ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸಿಂಗ್‌: 10 ಪದಕದೊಂದಿಗೆ ಭಾರತಕ್ಕೆ ಅಗ್ರ ಸ್ಥಾನ

ಮಾಂಟೆನಿಗ್ರೊದಲ್ಲಿ ನಡೆದ ಯೂತ್ ಮಹಿಳಾ ವಿಭಾಗದ ಬಾಕ್ಸಿಂಗ್‌: ಬೇಬಿರೋಜಿಸನ, ಅರುಂಧತಿಗೆ ಚಿನ್ನ
Last Updated 22 ಫೆಬ್ರುವರಿ 2021, 11:13 IST
ಅಕ್ಷರ ಗಾತ್ರ

ನವದೆಹಲಿ: ಬೇಬಿರೋಜಿಸಾನ ಚಾನು ಮತ್ತು ಅರುಂಧತಿ ಚೌಧರಿ ಉರೋಪ್‌ನ ಮಾಂಟೆನಿಗ್ರೊದಲ್ಲಿ ನಡೆದ ಯೂತ್ ಮಹಿಳೆಯರ ಅಡ್ರಿಯಾಟಿಕ್ ಪರ್ಲ್‌ ಬಾಕ್ಸಿಂಗ್ ಟೂರ್ನಿಯಲ್ಲಿ ಸೋಮವಾರ ಚಿನ್ನದ ಪದಕ ಗಳಿಸಿದರು. ಇದರೊಂದಿಗೆ ಭಾರತ ಐದು ಚಿನ್ನದೊಂದಿಗೆ ಒಟ್ಟು 10 ಪದಕಗಳನ್ನು ಗಳಿಸಿ ಅಗ್ರಸ್ಥಾನ ತನ್ನದಾಗಿಸಿಕೊಂಡಿತು.

ಬೇಬಿರೋಜಿಸಾನ ಚಾನು 51 ಕೆಜಿ ವಿಭಾಗದಲ್ಲಿ ಮತ್ತು ಅರುಂಧತಿ 69 ಕೆಜಿ ವಿಭಾಗದಲ್ಲಿ ಮೊದಲಿಗರಾದರು. ಲಕ್ಕಿ ರಾಣ 64 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಇದರೊಂದಿಗೆ ಐದು ಚಿನ್ನ, ಮೂರು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳು ಭಾರತದ ಪಾಲಾದವು. ಎರಡು ಚಿನ್ನ ಗೆದ್ದ ಉಜ್ಬೆಕಿಸ್ತಾನ ಮತ್ತು ಒಂದು ಚಿನ್ನ ಗಳಿಸಿದ ಜೆಕ್ ಗಣರಾಜ್ಯ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದವು.

ಖೇಲೊ ಇಂಡಿಯಾ ಕ್ರೀಡಾಕೂಟದಲ್ಲಿ ಮೂರು ಬಾರಿ ಚಿನ್ನ ಗಳಿಸಿರುವ ಅರುಂಧತಿ ಭಾನುವಾರ ರಾತ್ರಿ ನಡೆದ ಬೌಟ್‌ನಲ್ಲಿ ಉಕ್ರೇನ್‌ನ ಮರಿಯಾನೊ ಸ್ಟೊಯ್ಕೊ ವಿರುದ್ಧ 5–0ಅಂತರದಿಂದ ಗೆದ್ದರು. ಎಂ.ಸಿ.ಮೇರಿ ಕೋಮ್ ಅವರ ಇಂಫಾಲದಲ್ಲಿರುವ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಚಾನು ಏಷ್ಯನ್ ಜೂನಿಯರ್ ವಿಭಾಗದ ಚಾಂಪಿಯನ್ ಉಜ್ಬೆಕಿಸ್ತಾನದ ಸಬೀನಾ ಬಬುಕುಲೋವ ಅವರನ್ನು 3–2ರಲ್ಲಿ ಮಣಿಸಿದರು. ಫಿನ್ಲ್ಯಾಂಡ್‌ನ ಲಿಯಾ ಪುಕಿಲಾ ಎದುರು ಲಕ್ಕಿ ರಾಣಾ 0–5ರಲ್ಲಿ ಸೋಲನುಭವಿಸಿದರು.

ಟೂರ್ನಿಯ ಆರಂಭದಲ್ಲಿ ಭಾರತದ ಅಲ್ಫಿಯಾ (81+ ಕೆಜಿ), ವಿಂಕಾ (60 ಕೆಜಿ) ಮತ್ತು ಸನಮಾಚ ಚಾನು (75 ಕೆಜಿ) ಚಿನ್ನ ಗಳಿಸಿದ್ದರು. ವಿಂಕಾ ಅವರು ಟೂರ್ನಿಯ ಅತ್ಯುತ್ತಮ ಬಾಕ್ಸರ್ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಪುರುಷರ ವಿಭಾಗದಲ್ಲಿ ಎರಡು ಪದಕಗಳು ಲಭಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT