ಮೆರಾಜ್‌ ಫೈನಲ್‌ ಕನಸು ಭಗ್ನ

ಶುಕ್ರವಾರ, ಮೇ 24, 2019
29 °C
ಶಾಟ್‌ಗನ್‌ ವಿಶ್ವಕಪ್‌ನಲ್ಲಿ ಗುರಿ ತಪ್ಪಿದ ಶೂಟರ್‌ಗಳು

ಮೆರಾಜ್‌ ಫೈನಲ್‌ ಕನಸು ಭಗ್ನ

Published:
Updated:

ಚಾಂಗ್ವಾನ್‌, ದಕ್ಷಿಣ ಕೊರಿಯ: ಅನುಭವಿ ಶೂಟರ್‌ ಭಾರತದ ಮೆರಾಜ್‌ ಅಹ್ಮದ್‌ ಖಾನ್‌ ಶಾಟ್‌ಗನ್‌ ವಿಶ್ವಕಪ್‌ನಲ್ಲಿ ಗುರಿ ತಪ್ಪಿದ್ದಾರೆ. ಸ್ಕೀಟ್‌ ವಿಭಾಗದ ಅರ್ಹತಾ ಸುತ್ತಿನಲ್ಲಿ 125ಕ್ಕೆ 121 ಅಂಕ ಗಳಿಸುವ ಮೂಲಕ ಫೈನಲ್ಸ್‌ ಪ್ರವೇಶಿಸುವಲ್ಲಿ ಎಡವಿದರು.

ಅಂತರರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ಸ್‌ ಫೆಡರೇಷನ್‌ (ಐಎಸ್‌ ಎಸ್‌ಎಫ್‌) ಆಯೋಜಿಸುವ ವಿಶ್ವಕಪ್‌ ಹಂತದ ಸ್ಕೀಟ್‌ ವಿಭಾಗದಲ್ಲಿ ಚಿನ್ನ ಗೆದ್ದಿ ರುವ ಏಕೈಕ ಭಾರತೀಯನಾಗಿರುವ ಮೆರಾಜ್‌, 11ನೇ ಸ್ಥಾನ ಗಳಿಸಿದರು.

ಎರಡು ಬಾರಿಯ ಒಲಿಂಪಿಕ್‌ ಚಾಂಪಿಯನ್‌ ಅಮೆರಿಕದ ವಿನ್ಸೆಂಟ್‌ ಹಾನ್‌ಕಾಕ್‌ ಈ ವಿಭಾಗದ ಚಿನ್ನ ಗೆದ್ದರು. ಭಾರತದ  ಶೀರಾಜ್‌ ಶೇಕ್‌ 33ನೇ ಸ್ಥಾನ ಗಳಿಸಿದರು. ಸೋಮವಾರದಿಂದ ಟ್ರ್ಯಾಪ್‌ ಶೂಟಿಂಗ್‌ ಸ್ಪರ್ಧೆಗಳು ಆರಂಭವಾಗಲಿವೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !