ಟೋಕಿಯೊ: ಸ್ಪ್ರಿಂಟ್ ದಂತಕತೆ ಉಸೇನ್ ಬೋಲ್ಟ್, ಟೋಕಿಯೊ ಒಲಿಂಪಿಕ್ಸ್ ಸ್ಪರ್ಧಾಕಣದಲ್ಲಿಲ್ಲ. ಆದರೆ,ಉದ್ಘಾಟನಾ ಸಮಾರಂಭಕ್ಕೆ ಏಳು ತಿಂಗಳು ಉಳಿದಿರುವಾಗ ಒಲಿಂಪಿಕ್ಸ್‌ಗಾಗಿ ನಿರ್ಮಿಸಿರುವ ನೂತನ ‘ನ್ಯಾಷನಲ್ ಸ್ಟೇಡಿಯಂ’ನ ಟ್ರ್ಯಾಕ್ ಮೇಲೆ ಅವರು ಓಡಿ ಕಳೆಯೇರಿಸಿದರು.

ಅಥ್ಲೆಟಿಕ್ಸ್‌ಗೆ ವಿದಾಯ ಹೇಳಿರುವ ಬೋಲ್ಟ್,ಕ್ರೀಡಾಂಗಣದ ಉದ್ಘಾ ಟನೆಯ ಭಾಗವಾಗಿ ಹಮ್ಮಿಕೊಂಡ ಸಮಾರಂಭದಲ್ಲಿ ಪ್ಯಾರಾಲಿಂಪಿಕ್ ಅಥ್ಲೀಟ್‌ಗಳ ಜೊತೆ ಓಡಿದರು. ಈ ಕ್ರೀಡಾಂಗಣದಲ್ಲಿ ಇದೇ ಮೊದಲ ಸಾರ್ವಜನಿಕ ಕಾರ್ಯಕ್ರಮ.

ತೈಕೊ ಡ್ರಮ್‌ಗಳ ಬೀಟ್ ಮೂಲಕ ಕಾರ್ಯಕ್ರಮ ಆರಂಭವಾಯಿತು. ಒಲಿಂಪಿಕ್ಸ್‌ನಲ್ಲಿ ಎಂಟು ಚಿನ್ನ ಗೆದ್ದಿರುವ ಬೋಲ್ಟ್‌ಗಿಂತ ಹೆಚ್ಚು ಹರ್ಷೊದ್ಗಾರ ಮೊಳಗಿದ್ದು, ಜೆ ಪಾಪ್ ಬಾಯ್ ಬ್ಯಾಂಡ್ ಅರಾಶಿ ತಂಡಕ್ಕೆ ಮತ್ತು ರಗ್ಬಿ ನಾಯಕ ಮೈಕೆಲ್ ಲೀಚ್ ಅವರಿಗೆ.

‘ಇಷ್ಟೊಂದು ಜನರ ಎದುರು ಓಡುವುದು ಅವಿಸ್ಮರಣೀಯ ಅನುಭವ. ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸದಿರುವ ಕಾರಣ ಈಗ ಓಡಲು ಸಿಕ್ಕಿದ್ದು ಸಂತಸ ಮೂಡಿಸಿದೆ’ ಎಂದು ಬೋಲ್ಟ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.