ಭಾನುವಾರ, ಅಕ್ಟೋಬರ್ 20, 2019
22 °C

ಹಾಕಿ: ಬೆಂಗಳೂರು ವಿವಿಗೆ ಜಯ

Published:
Updated:

ಬೆಂಗಳೂರು: ಶೂಟೌಟ್‌ನಲ್ಲಿ ಮನೋನ್ಮಣಿ ಸುಂದರನಾರ್ ವಿವಿ ತಂಡವನ್ನು ಮಣಿಸಿದ ಬೆಂಗಳೂರು ವಿಶ್ವವಿದ್ಯಾಲಯ ತಂಡ ದಕ್ಷಿಣ ವಲಯ ಅಂತರ ವಿವಿ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಸತತ ಎರಡನೇ ಜಯ ತನ್ನದಾಗಿಸಿಕೊಂಡಿತು.

ರಾಜ್ಯ ಹಾಕಿ ಸಂಸ್ಥೆಯ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದ ನಿಗದಿತ ಅವಧಿಯಲ್ಲಿ ಉಭಯ ತಂಡಗಳು 2–2ರ ಸಮಬಲ ಸಾಧಿಸಿದ್ದವು.

ಬೆಂಗಳೂರು ಪರ ಸೋಮಣ್ಣ (13, 20ನೇ ನಿಮಿಷ) ಮತ್ತು ಎದುರಾಳಿ ತಂಡದ ಪರ ಕ್ರಾಂತಿ (12ನೇ ನಿ) ಮತ್ತು ಮೊಹಮ್ಮದ್ ಯಾಸೀನ್ (46ನೇ ನಿ) ಗೋಲು ಗಳಿಸಿದರು. ಶೂಟೌಟ್‌ನಲ್ಲಿ ಬೆಂಗಳೂರು ತಂಡ 3–0ಯಿಂದ ಜಯ ಸಾಧಿಸಿತು. ಪವನ್, ಸೋಮಣ್ಣ ಮತ್ತು ಶಮಂತ್ ಚೆಂಡನ್ನು ಗುರಿ ಸೇರಿಸಿದರು.

Post Comments (+)