ಸೋಮವಾರ, ಜನವರಿ 20, 2020
29 °C

ಆರ್ಚರಿ: ವೆಚ್ಚ ಭರಿಸಲು ಮುಂದಾದ ಸಾಯ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಟೋಕಿಯೊ ಒಲಿಂಪಿಕ್‌ ಕ್ವಾಲಿಫೈಯರ್‌ ಟ್ರಯಲ್ಸ್‌ನಲ್ಲಿ ಭಾಗವಹಿಸಲಿರುವ ಪ್ರಮುಖ ಆರ್ಚರಿ ಪಟುಗಳ ವಸತಿ ಮತ್ತು ಆಹಾರದ ವೆಚ್ಚವನ್ನು ಭರಿಸಲು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ನಿರ್ಧರಿಸಿದೆ.

ಭಾರತ ಆರ್ಚರಿ ಸಂಸ್ಥೆ ಅಮಾನತುಗೊಂಡಿರುವ ಕಾರಣ, ಟ್ರಯಲ್ಸ್‌ನಲ್ಲಿ ಭಾಗವಹಿಸುತ್ತಿರುವ ದೀಪಿಕಾ ಕುಮಾರಿ, ಅತನು ದಾಸ್‌ ಮತ್ತು ಬೊಂಬಯಲಾ ದೇವಿ ಅವರು ತಾವೇ ಊಟ ಮತ್ತು ವಸತಿ ವೆಚ್ಚವನ್ನು ಭರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇವರು ರಾಷ್ಟ್ರೀಯ ತರಬೇತಿ ಶಿಬಿರಕ್ಕೂ ಆಯ್ಕೆಯಾಗಿದ್ದರು. ಈ ಕುರಿತು ಕೆಲ ಪತ್ರಿಕೆಗಳು ಸುದ್ದಿ ಮಾಡಿದ್ದವು.

ಇದರಿಂದ ಎಚ್ಚೆತ್ತ ಕೇಂದ್ರ ಕ್ರೀಡಾ ಸಚಿವಾಲಯವು  ಟ್ರಯಲ್ಸ್‌ನಲ್ಲಿ ಭಾಗವಹಿಸುತ್ತಿರುವ ಕೆಲ ಆರ್ಚರಿ ಪಟುಗಳ ವೆಚ್ಚ ಭರಿಸುವುದಾಗಿ ಹೇಳಿದೆ.

ಸ್ಟೇಜ್‌–2 ಟ್ರಯಲ್ಸ್‌ ಇದೇ ತಿಂಗಳ 4ರಿಂದ (ಶನಿವಾರ) 7ರವರೆಗೆ ಪುಣೆಯ ಆರ್ಮಿ ಸ್ಪೋರ್ಟ್ಸ್‌ ಇನ್‌ಸ್ಟಿಟ್ಯೂಟ್‌ನಲ್ಲಿ (ಎಎಸ್‌ಐ) ನಡೆಯಲಿದೆ. ಇದರಲ್ಲಿ ಅತನು, ದೀಪಿಕಾ ಮತ್ತು ಬೊಂಬಯಲಾ ದೇವಿ ಸೇರಿದಂತೆ 21 ಸ್ಪರ್ಧಿಗಳು ಭಾಗವಹಿಸಲಿದ್ದಾರೆ.

ಈ ಮೂವರು ಇದೇ ತಿಂಗಳ 18ರಿಂದ 22ರವರೆಗೆ ನಡೆಯುವ ಸ್ಟೇಜ್‌–3 ಟ್ರಯಲ್ಸ್‌ನಲ್ಲೂ ಪಾಲ್ಗೊಳ್ಳಲಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು