ಪ್ಯಾರಿಸ್: ಜಮೈಕಾದ ವೇಗದ ಓಟಗಾರ ಅಸಾಫ ಪೋವೆಲ್ ಅವರು ತಮ್ಮ 40ನೇ ವರ್ಷದ ಜನ್ಮ ದಿನದಂದು ನಿವೃತ್ತಿ ಘೋಷಿಸಿದ್ದಾರೆ.
ಪೋವೆಲ್ ಅವರು 2005ರ ಜೂನ್‌ನಲ್ಲಿ 100 ಮೀ. ಓಟವನ್ನು ಕೇವಲ 9.77 ಸೆಕೆಂಡ್‌ಗಳಲ್ಲಿ ಕ್ರಮಿಸಿ ವಿಶ್ವದಾಖಲೆ ಬರೆದಿದ್ದರು. ನಂತರ ಆ ದಾಖಲೆಯನ್ನು 9.72 ಸೆಕೆಂಡ್‌ಗೆ ಉತ್ತಮಪಡಿಸಿಕೊಂಡಿದ್ದರು.
ನಿವೃತ್ತಿ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಪೋವೆಲ್, 'ಚಾಪ್ಟರ್ 40 ಮತ್ತು ವಿದಾಯ, ಬದುಕಿನ ಹೊಸ ಹಂತ. ನಾನು ಹೇಳಿದಂತೆ ಕ್ರೀಡೆಗೆ ವಿದಾಯ ಹೇಳುತ್ತಿದ್ದೇನೆ. ವೃತ್ತಿಬದುಕಿನುದ್ದಕ್ಕೂ ಹಾಗೂ ಈಗಲೂನನ್ನ ಪರವಾಗಿ ನಿಲ್ಲುವ ಅಭಿಮಾನಿಗಳಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಅವಕಾಶ ಕಲ್ಪಿಸಿದ ಕ್ರೀಡೆಗೆ ಆಭಾರಿಯಾಗಿರುತ್ತೇನೆ' ಎಂದು ಬರೆದುಕೊಂಡಿದ್ದಾರೆ.
ಸದ್ಯ 100 ಮೀ. ಓಟದಲ್ಲಿ ವಿಶ್ವದಾಖಲೆ ಇರುವುದು ಜಮೈಕಾದವರೇ ಆದ ಉಸೇನ್ ಬೋಲ್ಟ್ ಅವರ ಹೆಸರಿನಲ್ಲಿ. ಅವರು 2009ರಲ್ಲಿ 100 ಮೀ. ಓಟವನ್ನು ಕೇವಲ 9.58 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದರು.
ವೇಗದ ಓಟದಲ್ಲಿ ಬೋಲ್ಟ್ ಪ್ರಾಬಲ್ಯ ಮೆರೆದ ನಂತರ ಪೋವೆಲ್ ಒಲಿಂಪಿಕ್ಸ್‌ನಲ್ಲಾಗಲೀ, ವಿಶ್ವಚಾಂಪಿಯನ್‌ಷಿಪ್‌ನಲ್ಲಾಗಲೀ ವೈಯಕ್ತಿಕ ವಿಭಾಗದಲ್ಲಿ ಒಮ್ಮೆಯೂ ಚೆನ್ನದ ಪದಕ ಗೆದ್ದಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.