ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಾಲಿಂಪಿಕ್ಸ್: ಟಿಟಿಯಲ್ಲಿ ಪದಕ ಖಾತ್ರಿಪಡಿಸಿ ಇತಿಹಾಸ ರಚಿಸಿದ ಭಾವಿನಾಬೆನ್

Last Updated 27 ಆಗಸ್ಟ್ 2021, 14:03 IST
ಅಕ್ಷರ ಗಾತ್ರ

ಟೋಕಿಯೊ: ಜಪಾನ್‌ನಲ್ಲಿ ಸಾಗುತ್ತಿರುವ ಪ್ಯಾರಾಲಿಂಪಿಕ್ಸ್ ಮಹಿಳೆಯರ ಟೇಬಲ್ ಟೆನಿಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿರುವ ಭಾರತದ ಭಾವಿನಾಬೆನ್ ಪಟೇಲ್ ಪದಕ ಖಾತ್ರಿಪಡಿಸಿ ನೂತನ ಇತಿಹಾಸ ರಚಿಸಿದ್ದಾರೆ.

ಈ ಮೂಲಕ ಪ್ಯಾರಾಲಿಂಪಿಕ್ಸ್ ಟೇಬಲ್ ಟೆನಿಸ್ ವಿಭಾಗದಲ್ಲಿ ಪದಕ ಖಾತ್ರಿಪಡಿಸಿದ ಭಾರತದ ಮೊಟ್ಟ ಮೊದಲ ಕ್ರೀಡಾಪಟು ಎಂಬ ದಾಖಲೆಗೆ ಭಾಜನರಾಗಿದ್ದಾರೆ.

ಮಹಿಳಾ ಸಿಂಗಲ್ಸ್ ಕ್ಲಾಸ್ 4 ವಿಭಾಗದ ಕ್ವಾರ್ಟರ್ ಫೈನಲ್ ಹೋರಾಟದಲ್ಲಿ 34 ವರ್ಷದ ಭಾವಿನಾಬೆನ್ ಅವರು ವಿಶ್ವ ನಂ.5 ರ‍್ಯಾಂಕ್‌ನ ಸರ್ಬಿಯಾದ ಬೋರಿಸ್ಲಾವಾ ಪೆರಿಕ್ ರಾಂಕೋವಿಕ್ ವಿರುದ್ಧ 11-5 11-6 11-7ರಲ್ಲಿ ಗೆಲುವು ಬಾರಿಸಿದರು.

18 ನಿಮಿಷಗಳ ಅಂತರದಲ್ಲಿ ಕ್ವಾರ್ಟರ್ ಮುಖಾಮುಖಿ ಗೆದ್ದಿರುವ ಭಾವಿನಾಬೆನ್, ಅಂತಿಮ ನಾಲ್ಕರ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಈ ಮೂಲಕ ಕನಿಷ್ಠ ಕಂಚಿನ ಪದಕ ಖಾತ್ರಿಪಡಿಸಿದ್ದಾರೆ.

ಸೆಮೀಸ್‌ನಲ್ಲಿ ಮತ್ತೊಂದು ಕಠಿಣ ಸವಾಲು ಎದುರಾಗಿದ್ದು, ಚೀನಾದ ಜಾಂಗ್ ಮಿಯಾವೊ ಸವಾಲನ್ನು ಎದುರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT