ಶುಕ್ರವಾರ, ಸೆಪ್ಟೆಂಬರ್ 24, 2021
27 °C

ಬ್ಯಾಡ್ಮಿಂಟನ್‌: ಅಶ್ವಿನಿ–ಸಿಕ್ಕಿ ರನ್ನರ್ಸ್‌ ಅಪ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಎಸ್ಬರ್ಗ್‌, ಡೆನ್ಮಾರ್ಕ್‌: ಭಾರತದ ಅಶ್ವಿನಿ ಪೊನ್ನಪ್ಪ ಮತ್ತು ಸಿಕ್ಕಿ ರೆಡ್ಡಿ ಅವರು ಡೆನ್ಮಾರ್ಕ್‌ ಮಾಸ್ಟರ್ಸ್‌ ಇಂಟರ್‌ನ್ಯಾಷನಲ್‌ ಚಾಲೆಂಜ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ರನ್ನರ್ಸ್‌ ಅಪ್‌ ಆಗಿದ್ದಾರೆ.

ಮಹಿಳಾ ಡಬಲ್ಸ್‌ ವಿಭಾಗದಲ್ಲಿ ಕಣಕ್ಕಿಳಿದಿದ್ದ ಈ ಜೋಡಿ ಫೈನಲ್‌ ಹಣಾಹಣಿಯಲ್ಲಿ 21–15, 19–21, 14–21ರಿಂದ ಡೆನ್ಮಾರ್ಕ್‌ನ ಅಮೆಲಿ ಮಗೆಲುಂಡ್‌ ಮತ್ತು ಫ್ರೆಜಾ ರಾವ್ನ್‌ ಎದುರು ಸೋತಿತು.

ಕರ್ನಾಟಕದ ಅಶ್ವಿನಿ ಮತ್ತು ಹೈದರಾಬಾದ್‌ನ ಸಿಕ್ಕಿ ಟೂರ್ನಿಯಲ್ಲಿ ಎರಡನೇ ಶ್ರೇಯಾಂಕ ಪಡೆದಿದ್ದರು. ಮೊದಲ ಗೇಮ್‌ನಲ್ಲಿ ಅಗ್ರಶ್ರೇಯಾಂಕದ ಅಮೆಲಿ ಮತ್ತು ಫ್ರೆಜಾ ಎದುರು ಗೆದ್ದ ಇವರು ನಂತರದ ಗೇಮ್‌ನಲ್ಲಿ ದಿಟ್ಟ ಸಾಮರ್ಥ್ಯ ತೋರಿಯೂ ನಿರಾಸೆ ಕಂಡರು. ಅಂತಿಮ ಗೇಮ್‌ನಲ್ಲಿ ಮಂಕಾದ ಭಾರತದ ಜೋಡಿ ಸೋಲೊಪ್ಪಿಕೊಂಡಿತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು