ಸೋಮವಾರ, ಸೆಪ್ಟೆಂಬರ್ 20, 2021
22 °C

Tokyo Olympics: ಡೈವಿಂಗ್- ಬ್ರಿಟನ್ ಜೋಡಿಯ ಕರಾಮತ್ತು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಬ್ರಿಟನ್‌ನ ಟಾಮ್ ಡೇಲಿ ಮತ್ತು ಮ್ಯಾಟಿ ಲೀ ಜೋಡಿಯು ಸೋಮವಾರ ಪುರುಷರ 10 ಮೀಟರ್ಸ್ ಸಿಂಕ್ರೊನೈಜ್ಡ್‌ ಡೈವಿಂಗ್‌ನಲ್ಲಿ ಚಿನ್ನದ ಪದಕ ಗೆದ್ದರು.

ಈ ವಿಭಾಗದಲ್ಲಿ ಪ್ರಥಮ ಸ್ಥಾನ ಗೆಲ್ಲುವ ನಿರೀಕ್ಷೆ ಮೂಡಿಸಿದ್ದ ಚೀನಾದ ಕೋ ಯುವಾನ್ ಮತ್ತು ಚೆನ್ ಎಸೆನ್ ಬೆಳ್ಳಿ ಪದಕ ಪಡೆದರು. ಡೈವಿಂಗ್‌ನಲ್ಲಿ ಚೀನಾದ ಪ್ರಾಬಲ್ಯಕ್ಕೆ ಸೆಡ್ಡು ಹೊಡೆದ ಬ್ರಿಟನ್ ಜೋಡಿಯು 471.81 ಪಾಯಿಂಟ್ ಗಳಿಸಿ ಪ್ರಥಮರಾದರು. ಚೀನಾ (470.58) ಎರಡನೇ ಸ್ಥಾನಕ್ಕಿಳಿಯಿತು. ಆರ್‌ಒಸಿಯ ಅಲೆಕ್ಸಾಂಡರ್ ಬಾಂಡರ್ ಮತ್ತು ವಿಕ್ಟರ್ ಮಿನಿಬೇವ್ ಮೂರನೇ ಸ್ಥಾನ ಪಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು