ಬೆಂಗಳೂರು: ಸ್ಥಳೀಯ ಪ್ರೇಕ್ಷಕರ ಸಂಭ್ರಮದ ನಡುವೆ ಬೆಂಗಳೂರು ಪುರುಷರ ಮತ್ತು ಮಹಿಳೆಯರ ತಂಡಗಳು ಭಾರತ ಬ್ಯಾಸ್ಕೆಟ್‌ಬಾಲ್ ಫೆಡರೇಷನ್ ಆಯೋಜಿಸಿರುವ ಐಎನ್‌ಬಿಎಲ್ 3x3ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಫೈನಲ್ಸ್‌ನ ಮೊದಲ ದಿನ ಜಯಭೇರಿ ಮೊಳಗಿಸಿದವು.

ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪುರುಷರ ‘ಬಿ’ ಗುಂಪಿನ ಪಂದ್ಯದಲ್ಲಿ ಬೆಂಗಳೂರು ತಂಡ 21–16ರಲ್ಲಿ ಕೋಲ್ಕತ್ತವನ್ನು ಮಣಿಸಿತು. ಮಹಿಳೆಯರ ‘ಇ’ ಗುಂಪಿನ ಪಂದ್ಯದಲ್ಲಿ ಬೆಂಗಳೂರು ತಂಡ 7–14ರಲ್ಲಿ ಭಾವನಗರ ತಂಡಕ್ಕೆ ಮಣಿಯಿತು.

18 ವರ್ಷದೊಳಗಿನ ಪುರುಷರ ‘ಎ’ ಗುಂಪಿನ ಹಣಾಯಣಿಯಲ್ಲಿ ಕೊಚ್ಚಿ ವಿರುದ್ಧ ಬೆಂಗಳೂರು 19–14ರಲ್ಲಿ ಜಯ ಗಳಿಸಿತು. ಮತ್ತೊಂದು ಪಂದ್ಯದಲ್ಲಿ ಪುದುಚೇರಿಯನ್ನು 19–11ರಲ್ಲಿ ಗೆದ್ದಿತು. 18 ವರ್ಷದೊಳಗಿನ ಮಹಿಳೆಯರ ‘ಬಿ’ ಗುಂಪಿನ ಪಂದ್ಯದಲ್ಲಿ ಬೆಂಗಳೂರು ಪೂರ್ವ ತಂಡ ಗುವಾಹಟಿ ವಿರುದ್ಧ 13–8ರಲ್ಲಿ ಜಯ ಗಳಿಸಿತು.

ಮತ್ತೊಂದು ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು 12–5ರಲ್ಲಿ ಬೆಂಗಳೂರು ಪೂರ್ವ ತಂಡ ಸೋಲಿಸಿತು. ‘ಇ’ ಗುಂಪಿನ ಪಂದ್ಯದಲ್ಲಿ ಬೆಂಗಳೂರು ದಕ್ಷಿಣ 11–10ರಲ್ಲಿ ಚೆನ್ನೈ ಇಗ್ಮೋರ್ ತಂಡವನ್ನು ಮಣಿಸಿತು. ಮತ್ತೊಂದು ಹಣಾಹಣಿಯಲ್ಲಿ ಪಣಜಿಯನ್ನು 12–11ರಲ್ಲಿ ಸೋಲಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.