ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್‌: ಅರ್ಜುನ್‌ ಎರಿಗೈಸಿಗೆ ಪ್ರಶಸ್ತಿ

Last Updated 25 ಆಗಸ್ಟ್ 2022, 13:38 IST
ಅಕ್ಷರ ಗಾತ್ರ

ಅಬುಧಾಬಿ (ಪಿಟಿಐ): ಭಾರತದ ಗ್ರ್ಯಾಂಡ್‌ಮಾಸ್ಟರ್‌ ಅರ್ಜುನ್‌ ಎರಿಗೈಸಿ ಅವರು 28ನೇ ಅಬುಧಾಬಿ ಮಾಸ್ಟರ್ಸ್‌ ಚೆಸ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದರು.

ಗುರುವಾರ ನಡೆದ ಒಂಬತ್ತನೇ ಹಾಗೂ ಕೊನೆಯ ಸುತ್ತಿನಲ್ಲಿ 18 ವರ್ಷದ ಅರ್ಜುನ್‌ ಅವರು ಸ್ಪೇನ್‌ನ ಡೇವಿಡ್‌ ಆ್ಯಂಟನ್‌ ಗ್ಯುಜರೊ ಅವರನ್ನು ಮಣಿಸಿದರು. ಒಟ್ಟು 7.5 ಪಾಯಿಂಟ್‌ಗಳೊಂದಿಗೆ ಅವರು ಅಗ್ರಸ್ಥಾನ ಪಡೆದರು.

ಒಂಬತ್ತು ಸುತ್ತುಗಳಲ್ಲಿ ಅವರು ಅಜೇಯರಾಗಿ ಉಳಿದುಕೊಂಡರು. ಆರು ಪಂದ್ಯಗಳನ್ನು ಗೆದ್ದುಕೊಂಡರೆ, ಮೂರನ್ನು ಡ್ರಾ ಮಾಡಿಕೊಂಡರು.

7 ಪಾಯಿಂಟ್‌ ಕಲೆಹಾಕಿದ ಉಜ್ಬೆಕಿಸ್ತಾನದ ಜಾವೊಖಿರ್ ಸಿಂದ್ರೊವ್ ಎರಡನೇ ಸ್ಥಾನ ಪಡೆದರೆ, ನೆದರ್ಲೆಂಡ್ಸ್‌ನ ಜೋರ್ಡೆನ್ ವಾನ್‌ ಫೊರೀಸ್ಟ್‌ ಮೂರನೇ ಸ್ಥಾನ ಗಳಿಸಿದರು.

ಅರ್ಜುನ್‌ ಅವರು ಭಾರತದ ರೋಹಿತ್‌ ಕೃಷ್ಣ, ದೀಪ್‌ ಸೇನ್‌ಗುಪ್ತ, ರೌನಕ್‌ ಸಾಧ್ವಾನಿ, ಚೀನಾದ ವಾಂಗ್‌ ಹವೊ, ಸರ್ಬಿಯದ ಅಲೆಕ್ಸಾಂಡರ್‌ ಐಂಡ್‌ಜಿಕ್ ಮತ್ತು ಗ್ಯುಜರೊ ವಿರುದ್ಧ ಗೆದ್ದರೆ, ರಷ್ಯಾದ ಎವ್ಗೆನಿ ಟೊಮಶೆವ್ಕಿ, ವಾನ್‌ ಫೊರೀಸ್ಟ್‌ ಮತ್ತು ರೇ ರಾಬ್ಸನ್‌ ಎದುರು ಡ್ರಾ ಮಾಡಿಕೊಂಡರು.

ಕಣದಲ್ಲಿದ್ದ ಭಾರತದ ಇತರ ಸ್ಪರ್ಧಿಗಳು ಉತ್ತಮ ಪ್ರದರ್ಶನ ನೀಡಿ ಅಗ್ರ ಹತ್ತರೊಳಗಿನ ಸ್ಥಾನದಲ್ಲಿ ಕಾಣಿಸಿಕೊಂಡರು. ನಿಹಾಲ್‌ ಸರಿನ್‌ ಆರನೇ ಸ್ಥಾನ ಪಡೆದರೆ ಎಸ್‌.ಪಿ.ಸೇತರಾಮನ್, ಆದಿತ್ಯ ಸಮಂತ್, ಕಾರ್ತಿಕೇಯನ್‌ ಮುರಳಿ ಮತ್ತು ಆರ್ಯನ್‌ ಚೋಪ್ರಾ ಅವರು ಕ್ರಮವಾಗಿ ಏಳರಿಂದ 10ರ ವರೆಗಿನ ಸ್ಥಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT