ಮಂಗಳವಾರ, ಮೇ 26, 2020
27 °C

ಕೊರೊನಾ ಭೀತಿ: ‘ಲಾಕ್‌ಡೌನ್‌’ ಪರಿಣಾಮ ಬಾಕ್ಸರ್‌ಗಳಿಗೆ ಆನ್‌ಲೈನ್‌ ತರಬೇತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌ ಪಿಡುಗಿನ ಕಾರಣ ದೇಶ ‘ಲಾಕ್‌ಡೌನ್‌’ ಆಗಿರುವ ಸಂದರ್ಭದಲ್ಲಿ ಸ್ಥಗಿತಗೊಂಡಿರುವ ತರಬೇತಿಯನ್ನು ಬಾಕ್ಸರ್‌ಗಳು ಆನ್‌ಲೈನ್‌ ಮೂಲಕ ಪಡೆಯಲಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ ಬಾಕ್ಸರ್‌ಗಳಿಗೆ ತಮ್ಮ ಕೋಚ್‌ಗಳಿಂದ ಸೋಮವಾರದಿಂದ ಈ ಪ್ರಯೋಜನ ದೊರೆಯಲಿದೆ. 

ಭಾರತದ ಮೇರಿ ಕೋಮ್‌ (51 ಕೆಜಿ ವಿಭಾಗ), ಸಿಮ್ರನ್‌ಜೀತ್‌ ಕೌರ್‌ (60 ಕೆಜಿ), ಲೊವ್ಲಿನಾ ಬೊರ್ಗೋಹೈನ್‌ (69 ಕೆಜಿ), ಪೂಜಾ ರಾಣಿ (75 ಕೆಜಿ), ಅಮಿತ್‌ ಪಂಗಲ್‌ (52 ಕೆಜಿ), ಮನೀಷ್‌ ಕೌಶಿಕ್‌ (63 ಕೆಜಿ), ವಿಕಾಸ್‌ ಕೃಷ್ಣ (69 ಕೆಜಿ), ಆಶಿಶ್‌ ಕುಮಾರ್‌ (75 ಕೆಜಿ) ಹಾಗೂ ಸತೀಶ್‌ ಕುಮಾರ್‌ (91+ ಕೆಜಿ) (ಒಟ್ಟು 9 ಬಾಕ್ಸರ್‌ಗಳು) ಟೋಕಿಯೊ ಟಿಕೆಟ್‌ ಗಿಟ್ಟಿಸಿದ್ದು ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

‘ಸದ್ಯ ಪಟಿಯಾಲಾದಲ್ಲಿರುವ ಭಾರತ ಬಾಕ್ಸಿಂಗ್‌ ಹೈ ಪರ್ಫಾರ್ಮೆನ್ಸ್ ನಿರ್ದೇಶಕ ಸ್ಯಾಂಟಿಯಾಗೊ ನೀವಾ ಅವರು ಪುರುಷರ ತಂಡಕ್ಕೆ ತರಬೇತಿ ನೀಡಲಿದ್ದಾರೆ’ ಎಂದು ಬಿಎಫ್‌ಐ ಕಾರ್ಯಕಾರಿ ನಿರ್ದೇಶಕ ಆರ್‌.ಕೆ. ಸಚೇಟಿ ಹೇಳಿದರು. ಮಹಿಳೆಯರಿಗೆ ಆ ತಂಡದ ಹೈ ಫರ್ಫಾರ್ಮೆನ್ಸ್ ನಿರ್ದೇಶಕ ರಫೆಲ್‌ ಬರ್ಗ್‌ಮಾಸ್ಕೊ ತರಬೇತಿ ನೀಡಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು