ಬುಧವಾರ, ಏಪ್ರಿಲ್ 21, 2021
24 °C

ಡಕಾರ್ ರ‍್ಯಾಲಿ: ಅಫಘಾತದಲ್ಲಿ ಗಾಯಗೊಂಡಿದ್ದ ರೇಸರ್ ಸಾವು

ಎಪಿ Updated:

ಅಕ್ಷರ ಗಾತ್ರ : | |

Prajavani

ಜೆಡ್ಡಾ, ಸೌದಿ ಅರೇಬಿಯಾ: ಡಕಾರ್ ರ‍್ಯಾಲಿಯ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಬೈಕ್ ರೇಸರ್ ಪಿಯರ್‌ ಚೆರ್ಪಿನ್‌ ಅವರು ಸೌದಿ ಅರೇಬಿಯಾದಿಂದ ಫ್ರಾನ್ಸ್‌ಗೆ ಕರೆದೊಯ್ಯುವ ವಿಮಾನದಲ್ಲಿ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ ಎಂದು ರ‍್ಯಾಲಿಯ ಸಂಘಟಕರು ಶುಕ್ರವಾರ ತಿಳಿಸಿದ್ದಾರೆ.

52 ವರ್ಷದ ಚೆರ್ಪಿನ್ ಅವರು ನಾಲ್ಕು ದಿನಗಳ ಹಿಂದೆ ರ‍್ಯಾಲಿಯ ಏಳನೇ ಹಂತದಲ್ಲಿ(ಹೈಲ್‌ನಿಂದ ಸಕಾಕ ನಗರದವರೆಗೆ) ಸ್ಪರ್ಧಿಸಿದ್ದಾಗ ಅಪಘಾತ ಸಂಭವಿಸಿ ತಲೆಗೆ ತೀವ್ರ ಪೆಟ್ಟಾಗಿತ್ತು.

‘ಚರ್ಪಿನ್ ಅವರಿಗೆ ಸಕಾಕದಲ್ಲಿ ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಕೋಮಾಕ್ಕೆ ಜಾರಿದ್ದರು. ಆ ಬಳಿಕ ಜೆಡ್ಡಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು‘ ಎಂದು ಸಂಘಟಕರು ಹೇಳಿದ್ದಾರೆ.

ಚೆರ್ಪಿನ್ ನಾಲ್ಕನೇ ಬಾರಿ ಡಕಾರ್ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು