ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಬ್ಲ್ಯೂಎಫ್‌ ಪ್ರಶಸ್ತಿ: ಭಾರತದ ರಾಂಕಿರೆಡ್ಡಿ–ಚಿರಾಗ್, ಪ್ರಮೋದ್ ನಾಮನಿರ್ದೇಶನ

ಬ್ಯಾಡ್ಮಿಂಟನ್‌
Last Updated 5 ಡಿಸೆಂಬರ್ 2019, 10:10 IST
ಅಕ್ಷರ ಗಾತ್ರ

ನವದೆಹಲಿ:ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ (ಬಿಡಬ್ಲ್ಯೂಎಫ್‌) ನೀಡುವ ‘ವರ್ಷದ ಉದಯೋನ್ಮುಕ ಆಟಗಾರ’ ಪ್ರಶಸ್ತಿಗೆಭಾರತದ ಭರವಸೆಯ ಆಟಗಾರರಾದಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಹಾಗೂ ಚಿರಾಗ್‌ ಶೆಟ್ಟಿನಾಮನಿರ್ದೇಶನಗೊಂಡಿದ್ದಾರೆ.

ಆಗಸ್ಟ್‌ನಲ್ಲಿ ನಡೆದ ಥಾಯ್ಲೆಂಡ್ ಓಪನ್ ‘ಸೂಪರ್‌ 500’ರ ಪ್ರಶಸ್ತಿ ಗೆದ್ದುಕೊಂಡಿದ್ದ ರಾಂಕಿರೆಡ್ಡಿ–ಚಿರಾಗ್‌, ಅಕ್ಟೋಬರ್‌ನಲ್ಲಿ ನಡೆದ ಫ್ರೆಂಚ್ ಓಪನ್‌ ಫೈನಲ್‌ ತಲುಪುವಲ್ಲಿ ಯಶಸ್ವಿಯಾಗಿದ್ದರು.

ಪ್ಯಾರಾ ಬ್ಯಾಡ್ಮಿಂಟನ್‌ ಆಟಗಾರರನ್ನೂ ಒಳಗೊಂಡಂತೆ ಒಟ್ಟು ಆರು ವಿಭಾಗಗಳಲ್ಲಿ ಬಿಡಬ್ಲ್ಯೂಎಫ್‌ ಪ್ರಶಸ್ತಿ ನೀಡುತ್ತದೆ.ಈ ವರ್ಷ ನಡೆದ ವಿವಿಧ ಪದ್ಯಾವಳಿಗಳಲ್ಲಿ 11 ಚಿನ್ನ, 3 ಬೆಳ್ಳಿ ಹಾಗೂ 4 ಕಂಚಿನ ಪದಕಗಳನ್ನು ಗೆದ್ದುಕೊಂಡಿರುವಭಾರತದ ಪ್ರಮೋದ್‌ ಭಗತ್‌, ವರ್ಷದ ಪ್ಯಾರಾ ಆಟಗಾರ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದಾರೆ.

ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಗೆದ್ದ ಹೊರತುಪಡಿಸಿಈ ವರ್ಷ ಸಂಪೂರ್ಣ ಹಿನ್ನಡೆ ಅನುಭವಿಸಿದ್ದ, ಒಲಿಂಪಿಕ್‌ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧುವರ್ಷದ ಮಹಿಳಾ ಆಟಗಾರ್ತಿಪಟ್ಟಿಗೆ ನಾಮನಿರ್ದೇಶನಗೊಳ್ಳಲು ವಿಫಲಾರಾಗಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭ ಚೀನಾದ ಗೌಂಗ್ಜೌನಲ್ಲಿ ಡಿಸೆಂಬರ್‌ 9 ರಂದು ನಡೆಯಲಿದೆ.

ನಾಮನಿರ್ದೇಶನಗೊಂಡ ಆಟಗಾರರು
ವರ್ಷದ ಆಟಗಾರ

* ಕೆಂಟೋ ಮೊಮೊಟೊ –ಜಪಾನ್‌ ಡಬಲ್ಸ್‌ ಆಟಗಾರ
* ಮಾರ್ಕ್ಯುಸ್‌ ಫೆರ್ನಾಲ್ಡಿ ಗಿಡಿಯಾನ್‌–ಕೆವಿನ್‌ ಸಂಜಾಯ ಸುಕಾಮುಲ್ಜೊ, ಇಂಡೋನೇಷಿಯಾಡಬಲ್ಸ್‌ ಜೋಡಿ
* ಜೆಂಗ್‌ ಷಿ ವಿ, ಚೀನಾ ಮಿಶ್ರ ಡಬಲ್ಸ್‌ ಆಟಗಾರ
* ಮೊಹಮ್ಮದ್‌ ಅಹ್ಸಾನ್‌–ಹೆಂಡ್ರಾ ಸೆತಿಯವಾನ್‌,ಇಂಡೋನೇಷಿಯಾ ಡಬಲ್ಸ್‌ ಜೋಡಿ

ವರ್ಷದ ಆಟಗಾರ್ತಿ
* ತೈ ತ್ಸು ಯಿಂಗ್‌, ತೈವಾನ್‌ಸಿಂಗಲ್ಸ್‌ ಆಟಗಾರ್ತಿ
* ಹುವಾಂಗ್‌ ಯಾ ಕಿಯಾಂಗ್‌, ಚೀನಾಮಿಶ್ರ ಡಬಲ್ಸ್‌ ಆಟಗಾರ್ತಿ
* ಯುಕಿ ಫುಕುಷಿಮಾ–ಸಯಕ ಹಿರೋಟಾ, ಜಪಾನ್ ಮಹಿಳಾ ಡಬಲ್ಸ್ ಜೋಡಿ
* ಚೆನ್‌ ಕಿಂಗ್‌ ಚೆನ್‌–ಜಿಯಾ ಯಿ ಫಾನ್‌, ಚೀನಾಮಹಿಳಾ ಡಬಲ್ಸ್ ಜೋಡಿ

ವರ್ಷದ ಪ್ಯಾರಾ ಆಟಗಾರ
* ಲುಕಾಸ್‌ ಮಜುರ್‌, ಜಪಾನ್‌
* ಕ್ಯು ಜಿಮೊ, ಚೀನಾ
* ಪ್ರಮೋದ್‌ ಭಗತ್‌, ಭಾರತ
* ದೇವಾ ಅನ್ರಿಮುಷ್ಥಿ, ಇಂಡೋನೇಷಿಯಾ

ವರ್ಷದ ಪ್ಯಾರಾ ಆಟಗಾರ್ತಿ
* ಸರಿನಾ ಸತೋಮಿ, ಜಪಾನ್‌
* ಲಿಯು ಯುತೋಂಗ್‌, ಚೀನಾ
* ಲಿಯಾನಿ ರತ್ರಿ ಒಕ್ಟಿಲಾ, ಇಂಡೋನೇಷಿಯಾ
* ಅಯಾಕೋ ಸುಜುಕಿ, ಜಪಾನ್‌

ವರ್ಷದ ಭರವಸೆಯ ಆಟಗಾರ
* ಆ್ಯನ್‌ ಸೆ ಯಂಗ್‌, ಕೊರಿಯಾ ಸಿಂಗಲ್ಸ್‌ ಆಟಗಾರ್ತಿ
* ಕೊಕಿ ವಾಟನಬೆ, ಜಪಾನ್‌ ಸಿಂಗಲ್ಸ್‌ ಆಟಗಾರ
* ಲಿಯೊ ರೊಲ್ಲಿ ಕಾರ್ನಾಂಡೊ–ಡೆನಿಯಲ್‌ ಮಾರ್ಟಿನ್‌,ಇಂಡೋನೇಷಿಯಾ ಪುರುಷರ ಡಬಲ್ಸ್‌ ಜೋಡಿ
* ಕಂಟಾಫೊನ್‌ ವಾಂಗ್ಚರೋನ್‌,ಥೈಲ್ಯಾಂಡ್‌ ಸಿಂಗಲ್ಸ್‌ ಆಟಗಾರ

ವರ್ಷದ ಅತ್ಯುತ್ತಮ ಉದಯೋನ್ಮುಕ ಆಟಗಾರ
*ಮಿಚೆಲ್ಲೆ ಲೀ, ಕೆನಡಾದ ಸಿಂಗಲ್ಸ್‌ ಆಟಗಾರ್ತಿ
* ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ–ಚಿರಾಗ್‌ ಶೆಟ್ಟಿ, ಭಾರತದ ಪುರುಷರ ಡಬಲ್ಸ್‌ ಜೋಡಿ
* ಕಿಮ್‌ ಸೋ ಯಿಯಾಂಗ್‌–ಕಾಂಗ್‌ ಹೀ ಯಾಂಗ್‌,ಕೊರಿಯಾದ ಮಹಿಳಾ ಡಬಲ್ಸ್ ಜೋಡಿ
* ಪ್ರವೀಣ್‌ ಜೋರ್ಡಾನ್‌–ಮೆಲಾಟಿ ದೀವಾ ಒಕ್ಟಾವಿಯಂತಿ,ಇಂಡೋನೇಷಿಯಾ ಮಿಶ್ರ ಡಬಲ್ಸ್‌ ಜೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT