ವಿಶ್ವ ಟಿಟಿ ಚಾಂಪಿಯನ್‌ಷಿಪ್: ಭಾರತಕ್ಕೆ ಮಣಿದ ಜರ್ಮನಿ

ಚೆಂಗ್ಡು, ಚೀನಾ (ಪಿಟಿಐ): ಜಿ.ಸತ್ಯನ್ ಅವರ ಅಮೋಘ ಆಟದ ನೆರವಿನಿಂದ ಭಾರತ ತಂಡದವರು ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಜರ್ಮನಿಗೆ ಆಘಾತ ನೀಡಿದರು.
ಭಾನುವಾರ ನಡೆದ ಪಂದ್ಯದಲ್ಲಿ ಭಾರತ, ವಿಶ್ವ ರ‍್ಯಾಂಕಿಂಗ್‌ನಲ್ಲಿ 2ನೇ ಸ್ಥಾನದಲ್ಲಿರುವ ಜರ್ಮನಿ ವಿರುದ್ಧ 3–1 ರಲ್ಲಿ ಗೆದ್ದಿತು. ಸತ್ಯನ್ ಅವರು ತಾವಾಡಿದ ಎರಡೂ ಸಿಂಗಲ್ಸ್ ಪಂದ್ಯಗಳಲ್ಲಿ ಗೆದ್ದರು.
ವಿಶ್ವ ರ‍್ಯಾಂಕಿಂಗ್‌ನಲ್ಲಿ 37ನೇ ಸ್ಥಾನದಲ್ಲಿರುವ ಸತ್ಯನ್, ಮೊದಲ ಸಿಂಗಲ್ಸ್‌ನಲ್ಲಿ 11-13, 4-11, 11-8, 11-4, 11-9 ರಲ್ಲಿ ವಿಶ್ವದ 36ನೇ ರ್‍ಯಾಂಕ್‌ನ ಆಟಗಾರ ಡುಡಾ ಬೆನೆಡಿಕ್ಟ್ ಅವರನ್ನು ಮಣಿಸಿದರು.
ತಮ್ಮ ಎರಡನೇ ಪಂದ್ಯದಲ್ಲಿ ಅವರು 10-12, 7-11, 11-8, 11-8, 11-9 ರಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ 9 ನೇ ಸ್ಥಾನದಲ್ಲಿರುವ ಡಾಂಗ್ ಕ್ಯು ಅವರನ್ನು ಸೋಲಿಸಿದರು. ಎರಡೂ ಸಿಂಗಲ್ಸ್‌ಗಳಲ್ಲಿ ಮೊದಲ ಎರಡು ಗೇಮ್‌ಗಳಲ್ಲಿ ಸೋಲು ಅನುಭವಿದ್ದ ಸತ್ಯನ್ ಆ ಬಳಿಕ ಮರುಹೋರಾಟ ನಡೆಸಿ ಗೆದ್ದರು.
ಎರಡನೇ ಸಿಂಗಲ್ಸ್‌ನಲ್ಲಿ ಹರ್ಮೀತ್ ದೇಸಾಯಿ ಅವರು ಡಾಂಗ್ ಕೈಯಲ್ಲಿ 7-11, 9-11, 13-11, 3-11 ರಲ್ಲಿ ಸೋತಿದ್ದರು. ಮಾನವ್ ಠಾಕರ್ 13-11, 6-11, 11-8, 12-10 ರಲ್ಲಿ ರಿಕಾರ್ಡೊ ವಾಲ್ಟೆರ್ ಎದುರು ಗೆದ್ದರು.
ಮಣಿಕಾ ಬಾತ್ರಾ ನೇತೃತ್ವದ ಭಾರತ ಮಹಿಳಾ ತಂಡ 3–0 ರಲ್ಲಿ ಜೆಕ್ ಗಣರಾಜ್ಯ ತಂಡವನ್ನು ಪರಾಭವಗೊಳಿಸಿತು.
ಮೊದಲ ಸಿಂಗಲ್ಸ್‌ನಲ್ಲಿ ಮಣಿಕಾ 11-6, 11-6, 8-11, 12-10 ರಲ್ಲಿ ಹನಾ ಮಟೆಲೊವಾ ವಿರುದ್ಧ ಗೆದ್ದರು. ಎರಡನೇ ಸಿಂಗಲ್ಸ್‌ನಲ್ಲಿ ಶ್ರೀಜಾ ಅಕುಲಾ 3–0 ರಲ್ಲಿ ಮರ್ಕೆಟಾ ಸೆವ್ಚಿಕೊವಾ ಅವರನ್ನು ಮಣಿಸಿದರೆ, ಮೂರನೇ ಸಿಂಗಲ್ಸ್‌ನಲ್ಲಿ ದಿಯಾ ಚಿತಾಳೆ 11-13, 15-13, 12-10, 14-12 ರಲ್ಲಿ ಕ್ಯಾಥರಿನಾ ಟೊಮನೊವ್‌ಸ್ಕ ಎದುರು ಜಯಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.