ಮಂಗಳವಾರ, ಆಗಸ್ಟ್ 9, 2022
23 °C
ಫೈನಲ್‌ನಲ್ಲಿ ಚೀನಾ ತೈಪೆ ಎದುರು ಸೋಲು

ಆರ್ಚರಿ ವಿಶ್ವಕಪ್‌ ಫೈನಲ್‌: ಬೆಳ್ಳಿ ಗೆದ್ದ ದೀಪಿಕಾ ಬಳಗ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪ್ಯಾರಿಸ್‌: ಭಾರತ ಮಹಿಳಾ ರಿಕರ್ವ್‌ ವಿಭಾಗದ ತಂಡವು ಆರ್ಚರಿ ವಿಶ್ವಕಪ್ ಸ್ಟೇಜ್ 3 ಟೂರ್ನಿಯಲ್ಲಿ ಬೆಳ್ಳಿ ಪದಕ ಜಯಿಸಿದೆ.

ದೀಪಿಕಾ ಕುಮಾರಿ, ಅಂಕಿತಾ ಭಕತ್‌ ಮತ್ತು ಸಿಮ್ರನ್‌ಜೀತ್ ಕೌರ್‌ ಅವರನ್ನೊಳಗೊಂಡ ತಂಡವು ಫೈನಲ್‌ನಲ್ಲಿ 1–5 ಪಾಯಿಂಟ್ಸ್‌ನಿಂದ ಚೀನಾ ತೈಪೆ ಆಟಗಾರ್ತಿಯರ ಎದುರು ಎಡವಿತು.

ಭಾನುವಾರ ಕೊನೆಗೊಂಡ ಟೂರ್ನಿಯಲ್ಲಿ ಭಾರತ ಒಟ್ಟು ಒಂದು ಚಿನ್ನ ಮತ್ತು ಎರಡು ಬೆಳ್ಳಿ ಪದಕಗಳನ್ನು ತನ್ನದಾಗಿಸಿಕೊಂಡಿತು.

ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ ಲಿ ಚೆನ್‌ ಯಿಂಗ್ ಅವರನ್ನೊಳಗೊಂಡ ಚೀನಾ ತೈಪೆ, ಮೂರು ಸೆಟ್‌ಗಳ ಹಣಾಹಣಿಯಲ್ಲಿ ಭಾರತದ ಆಟಗಾರ್ತಿಯರಿಗೆ ಸೋಲುಣಿಸಿತು.

ಮೊದಲ ಸೆಟ್‌ಅನ್ನು 53–56ರಿಂದ ಕೈಚೆಲ್ಲಿದ ದೀಪಿಕಾ ಬಳಗ ಎರಡನೇ ಸೆಟ್‌ಅನ್ನು 56–56ರಿಂದ ಸಮಬಲಗೊಳಿಸಿತು. ಆದರೆ ಸ್ಥಿರ ಪ್ರದರ್ಶನದ ಮೂಲಕ ಗಮನಸೆಳೆದ ಚೀನಾ ತೈಪೆ, ಮೂರನೇ ಸೆಟ್‌ನಲ್ಲಿ 56–53ರಿಂದ ಗೆದ್ದು ಚಿನ್ನದ ಪದಕಕ್ಕೆ ಮುತ್ತಿಟ್ಟಿತು.

ಟೋಕಿಯೊ ಒಲಿಂಪಿಕ್ಸ್ ಬಳಿಕ ಮಂಕಾಗಿದ್ದ ದೀಪಿಕಾ ಇಲ್ಲಿ ಬೆಳ್ಳಿ ಪದಕ ಜಯಿಸುವ ಮೂಲಕ ಲಯ ಕಂಡುಕೊಂಡರು. 

ಅಭಿಷೇಕ್‌ ವರ್ಮ ಮತ್ತು ಜ್ಯೋತಿ ಸುರೇಖಾ ವೆನ್ನಂ ಶನಿವಾರ ಕಾಂಪೌಂಡ್‌ ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು