ಶನಿವಾರ, ಜುಲೈ 31, 2021
20 °C
ಪ್ರವಾಸ ನಿರ್ಬಂಧದ ನಡುವೆಯೂ ಒಲಿಂಪಿಕ್ಸ್‌ ನಿಗದಿಯಂತೆ ನಡೆಯಲಿದೆ ಎಂಬ ಅಭಯ

ಒಲಿಂಪಿಕ್ಸ್‌: ಅಮೆರಿಕ ಎಚ್ಚರಿಕೆಗೆ ಜಗ್ಗದ ಜಪಾನ್

ಎಎಫ್‌ಪಿ/ರಾಯಿಟರ್ಸ್‌/ಎಪಿ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಕೋವಿಡ್–19ರ ಆತಂಕದಿಂದ ಅಮೆರಿಕದ ಪ್ರಯಾಣ ನಿರ್ಬಂಧಗಳ ಎಚ್ಚರಿಕೆಗೆ ಜಗ್ಗದ ಜಪಾನ್ ಸರ್ಕಾರ ಒಲಿಂಪಿಕ್ಸ್‌ ಕೂಟ ಯಾವುದೇ ಕಾರಣಕ್ಕೂ ರದ್ದಾಗುವುದಿಲ್ಲ ಎಂದು ಮಂಗಳವಾರ ಹೇಳಿದೆ. ಒಲಿಂಪಿಕ್ಸ್ ಆಯೋಜಕರೂ ಇದಕ್ಕೆ ದನಿಗೂಡಿಸಿದ್ದಾರೆ.

ಜಪಾನ್ ಪ್ರವಾಸ ಕೈಗೊಳ್ಳುವುದರಿಂದ ಆದಷ್ಟೂ ದೂರ ಇರುವಂತೆ ಅಮೆರಿಕ ತನ್ನ ಪ್ರಜೆಗಳಿಗೆ ಸೋಮವಾರ ಸೂಚಿಸಿತ್ತು. ಒಲಿಂಪಿಕ್ಸ್ ಕೂಟದ ಉದ್ಘಾಟನೆಗೆ ಕೆಲವೇ ವಾರಗಳು ಬಾಕಿ ಇರುವಾಗ ನೀಡಿರುವ ಈ ಎಚ್ಚರಿಕೆ ಕುತೂಹಲ ಕೆರಳಿಸಿತ್ತು.

‘ಪ್ರಯಾಣ ನಿರ್ಬಂಧ ಹೇರಿದ್ದರೂ ಒಲಿಂಪಿಕ್ಸ್‌ಗೆ ಅಮೆರಿಕದ ಬೆಂಬಲ ಮುಂದುವರಿಯಲಿದೆ.  ಕ್ರೀಡಾಪಟುಗಳಿಗೆ ಈ ನಿರ್ಬಂಧ ಬಾಧಕವಾಗುವುದಿಲ್ಲ ಎಂಬ ವಿಸ್ವಾಸವಿದೆ’ ಎಂದು ಜಪಾನ್ ಸರ್ಕಾರದ ವಕ್ತಾರ ಕಸುನೊಬು ಕಾಟೊ ಹೇಳಿದ್ದಾರೆ.

ಈ ನಡುವೆ ಒಲಿಂಪಿಕ್ಸ್‌ ಸುರಕ್ಷಿತ ವಾತಾವರಣದಲ್ಲಿ ನಡೆಯುವ ವಿಶ್ವಾಸವಿದೆ ಎಂದು ಅಮೆರಿಕ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಸಮಿತಿ ಹೇಳಿದೆ. ಪಾನ್ ಅಮೇರಿಕ ಕ್ರೀಡಾ ಸಂಘ, ಮೆಕ್ಸಿಕೊ ಕಾನ್ಸುಲೇಟ್ ಮತ್ತು ಮರ್ಸೋನಿ ಫೌಂಡೇಷನ್ ಆಶ್ರಯದಲ್ಲಿ ಮಿಯಾಮಿಯಲ್ಲಿ ಅಥ್ಲೀಟ್‌ಗಳಿಗೆ ಲಸಿಕೆ ನೀಡುವ ಕಾರ್ಯ ಆರಂಭವಾಗಿದೆ.

ಆಸ್ಟ್ರೇಲಿಯಾ: ಲಸಿಕೆ ಕಡ್ಡಾಯ
ಟೋಕಿಯೊ ಪ್ಯಾರಾಲಿಂಪಿಕ್ಸ್‌ಗೆ ತೆರಳುವವರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಆಸ್ಟ್ರೇಲಿಯಾ ಸೂಚಿಸಿದೆ. ಪ್ಯಾರಾಲಿಂಪಿಕ್ ಕೂಟ ಆಗಸ್ಟ್ 24ರಿಂದ ಸೆಪ್ಟೆಂಬರ್ 5ರ ವರೆಗೆ ನಡೆಯಲಿದೆ. ಲಸಿಕೆ ಹಾಕಿಸಿಕೊಳ್ಳುವಂತೆ ಅಂತರರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿ ಕೂಡ ಸೂಚಿಸಿದೆ. ಆದರೆ ಕಡ್ಡಾಯ ಮಾಡಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು