ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕೋವಿಡ್‌ಗೆ ತುತ್ತಾದವರು ಎಷ್ಟು ಗೊತ್ತಾ?

Last Updated 9 ಆಗಸ್ಟ್ 2021, 15:45 IST
ಅಕ್ಷರ ಗಾತ್ರ

ಟೋಕಿಯೊ: ಒಲಿಂಪಿಕ್ಸ್‌ಗೆ ಸಂಬಂಧಿಸಿ 28 ಹೊಸ ಕೋವಿಡ್ ಪ್ರಕರಣಗಳು ಸೋಮವಾರ ಪತ್ತೆಯಾಗಿವೆ. ಆದರೆ ಇವರಲ್ಲಿ ಯಾರೂ ಕ್ರೀಡಾಪಟುಗಳು ಅಲ್ಲ. ಇದರೊಂದಿಗೆ ಒಲಿಂಪಿಕ್ಸ್‌ನಲ್ಲಿ ಭಾಗಿಯಾದವರಲ್ಲಿ ಕಾಣಿಸಿಕೊಂಡ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 458 ಆಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಸೋಂಕು ಕಾಣಿಸಿಕೊಂಡವರಲ್ಲಿ 13 ಮಂದಿ ಗುತ್ತಿಗೆದಾರರು ಆಗಿದ್ದು ಆರು ಮಂದಿ ಇತರ ಸಿಬ್ಬಂದಿ. ಆರು ಮಂದಿ ಸ್ವಯಂಸೇವಕರು, ಇಬ್ಬರು ಉದ್ಯೋಗಿ ಮತ್ತು ಒಬ್ಬರು ಮಾಧ್ಯಮ ಕಾರ್ಯಕರ್ತ. ಈ ಪೈಕಿ 21 ಮಂದಿ ಜಪಾನ್‌ ನಿವಾಸಿಗಳು ಎಂದು ಆಯೋಜಕರು ವಿವರಿಸಿದ್ದಾರೆ.

ಜನತೆಗೆ ಧನ್ಯವಾದ ಹೇಳಿದ ಪ್ರಧಾನಿ: ಕೋವಿಡ್ ಆತಂಕದ ನಡುವೆಯೂ ಒಲಿಂಪಿಕ್ ಕೂಟವನ್ನು ಸುಸೂತ್ರವಾಗಿ ಆಯೋಜಿಸಲು ನೆರವಾದ ಜನರಿಗೆ ಪ್ರಧಾನಿ ಯೊಶಿಹಿಡೆ ಸುಗಾ ಧನ್ಯವಾದ ಅರ್ಪಿಸಿದ್ದಾರೆ.

ದಾಖಲೆಯ 58 ಪದಕಗಳನ್ನು ಗೆದ್ದ ಜಪಾನ್‌ನ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದ ಅವರು ‘ಕೆಲವರು ಪದಕ ಗೆದ್ದಿದ್ದಾರೆ. ಕೆಲವರು ವಿಫಲರಾಗಿದ್ದಾರೆ. ಆದರೆ ಎಲ್ಲರೂ ಅಮೋಘ ಸಾಮರ್ಥ್ಯ ತೋರಿ ಮನ ಗೆದ್ದಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT