ಶುಕ್ರವಾರ, ಮೇ 27, 2022
22 °C

ಆನ್‌ಲೈನ್ ಚೆಸ್‌: ಹರಿಕೃಷ್ಣಗೆ ಮುಕ್ತ ವಿಭಾಗದ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇಂಟರ್‌ನ್ಯಾಷನಲ್ ಮಾಸ್ಟರ್‌ ಹರಿಕೃಷ್ಣ ಎ.ರಾ ಅವರು ಯುನೈಟೆಡ್ ಕರ್ನಾಟಕ ಚೆಸ್ ಸಂಸ್ಥೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಚೆಸ್ ಸಂಸ್ಥೆ ಆಯೋಜಿಸಿದ್ದ ಆನ್‌ಲೈನ್ ರ‍್ಯಾಪಿಡ್ ಚೆಸ್ ಚಾಂಪಿಯನ್‌ಷಿಪ್‌ನ ಮುಕ್ತ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.

ಚೆನ್ನೈನ ಎಸ್‌ಆರ್‌ಎಂ ವಿಶ್ವವಿದ್ಯಾಲಯದ ಎರಡನೇ ವರ್ಷದ ಬಿಕಾಂ ವಿದ್ಯಾರ್ಥಿಯಾಗಿರುವ ಹರಿಕೃಷ್ಣ 10 ಸುತ್ತುಗಳಲ್ಲಿ 8.5 ಪಾಯಿಂಟ್ ಕಲೆ ಹಾಕಿದರು. ತಲಾ ಎಂಟು ಪಾಯಿಂಟ್ ಗಳಿಸಿದ ಕೌಸ್ತುವ್ ಕುಂದು, ಇಂಟರ್‌ನ್ಯಾಷನಲ್ ಮಾಸ್ಟರ್‌ ಗಿರಿನಾಥ್ ಪಿ.ಡಿ.ಎಸ್, ಅಶ್ವತ್ಥ್ ಆರ್‌, ಪೀಟರ್ ಆನಂದ್‌ ಹಾಗೂ ಅನದ್ಕತ್ ಕರ್ತವ್ಯ ಕ್ರಮವಾಗಿ ಎರಡರಿಂದ ಐದನೇ ಸ್ಥಾನಗಳಿಗೆ ಸಮಾಧಾನಪಟ್ಟುಕೊಂಡರು.

ಕೃಷ್ಣ ಮತ್ತು ಅರ್ಪಣ್ ದಾಸ್ ಅವರು ತಲಾ ಏಳೂವರೆ ಪಾಯಿಂಟ್‌ ಕಲೆ ಹಾಕಿದರು. 55 ವರ್ಷ ಮೇಲಿನವರಿಗಾಗಿ ಆಯೋಜಿಸಿದ್ದ ಬೆಸ್ಟ್ ವೆಟೆರನ್ ವಿಭಾಗದ ಪ್ರಶಸ್ತಿ ಸುರೇಶ್ ಬಾಬು ಅವರ ಪಾಲಾಯಿತು.

14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ವೃಷಾಂಕ್ ಚೌಹಾಣ್ (7.5 ಪಾಯಿಂಟ್‌) ಮೊದಲಿಗರಾದರು. ನಿಶೇಷ್ ಬಿ ಮತ್ತು ಅಭಿನವ್ ಬ್ಯಾನರ್ಜಿ ತಲಾ ಏಳು ಪಾಯಿಂಟ್‌ಗಳೊಂದಿಗೆ ಎರಡು ಹಾಗೂ ಮೂರನೇ ಸ್ಥಾನ ಗಳಿಸಿದರು. ಆರೂವರೆ ಪಾಯಿಂಟ್‌ನೊಂದಿಗೆ ಸಿದ್ಧಾರ್ಥ್ ಆರ್ ಮತ್ತು ಆರು ಪಾಯಿಂಟ್‌ನೊಂದಿಗೆ ಕ್ರಿಸ್ ಜಾನ್ಸನ್ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಗಳಿಸಿದರು.

ಬಾಲಕಿಯರ ವಿಭಾಗದಲ್ಲಿ ಫರ್ಹಾತ್ (6.5 ಪಾಯಿಂಟ್‌), ಸಂಜನಾ (5.5 ಪಾಯಿಂಟ್) ಧೃತಿ ಜೇಡ್, ಚಿನ್ಮಯಿ (ತಲಾ 5 ಪಾಯಿಂಟ್‌) ಮತ್ತು ಕಮಲಿನಿ ರಮೇಶ್ ಕ್ರಮವಾಗಿ ಒಂದರಿಂದ ಐದನೇ ಸ್ಥಾನ ಗಳಿಸಿದರು.

12 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ತೀರ್ಥ್ ಜಯೇಶ್ ಕುಮಾರ್ (7.5 ಪಾಯಿಂಟ್‌), ಅಭಯ್‌ ಹಿಪ್ಪರಗಿ, ಚರಿತ್ ಭಟ್ (ತಲಾ 6.5 ಪಾಯಿಂಟ್‌), ನಿರಂಜನ್ ವಾರಿಯರ್‌, ಆರವ್‌ ರೇ (ತಲಾ 6 ಪಾಯಿಂಟ್‌) ಕ್ರಮವಾಗಿ ಮೊದಲ ಐದು ಸ್ಥಾನ ಗಳಿಸಿದರು.

ಬಲಕಿಯರ ವಿಭಾಗದಲ್ಲಿ ಕೌಶಲ್ ಖುಷಿ (6.5 ಪಾಯಿಂಟ್‌), ಸಹನಾ ದೇವಿ (5.5 ಪಾಯಿಂಟ್‌) ಹಾಗೂ ಪೂಜ್ಯ (5 ಪಾಯಿಂಟ್‌) ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ತಮ್ಮದಾಗಿಸಿಕೊಂಡರು.

10 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಹೃಷಿಕೇಶ್ ಗಣಪತಿ, ಸುಬ್ರಹ್ಮಣ್ಯ (ತಲಾ 6.5 ಪಾಯಿಂಟ್), ಪ್ರಕೃತಿ ಸೋನಿ, ಸೈಯದ್ ಅಬ್ದುಲ್ ಖಾದರ್‌, ಪವನ್ ಪುತಿರನ್‌, ಅಶ್ವತ್ಥ್‌ರಾಜ್ ರಾಜೇಶ್‌ (ತಲಾ 6 ಪಾಯಿಂಟ್) ಕ್ರಮವಾಗಿ ಮೊದಲ ಐದು ಸ್ಥಾನ ತಮ್ಮದಾಗಿಸಿಕೊಂಡರು.

ಬಾಲಕಿಯರ ವಿಭಾಗದಲ್ಲಿ ಆರಭಿ ಮಧುಕರ್ (6 ಪಾಯಿಂಟ್), ಸ್ತುತಿ ಪ್ರದೀಪ್‌, ಲಕ್ಷ್ಮಿ ಸಹಸ್ರ (ತಲಾ 5.5 ಪಾಯಿಂಟ್‌) ತಾರುಣಿಕ ಮತ್ತು ಹೋಶಿಕಾ (ತಲಾ 5 ಪಾಯಿಂಟ್‌) ಕ್ರಮವಾಗಿ ಮೊದಲ ಐದು ಸ್ಥಾನ ಗಳಿಸಿದರು. 

8 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಸಾಯ್ ಯಶಸ್‌ (7 ಪಾಯಿಂಟ್‌), ಆರವ್‌ (6.5 ಪಾಯಿಂಟ್‌), ವೆಂಕಟ ನಾಗ್, ವಿಶ್ರುತ್‌, ಜೇಡನ್ ಸಚಿನ್ (6 ಪಾಯಿಂಟ್‌) ಕ್ರಮವಾಗಿ ಮೊದಲ ಐದು ಸ್ಥಾನ ಗಳಿಸಿದರು. ಬಾಲಕಿಯರ ವಿಭಾಗದಲ್ಲಿ ಶ್ರೇಯಾ (6 ಪಾಯಿಂಟ್‌), ದಿಶಿ, ಇಂದುಶೀತಲ (ತಲಾ 4.5 ಪಾಯಿಂಟ್‌), ಕೃತಿಕಾ ಹಾಗೂ ಸನಾ (3 ಪಾಯಿಂಟ್) ಕ್ರಮವಾಗಿ ಮೊದಲ ಐದು ಸ್ಥಾನಗಳನ್ನು ತಮ್ಮದಾಗಿಸಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು