ಬುಧವಾರ, ಜೂನ್ 29, 2022
24 °C

ಎಫ್‌ಐಎಚ್‌ ಪ್ರೊ ಲೀಗ್ ಹಾಕಿ: ಭಾರತಕ್ಕೆ ಮೂರನೇ ಸ್ಥಾನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ರಾಟರ್‌ಡ್ಯಾಮ್‌: ವಂದನಾ ಕಟಾರಿಯಾ ಗಳಿಸಿದ ಎರಡು ಗೋಲುಗಳ ಬಲದಿಂದ ಭಾರತ ಮಹಿಳಾ ತಂಡವು ಎರಡನೇ ಲೆಗ್ ಪಂದ್ಯದಲ್ಲಿಯೂ ಅಮೆರಿಕ ತಂಡವನ್ನು 4–0ಯಿಂದ ಮಣಿಸಿತು. ಇದರೊಂದಿಗೆ ಮೊದಲ ಬಾರಿ ಕಣಕ್ಕಿಳಿದಿದ್ದ ಎಫ್‌ಐಎಚ್‌ ಪ್ರೊ ಲೀಗ್‌ನಲ್ಲಿ ಮೂರನೇ ಸ್ಥಾನ ಗಳಿಸಿತು.

ಮಂಗಳವಾರ ನಡೆದ ಮೊದಲ ಲೆಗ್ ಪಂದ್ಯದಲ್ಲಿ ಭಾರತ 4–2ರಿಂದ ಅಮೆರಿಕವನ್ನು ಸೋಲಿಸಿತ್ತು.

ಬುಧವಾರದ ಪಂದ್ಯದಲ್ಲಿ ವಂದನಾ 39 ಮತ್ತು 54ನೇ ನಿಮಿಷ, ಸೋನಿಕಾ (54ನೇ ನಿ.) ಮತ್ತು ಸಂಗೀತಾ ಕುಮಾರಿ (58ನೇ ನಿ.) ಗೋಲು ಗಳಿಸಿದರು.

ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ 23 ವರ್ಷದೊಳಗಿನ ಮಹಿಳಾ ತಂಡವು 3–0ಯಿಂದ ಉಕ್ರೇನ್‌ಗೆ ಸೋಲುಣಿಸಿತು.

ಸ್ಕ್ವಾಷರ್ಸ್, ಡೆವಿಲ್ಸ್ ಜಯಭೇರಿ:

ಬೆಂಗಳೂರು: ಫ್ಲೈಯಿಂಗ್ ಡೆವಿಲ್ಸ್ ತಂಡವು ಬೆಂಗಳೂರು ಸ್ಕ್ವಾಷ್‌ ಲೀಗ್‌ನಲ್ಲಿ ಗೆಲುವಿನ ಖಾತೆ ತೆರೆಯಿತು. ಬುಧವಾರ ನಡೆದ ಪಂದ್ಯದಲ್ಲಿ 4–3ರಿಂದ ಸ್ಕಾವ್ ಸ್ಟ್ರೈಕರ್ಸ್ ಎದುರು ಗೆದ್ದಿತು. ಮತ್ತೊಂದು ಪಂದ್ಯದಲ್ಲಿ ಸ್ಮ್ಯಾಷಿಂಗ್ ಸ್ಕ್ವಾಷರ್ಸ್ 4–3ರಿಂದ ರೇಜಿಂಗ್ ರ‍್ಯಾಕೆಟ್ಸ್ ವಿರುದ್ಧ ಜಯಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು