ಶುಕ್ರವಾರ, ಸೆಪ್ಟೆಂಬರ್ 24, 2021
24 °C
ಬೆಂಗಳೂರಿನಲ್ಲಿ ಜೂನಿಯರ್‌ ಮಹಿಳೆಯರ ರಾಷ್ಟ್ರೀಯ ತರಬೇತಿ ಶಿಬಿರ

ಸಂಭಾವ್ಯ ತಂಡ ಪ್ರಕಟಿಸಿದ ಹಾಕಿ ಇಂಡಿಯಾ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಜೂನಿಯರ್‌ ಮಹಿಳಾ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಹಾಕಿ ಇಂಡಿಯಾ (ಎಚ್‌ಐ) ಭಾನುವಾರ 33 ಸದಸ್ಯರ ಸಂಭಾವ್ಯ ತಂಡ ಪ್ರಕಟಿಸಿದೆ.

ಈ ಶಿಬಿರವು ಮೇ 6ರಿಂದ 24ರವರೆಗೆ ಬೆಂಗಳೂರಿನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ (ಸಾಯ್‌) ಆಯೋಜನೆಯಾಗಿದೆ.

ಶಿಬಿರದಲ್ಲಿ ಆಟಗಾರ್ತಿಯರಿಂದ ಮೂಡಿಬರುವ ಸಾಮರ್ಥ್ಯದ ಆಧಾರದಲ್ಲಿ 18 ಸದಸ್ಯರ ತಂಡವನ್ನು ಆಯ್ಕೆ ಮಾಡಲಾಗುತ್ತದೆ. ಈ ತಂಡವು ಮೇ 25ರಿಂದ ಜೂನ್‌ 7ರವರೆಗೆ ಐರ್ಲೆಂಡ್‌ನಲ್ಲಿ ನಡೆಯುವ ನಾಲ್ಕು ರಾಷ್ಟ್ರಗಳ ಆಹ್ವಾನಿತ ಹಾಕಿ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ.

ಈ ಟೂರ್ನಿಯಲ್ಲಿ ಆತಿಥೇಯ ಐರ್ಲೆಂಡ್‌, ಸ್ಕಾಟ್ಲೆಂಡ್‌ ಮತ್ತು ಕೆನಡಾ ತಂಡಗಳೂ ಭಾಗವಹಿಸಲಿವೆ.

‘ಆಟಗಾರ್ತಿಯರ ನಡುವೆ ಹೊಂದಾಣಿಕೆ ಮೂಡುವಂತೆ ಮಾಡುವುದು ಹಾಗೂ ಸಂದಿಗ್ಧ ಪರಿಸ್ಥಿತಿಯಲ್ಲಿ ಒತ್ತಡ ಮೀರಿ ನಿಂತು ಆಡುವುದು ಹೇಗೆ ಎಂಬುದನ್ನು ಕಲಿಸುವುದು  ಶಿಬಿರದ ಮುಖ್ಯ ಉದ್ದೇಶ. ಜೊತೆಗೆ ಫಿಟ್‌ನೆಸ್‌ ಕಾಪಾಡಿಕೊಳ್ಳುವ ಬಗ್ಗೆಯೂ ಅಗತ್ಯ ಮಾರ್ಗದರ್ಶನ ನೀಡಲಾಗುತ್ತದೆ’ ಎಂದು ಭಾರತ ತಂಡದ ಮುಖ್ಯ ಕೋಚ್‌ ಬಲ್ಜೀತ್‌ ಸಿಂಗ್‌ ಸೈನಿ ತಿಳಿಸಿದ್ದಾರೆ. 

ಸಂಭಾವ್ಯ ತಂಡ ಇಂತಿದೆ: ಗೋಲ್‌ಕೀಪರ್ಸ್‌: ರಷನ್‌ಪ್ರೀತ್‌ ಕೌರ್‌, ಬಿಚು ದೇವಿ ಖಾರಿಬಮ್‌ ಮತ್ತು ಖುಷ್ಬೂ.

ಡಿಫೆಂಡರ್ಸ್‌: ಪ್ರಿಯಾಂಕ, ಸಿಮ್ರನ್‌ ಸಿಂಗ್‌, ಮರಿನಾ ಲಾಲ್ರಂಘಾಕಿ, ಗಗನದೀಪ್‌ ಕೌರ್‌, ಇಶಿಕಾ ಚೌಧರಿ, ಜ್ಯೋತಿಕಾ ಕಾಲ್ಸಿ, ಸುಮಿತಾ, ಅಕ್ಷತಾ ಢೆಕಲೆ, ಉಷಾ ಮತ್ತು ಪರ್ಣೀತ್‌ ಕೌರ್‌.

ಮಿಡ್‌ಫೀಲ್ಡರ್ಸ್‌: ಬಲ್ಜೀತ್ ಕೌರ್‌, ಮರಿಯಾನ ಕುಜುರ್‌, ಚೇತನಾ, ಪ್ರಬ್ಲೀನ್‌ ಕೌರ್‌, ಪ್ರೀತಿ, ಅಜ್ಮಿನಾ ಕುಜುರ್‌, ವೈಷ್ಣವಿ ಫಾಲ್ಕೆ, ರೀತ್‌, ಬಲ್ಜಿಂದರ್‌ ಕೌರ್‌ ಮತ್ತು ಸುಷ್ಮಾ ಕುಮಾರಿ.

ಫಾರ್ವರ್ಡ್ಸ್‌: ಮುಮ್ತಾಜ್‌ ಖಾನ್‌, ಬ್ಯೂಟಿ ಡುಂಗ್‌ಡುಂಗ್‌, ಶರ್ಮಿಳಾ ದೇವಿ, ದೀಪಿಕಾ, ಲಾಲ್ರಿನ್‌ದಿಂಕಿ, ಜೀವನ್‌ ಕಿಶೋರಿ ಟೊಪ್ಪೊ, ರುತುಜಾ ಪಿಸಾಲ್‌, ಸಂಗೀತಾ ಕುಮಾರಿ, ಯೋಗಿತಾ ಬೋರಾ ಮತ್ತು ಅನು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು