ಸೋಮವಾರ, ಆಗಸ್ಟ್ 8, 2022
21 °C
ಭಾರತ ಮಹಿಳಾ ತಂಡದಲ್ಲಿ ಏಕೈಕ ಗೋಲ್‌ಕೀಪರ್ ಸವಿತಾ

ಟೋಕಿಯೊ ಒಲಿಂಪಿಕ್ಸ್‌ ಹಾಕಿ: ರಾಣಿ ರಾಂಪಾಲ್ ಬಳಗದಲ್ಲಿ ಎಂಟು ಹೊಸಮುಖ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಯುವ ಮತ್ತು ಅನುಭವಿ ಆಟಗಾರ್ತಿಯರನ್ನು ಒಳಗೊಂಡ ಹಾಕಿ ತಂಡವನ್ನು ಟೋಕಿಯೊ ಒಲಿಂಪಿಕ್ಸ್‌ಗೆ ಭಾರತ ಗುರುವಾರ ಪ್ರಕಟಿಸಿದೆ. ಎಂಟು ಮಂದಿ ಇದೇ ಮೊದಲ ಬಾರಿ ಒಲಿಂಪಿಕ್ಸ್‌ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಉಳಿದ ಎಂಟು ಮಂದಿ 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಆಡಿದ ಅನುಭವ ಹೊಂದಿದ್ದಾರೆ.

ಸ್ಟ್ರೈಕರ್ ರಾಣಿ ರಾಂಪಾಲ್ ನೇತೃತ್ವದ ತಂಡದಲ್ಲಿ ಡ್ರ್ಯಾಗ್ ಫ್ಲಿಕ್ಕರ್ ಗುರ್ಜೀತ್ ಕೌರ್, ಉದಿತಾ, ನಿಶಾ, ನೇಹಾ, ನವನೀತ್ ಕೌರ್, ಶರ್ಮಿಳಾ ದೇವಿ ಮತ್ತು ಲಾಲ್‌ರೆಮ್ಸಿಯಾಮಿ ಸಲಿಮಾ ಟೆಟೆ ಚೊಚ್ಚಲ ಒಲಿಂಪಿಕ್ಸ್‌ಗೆ ಸಜ್ಜಾಗಿದ್ದಾರೆ. ಈ ಪೈಕಿ ಲಾಲ್‌ರೆಮ್ಸಿಯಾಮಿ ಭಾರತ ತಂಡಕ್ಕೆ ಆಯ್ಕೆಯಾದ ಮಿಜೋರಾಂನ ಮೊದಲ ಆಟಗಾರ್ತಿಯಾಗಿದ್ದಾರೆ. ಸಲೀಮಾ ಟೆಟೆ 2018ರ ಯೂತ್ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಆಗ ತಂಡ ಬೆಳ್ಳಿ ಪದಕ ಗೆದ್ದುಕೊಂಡಿತ್ತು.

ಗೋಲ್‌ಕೀಪರ್ ಸವಿತಾ ಮತ್ತು ನಾಯಕಿ ರಾಣಿ ಒಳಗೊಂಡ ಅನುಭವಿ ಎಂಟು ಆಟಗಾರ್ತಿಯರು ಈ ವರೆಗೆ ಒಟ್ಟಾರೆ 1,492 ಪಂದ್ಯಗಳನ್ನು ಆಡಿದ್ದಾರೆ. ಭಾರತ ಮಹಿಳಾ ತಂಡ ಮೂರನೇ ಬಾರಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿದೆ. 1980ರ ನಂತರ ತಂಡ 2016ರಲ್ಲಿ ಅರ್ಹತೆ ಪಡೆದುಕೊಂಡಿತ್ತು. ಆ ವರ್ಷ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪ್ರಶಸ್ತಿ ಗೆದ್ದಿದ್ದ ತಂಡ 2017ರ ಏಷ್ಯಾಕಪ್‌ನಲ್ಲೂ ಚಾಂಪಿಯನ್ ಆಗಿತ್ತು. 2018ರ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗಳಿಸಿತ್ತು.  2018ರಲ್ಲಿ ಮಹಿಳೆಯರ ವಿಶ್ವಕಪ್ ಟೂರ್ನಿಗೆ ಮೊದಲ ಬಾರಿ ಅರ್ಹತೆ ಗಳಿಸಿತ್ತು. 

ತಂಡದ ಆಟಗಾರ್ತಿಯರು ಸದ್ಯ ಬೆಂಗಳೂರಿನಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರದ ದಕ್ಷಿಣ ಕೇಂದ್ರದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. 

ತಂಡ: ಗೋಲ್‌ಕೀಪರ್: ಸವಿತಾ; ಡಿಫೆಂಡರ್‌ಗಳು: ದೀಪ್ ಗ್ರೇಸ್ ಎಕ್ಕಾ, ನಿಕ್ಕಿ ಪ್ರಧಾನ್‌, ಗುರ್ಜೀತ್ ಕೌರ್‌, ಉದಿತಾ; ಮಿಡ್‌ಫೀಲ್ಡರ್‌ಗಳು: ನಿಶಾ, ನೇಹಾ, ಸುಶೀಲಾ ಚಾನು, ಮೋನಿಕಾ, ನವಜ್ಯೋತ್ ಕೌರ್‌, ಸಲಿಮಾ ಟೆಟೆ; ಫಾರ್ವರ್ಡರ್‌ಗಳು: ರಾಣಿ ರಾಂಪಾಲ್‌, ನವನೀತ್‌ ಕೌರ್‌, ಲಾಲ್‌ರೆಮ್ಸಿಯಾಮಿ, ವಂದನಾ ಕಟಾರಿಯಾ, ಶರ್ಮಿಳಾ ದೇವಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು