ಬುಧವಾರ, ಅಕ್ಟೋಬರ್ 5, 2022
26 °C

Commonwealth Games: ಪುರುಷರ ಹಾಕಿಯಲ್ಲಿ ಬೆಳ್ಳಿಗೆ ತೃಪ್ತಿಪಟ್ಟ ಭಾರತ

ಪಿಟಿಐ Updated:

ಅಕ್ಷರ ಗಾತ್ರ : | |

ಬರ್ಮಿಂಗ್‌ಹ್ಯಾಂ: ಕಾಮನ್‌ವೆಲ್ತ್ ಕ್ರೀಡಾಕೂಟದ ಪುರುಷರ ಹಾಕಿ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 0–7 ಅಂತರದ ಸೋಲನುಭವಿಸುವ ಮೂಲಕ ಭಾರತ ತಂಡವು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.

ಸೋಮವಾರ ನಡೆದ ಫೈನಲ್ ಪಂದ್ಯವು ಬಹುತೇಕ ಏಕಮುಖೀಯವಾಗಿಯೇ ಸಾಗಿತು. ಆಸ್ಟ್ರೇಲಿಯಾ ಪರ ಬ್ಲೇಕ್ ಗೋವರ್ಸ್, ನಾಥನ್ ಎಫ್ರಾಮ್ಸ್, ಜಾಕೋಬ್ ಆ್ಯಂಡರ್ಸನ್, ಟಾಮ್ ವಿಕ್‌ಹ್ಯಾಮ್ ಹಾಗೂ ಫಿನ್ ಒಗಿಲ್ವಿ ಗೋಲು ಬಾರಿಸಿದರು.

ಭಾರತದ ಆಟಗಾರರು ದಿಟ್ಟ ಹೋರಾಟ ನಡೆಸುವಲ್ಲಿ ವಿಫಲರಾದರು. ಮೊದಲ ಕ್ವಾರ್ಟರ್‌ನಲ್ಲೇ ಆಸ್ಟ್ರೇಲಿಯಾ ಮೊದಲ ಗೋಲು ಬಾರಿಸಿತ್ತು. ಅಂತಿಮ ಸುತ್ತಿನ ವೇಳೆಗೆ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತ್ತು.

ಕಾಮನ್‌ವೆಲ್ತ್‌ ಕ್ರೀಡಾಕೂಟದ ಮಹಿಳಾ ಹಾಕಿ ಸ್ಪರ್ಧೆಯಲ್ಲಿ ಭಾರತ ತಂಡ ಭಾನುವಾರ ಕಂಚಿನ ಪದಕ ಜಯಿಸಿತ್ತು. ಹಾಲಿ ಚಾಂಪಿಯನ್‌ ನ್ಯೂಜಿಲೆಂಡ್‌ ತಂಡವನ್ನು ಮಣಿಸುವ ಮೂಲಕ ಭಾರತದ ವನಿತೆಯರು ಈ ಸಾಧನೆ ಮಾಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು