ದೆಹಲಿ: ‘ಟೋಕಿಯೊ ಒಲಿಂಪಿಕ್ಸ್‌ನ ಗುಂಪು ಹಂತದ ಪಂದ್ಯಗಳ ವೇಳೆ ತಂಡ ಉತ್ತಮ ಪ್ರದರ್ಶನ ನೀಡದಿದ್ದಾಗ ಕೋಚ್ ಸ್ಯೋರ್ಡ್ ಮರೈನ್ ಬೇಸರಗೊಂಡಿದ್ದರು,’ ಎಂದು ಮಹಿಳಾ ಹಾಕಿ ತಂಡದ ಗೋಲ್ ಕೀಪರ್ ಸವಿತಾ ಪೂನಿಯಾ ಹೇಳಿದ್ದಾರೆ.

ಇದನ್ನೂ ಓದಿ: Tokyo Olympics | ಭಾರತ ಮಹಿಳಾ ಹಾಕಿ ತಂಡಕ್ಕೆ ಮತ್ತೊಂದು ಆಘಾತ

ಸುದ್ದಿ ಸಂಸ್ಥೆ ಎಎನ್‌ಐ ಜೊತೆಗೆ ಮಾತನಾಡಿರುವ ಅವರು, ‘ಟೋಕಿಯೊ ಒಲಿಂಪಿಕ್ಸ್‌ನ ಆರಂಭಿಕ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡದಿದ್ದಾಗ ಕೋಚ್ ಅಸಂತೋಷಗೊಂಡಿದ್ದರು. ಗುಂಪು ಹಂತದಲ್ಲಿ ನಾವು ಗ್ರೇಟ್ ಬ್ರಿಟನ್ ವಿರುದ್ಧ ಸೋತಾಗ ಅವರು ನಮ್ಮೊಂದಿಗೆ ಊಟವನ್ನೇ ಮಾಡಲಿಲ್ಲ’ ಎಂದು ಅವರು ಹೇಳಿದರು.

ಇದನ್ನೂ ಓದಿ:Tokyo Olympics| ಭಾರತದ ಮಹಿಳಾ ಹಾಕಿ ತಂಡವನ್ನು ಹೊಗಳಿದ ಗ್ರೇಟ್ ಬ್ರಿಟನ್ ತಂಡ

‘ಕೋಚ್‌ಗೆ ನಮ್ಮ ಮೇಲೆ ಮರಳಿ ನಂಬಿಕೆ ಬರುವಂತೆ ಮಾಡಲು ನಾವು ಆಕ್ಷಣವೇ ನಿರ್ಧರಿಸಿದೆವು. ನಾವು ಅತ್ಯುತ್ತಮ ಆಟವಾಡಬೇಕೆಂದು ಅವರು ಯಾವಾಗಲೂ ಪ್ರೋತ್ಸಾಹಿಸುತ್ತಲೇ ಇದ್ದರು,‘ ಎಂದು ಸವಿತಾ ಹೇಳಿದ್ದಾರೆ.

‘ಕಂಚಿನ ಪದಕದ ಪಂದ್ಯದಲ್ಲಿ ನಾವೆಲ್ಲರೂ ತುಂಬಾ ಭಾವುಕರಾಗಿದ್ದೆವು. ನಾವು ತುಂಬಾ ಹತ್ತಿರಕ್ಕೆ ಬಂದು ಕಂಚು ಕಳೆದುಕೊಂಡೆವು ಎಂಬುದನ್ನು ನಂಬಲೂ ಆಗುತ್ತಿಲ್ಲ. ಆದರೆ, ಒಟ್ಟಾರೆಯಾಗಿ ತಂಡವು ಉತ್ತಮ ಪ್ರದರ್ಶನ ನೀಡಿತು,’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.