌ಪ್ರೀತ್ ಕೌರ್ ವಿಶ್ವ ರ‍್ಯಾಂಕಿಂಗ್‌ನಲ್ಲಿಆರನೇ ಸ್ಥಾನದಲ್ಲಿದ್ದು ಒಲಿಂಪಿಕ್ಸ್ ಪದಕದ ಮೇಲೆ ಕಣ್ಣಿಟ್ಟಿದ್ದಾರೆ. ಪದಕ ಗೆಲ್ಲಲಾಗದೇ ಇದ್ದರೂ ಅವರು ಅಗ್ರ ಐದರಲ್ಲಿ ಸ್ಥಾನ ಗಳಿಸುವ ಸಾಧ್ಯತೆ ಇದೆ. ಏಷ್ಯನ್ ಗೇಮ್ಸ್ ಚಾಂಪಿಯನ್ ತಜಿಂದರ್ ಸಿಂಗ್ ತೂರ್ ಅವರು ಶಾಟ್‌ಪಟ್‌ನಲ್ಲಿ ಭರವಸೆ ಮೂಡಿಸಿದ್ದಾರೆ. ಮೂರು ಸಾವಿರ ಮೂಟರ್ಸ್ ಸ್ಟೀಪಲ್ ಚೇಸ್‌ನಲ್ಲಿ ಅವಿನಾಶ್ ಸಬ್ಲೆ ಮತ್ತು ಲಾಂಗ್‌ಜಂಪ್‌ನಲ್ಲಿ ಶ್ರೀಶಂಕರ್ ಮೇಲೆ ನಿರೀಕ್ಷೆ ಇದೆ.

ಮಹಿಳೆಯರ 100 ಮೀಟರ್ಸ್ ಓಟದಲ್ಲಿ ದ್ಯುತಿ ಚಾಂದ್ ಮತ್ತು ಪುರುಷರ 400 ಮೀಟರ್ಸ್ ಓಟದಲ್ಲಿ ಎಂ.ಪಿ.ಜಬೀರ್ ಗಮನ ಸೆಳೆಯುವ ನಿರೀಕ್ಷೆ ಇದ್ದು ಮೀಶ್ರ ರಿಲೇಯಲ್ಲೂ ಮಿಂಚಲು ಭಾರತದ ಅಥ್ಲೀಟ್‌ಗಳು ಕಾತರರಾಗಿದ್ದಾರೆ.

26ಟ್ರ್ಯಾಕ್–ಫೀಲ್ಡ್‌ನಲ್ಲಿ ಪಾಲ್ಗೊಳ್ಳುವ ಭಾರತದ ಅಥ್ಲೀಟ್‌ಗಳು

150ಅಮೆರಿಕವನ್ನು ಪ್ರತಿನಿಧಿಸುವ ಅಥ್ಲೀಟ್‌ಗಳು

58ಜಮೈಕಾದ ಟ್ರ್ಯಾಕ್–ಫೀಲ್ಡ್ ಅಥ್ಲೀಟ್‌ಗಳ ಸಂಖ್ಯೆ

14ಟ್ರ್ಯಾಕ್–ಫೀಲ್ಡ್‌ನಲ್ಲಿರುವ ಸ್ಪರ್ಧಾ ವಿಭಾಗ

ಭಾರತ ಸ್ಪರ್ಧಿಸುತ್ತಿರುವ ವಿಭಾಗಗಳು

ಪುರುಷರ 20 ಕಿಮೀ ವೇಗ ನಡಿಗೆ

ಮಹಿಳೆಯರ 20 ಕಿಮೀ ವೇಗ ನಡಿಗೆ

ಪುರುಷರ 3000 ಮೀ ಸ್ಟೀಪಲ್ ಚೇಸ್

ಪುರುಷರ ಲಾಂಗ್‌ಜಂಪ್

ಪುರುಷರ 400 ಮೀ ಹರ್ಡಲ್ಸ್

ಪುರುಷರ ಜಾವೆಲಿನ್ ಥ್ರೋ

ಮಹಿಳೆಯರ ಜಾವೆಲಿನ್ ಥ್ರೋ

ಪುರುಷರ ಶಾಟ್‌ಪಟ್

ಮಹಿಳೆಯರ 100 ಮೀ ಓಟ

ಮಹಿಳೆಯರ 200 ಮೀ ಓಟ

ಮಹಿಳೆಯರ ಡಿಸ್ಕಸ್ ಥ್ರೋ

ಮಿಶ್ರ ವಿಭಾಗದ 4x400 ಮೀ ರಿಲೆ

ಪುರುಷರ 4x400 ಮೀ ರಿಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.