ಶುಕ್ರವಾರ, ನವೆಂಬರ್ 27, 2020
20 °C

ಬೀಲ್‌ ಚೆಸ್‌: ಹರಿಕೃಷ್ಣಗೆ ಮಿಶ್ರ ಫಲ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಭಾರತದ ಗ್ರ್ಯಾಂಡ್‌ಮಾಸ್ಟರ್‌ ಪೆಂಟಾಲ ಹರಿಕೃಷ್ಣ ಅವರು ಬೀಲ್‌ ಚೆಸ್‌ ಉತ್ಸವದ ಬ್ಲಿಟ್ಜ್‌ ವಿಭಾಗದಲ್ಲಿ ಶನಿವಾರ ಮಿಶ್ರ ಫಲ ಕಂಡರು. ನಾಲ್ಕು ಗೇಮ್‌ಗಳಲ್ಲಿ ಗೆಲುವು ಸಾಧಿಸಿದರೆ ಏಳು ಗೇಮ್‌ಗಳಲ್ಲಿ ಪರಾಭವಗೊಂಡರು.

ಸ್ವಿಟ್ಜರ್ಲೆಂಡ್‌ನಲ್ಲಿ ನಡೆಯುತ್ತಿರುವ ಟೂರ್ನಿಯ ಮೂರು ಗೇಮ್‌ಗಳಲ್ಲಿ ಡ್ರಾ ಸಾಧಿಸಿದ ಹರಿಕೃಷ್ಣ ಅವರ ಬಳಿ ಸದ್ಯ 24 ಪಾಯಿಂಟ್‌ಗಳಿವೆ. ಕ್ಲಾಸಿಕಲ್‌ ವಿಭಾಗದ ಮೂರು ಪಂದ್ಯಗಳು ಇನ್ನೂ ಬಾಕಿ ಇವೆ.

ಪಾಯಿಂಟ್ಸ್‌ ಪಟ್ಟಿಯಲ್ಲಿ ಪೋಲೆಂಡ್‌ನ ರಾಡೊಸ್ಲಾವ್‌ ವೊತಾಸ್‌ಜೆಕ್ (31)‌ ಅವರು ಅಗ್ರಸ್ಥಾನದಲ್ಲಿದ್ದಾರೆ. ಹರಿಕೃಷ್ಣ ವಿರುದ್ಧ ಆಡಿದ ಎರಡೂ ಬ್ರಿಟ್ಜ್‌ ಪಂದ್ಯಗಳಲ್ಲಿ ಅವರು ಜಯ ಸಾಧಿಸಿದರು. 

ಬ್ಲಿಟ್ಜ್‌ ಮಾದರಿಯಲ್ಲಿ ಪ್ರತಿ ಆಟಗಾರ, ಇನ್ನೊಬ್ಬ ಆಟಗಾರನನ್ನು ಎರಡು ಬಾರಿ ಮುಖಾಮುಖಿಯಾಗುತ್ತಾನೆ.

ಭಾರತದ ಮೂರನೇ ಕ್ರಮಾಂಕದ ಚೆಸ್‌ ಪಟು ಹರಿಕೃಷ್ಣ ಅವರು ಜರ್ಮನಿಯ ವಿನ್ಸೆಂಟ್‌ ಕೇಮರ್‌ ಎದುರು, ಕ್ಲಾಸಿಕಲ್ ಮಾದರಿಯ‌ ನಾಲ್ಕನೇ ಪಂದ್ಯದಲ್ಲಿ ಗೆಲುವು ಸಾಧಿಸಿದರು. ಇದು ಟೂರ್ನಿಯಲ್ಲಿ ಅವರಿಗೆ ದೊರೆತ ಮೊದಲ ಜಯ.

ಹರಿಕೃಷ್ಣ ಅವರು ಟೂರ್ನಿಯ ರ‍್ಯಾಪಿಡ್‌ ವಿಭಾಗದಲ್ಲಿ ಎರಡನೇ ಸ್ಥಾನ ಗಳಿಸಿದ್ದರು. ಚೆಸ್‌960 ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು