ಬುಧವಾರ, ಏಪ್ರಿಲ್ 14, 2021
23 °C
ಕಾಮನ್‌ವೆಲ್ತ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌: ಎರಡನೇ ದಿನ ಭಾರತಕ್ಕೆ ಏಳು ಸ್ವರ್ಣ

ವೇಟ್‌ಲಿಫ್ಟಿಂಗ್‌: ರಾಖಿ, ದೇವಿಂದರ್‌ ಕೌರ್‌ಗೆ ಸ್ವರ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಪಿಯಾ, ಸಮೊವಾ: ರಾಖಿ ಹಲ್ದರ್‌ ಹಾಗೂ ದೇವಿಂದರ್‌ ಕೌರ್‌ ಅವರು ಚಿನ್ನದ ಪದಕ ಗೆಲ್ಲುವ ಮೂಲಕ ಕಾಮನ್‌ವೆಲ್ತ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ‍ಪಾರಮ್ಯ ಮುಂದುವರಿದಿದೆ.

ಎರಡನೇ ದಿನವಾದ ಬುಧವಾರ ಭಾರತ ಸೀನಿಯರ್‌, ಜೂನಿಯರ್‌ ಹಾಗೂ ಯೂತ್‌ ವಿಭಾಗ ಸೇರಿ ಒಟ್ಟು 7 ಚಿನ್ನ ಬಾಚಿಕೊಂಡಿತು.

ಕಾಮನ್‌ವೆಲ್ತ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಎಲ್ಲ ವಿಭಾಗಗಳ ಸ್ಪರ್ಧೆಯು ಏಕಕಾಲದಲ್ಲಿ ನಡೆಯುತ್ತಿದೆ.

ಮಹಿಳೆಯರ 59 ಕೆಜಿ ವಿಭಾಗದಲ್ಲಿ ದೇವಿಂದರ್‌ ಕೌರ್‌ ಅವರು ಒಟ್ಟು 184 ಕೆಜಿ (80+104) ಭಾರ ಎತ್ತುವ ಮೂಲಕ ಅಗ್ರಸ್ಥಾನ
ಗಳಿಸಿದರು.

ಇನ್ನೊಂದೆಡೆ  64 ಕೆಜಿ ವಿಭಾಗದಲ್ಲಿ ಹಲ್ದರ್‌ ಅವರು ಒಟ್ಟು 214 (94+120) ಭಾರ ಎತ್ತಿದರು.

ಚಾಂಪಿಯನ್‌ಷಿಪ್‌ನ ಮೊದಲ ದಿನವಾದ ಮಂಗಳವಾರ ಭಾರತದ ವೇಟ್‌ಲಿಫ್ಟರ್‌ಗಳು ಒಟ್ಟು 13 ಪದಕಗಳನ್ನು ಗೆದ್ದುಕೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು